'ದಿ ವಿಲನ್​' ಟೀಸರ್​ ನೋಡಿ ರಾಮ್​ಗೋಪಾಲ್​ ವರ್ಮಾ ಅಂದಿದ್ದೇನು ಗೊತ್ತಾ?

news18
Updated:July 7, 2018, 1:43 PM IST
'ದಿ ವಿಲನ್​' ಟೀಸರ್​ ನೋಡಿ ರಾಮ್​ಗೋಪಾಲ್​ ವರ್ಮಾ ಅಂದಿದ್ದೇನು ಗೊತ್ತಾ?
news18
Updated: July 7, 2018, 1:43 PM IST
ನ್ಯೂಸ್ 18 ಕನ್ನಡ

ಶಿವರಾಜ್​ಕುಮಾರ್ ಮತ್ತು ಕಿಚ್ಚಾ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಮೇಲೆ ತುಂಬಾ ನಿರೀಕ್ಷೆ ಮೂಡಿದೆ. ಚಿತ್ರದ ಟೀಸರ್​ಗಳು ಬಿಡುಗಡೆಯಾದ ಮೇಲಂತೂ  ಅಭಿಮಾನಿಗಳು ಕಾತುರರಾಗಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ, ಖ್ಯಾತ ನಿರ್ದೇಶಕರೊಬ್ಬರು ಇದಕ್ಕೆ ಮಾರು ಹೋಗಿದ್ದಾರೆ.

 


Loading...

ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಸದ್ಯ ಇಡೀ ಚಿತ್ರರಂಗವೇ ಎದುರು ನೋಡುತ್ತಿರೋ ಸಿನಿಮಾ. ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿರೋ ಈ ಸಿನಿಮಾದ ಬಗ್ಗೆ ಕ್ರೇಜ್​ ಇನ್ನು ಹೆಚ್ಚಾಗಿದೆ.

ಇತ್ತೀಚೆಗೆ ರಿಲೀಸ್ ಆಗಿರೋ ಚಿತ್ರದ ಟೀಸರ್ ಅನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡಲು ಕಾಯುತ್ತಿದ್ದೀನಿ ಎಂದಿದ್ದಾರೆ.

ಹಾಗೇ ಶಿವರಾಜ್​ಕುಮಾರ್ ಮತ್ತು ಸುದೀಪ್ ಡೆಡ್ಲಿ ಕಾಂಬಿನೇಷನ್ ಬಗ್ಗೆಯೂ ಹೊಗಳಿರೋ ಆರ್​ಜಿವಿ, ಟ್ವೀಟ್ ಮಾಡೋ ಮೂಲಕ ದಿ ವಿಲನ್ ತಂಡಕ್ಕೆ ಶುಭ ಕೋರಿದ್ದಾರೆ. ಈ ಟ್ವೀಟ್‍ಗೆ ಕಿಚ್ಚಾ ಸುದೀಪ್ ಪ್ರತಿಕ್ರಿಯಿಸಿದ್ದು, ಸಿನಿಮಾ ಚಿತ್ರೀಕರಣದ ಮುಗಿದ ನಂತರದಲ್ಲಿ ಆದಷ್ಟು ಬೇಗ ಚಿತ್ರವನ್ನು ತೋರಿಸುತ್ತೇವೆ ಎಂದಿದ್ದಾರೆ.

 
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ