"ಐ ಹೇಟ್ The Kashmir files ಮೂವಿ" ಹೀಗೆೇಕೆ ಹೇಳಿದರು ಈ ಖ್ಯಾತ ನಿರ್ದೇಶಕ? ಅವರು ಕೊಟ್ಟ ಕಾರಣ ಇದು

ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮೊದಲು ಸಿನಿಮಾ ರಿಲೀಸ್ ಆದ ತಕ್ಷಣ ಹೊಗಳಿದ್ದ ವರ್ಮಾ, ಈಗ "ಐ ಹೇಟ್ ದಿ ಕಾಶ್ಮೀರ್ ಫೈಲ್ಸ್ ಮೂವಿ" ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ರಾಮ್ ಗೋಪಾಲ್ ವರ್ಮಾ ನೀಡಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

  • Share this:
ಬಾಲಿವುಡ್‌ನ (Bollywood) 'ದಿ ಕಾಶ್ಮೀರ್ ಫೈಲ್ಸ್' (The Kashmir Files)  ಸಿನಿಮಾದ (Cinema) ಅಬ್ಬರ ಮುಂದುವರೆದಿದೆ. 100 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ಈ ಸಿನಿಮಾ, ದೇಶಾದ್ಯಂತ ಯಶಸ್ವಿ ಪ್ರದರ್ಶನ (Show) ಕಾಣುತ್ತಿದೆ. ಬರೀ ಸಿನಿಮಾ ರಂಗದಲ್ಲಷ್ಟೇ ಅಲ್ಲದೇ, ರಾಜಕೀಯದಲ್ಲೂ (Politics) ದಿ ಕಾಶ್ಮೀರ್ ಫೈಲ್ಸ್ ಕಂಪನ ಮೂಡಿಸಿದೆ. ಸಿನಿಮಾದ ಕುರಿತಂತೆ ಬಹುತೇಕರು ಮೆಚ್ಚುಗೆ ಸೂಚಿಸಿದ್ದರೆ, ಕೆಲವರು ಸಿನಿಮಾದ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನು ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್‌ನ ಖ್ಯಾತ ನಿರ್ದೇಶಕ (Director) ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ದಿ ಕಾಶ್ಮೀರ್ ಫೈಲ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮೊದಲು ಸಿನಿಮಾ ರಿಲೀಸ್ ಆದ ತಕ್ಷಣ ಹೊಗಳಿದ್ದ ವರ್ಮಾ, ಈಗ "ಐ ಹೇಟ್ ದಿ ಕಾಶ್ಮೀರ್ ಫೈಲ್ಸ್ ಮೂವಿ" ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ರಾಮ್ ಗೋಪಾಲ್ ವರ್ಮಾ ನೀಡಿದ್ದಾರೆ.

ವಿಡಿಯೋ ಬ್ಲಾಗ್‌ನಲ್ಲಿ ಅಭಿಪ್ರಾಯ ಹಂಚಿಕೊಂಡ ವರ್ಮಾ

ಈ ಹಿಂದೆ ಸಿನಿಮಾ ರಿಲೀಸ್ ಆದ ತಕ್ಷಣ ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ಹಾಗೂ ಅಚ್ಚರಿ ಸೂಚಿಸಿದ್ದರು. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಆದರೆ ಇದೀಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಉದ್ಯಮದ ಮೇಲೆ ಮಾಡಿರುವ ಪ್ರಭಾವದ ಬಗ್ಗೆ ವಿಡಿಯೊ ಬ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ.

“ಐ ಹೇಟ್ ದಿ ಕಾಶ್ಮೀರ್‌ ಫೈಲ್ಸ್ ಮೂವಿ"

ಹೀಗಂತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿಡಿಯೋ ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಚಿತ್ರದ ಕಥೆಯನ್ನಾಗಲೀ ಅಂಶವನ್ನಾಗಲೀ ವಿರೋಧಿಸಿ ರಾಮ ಗೋಪಾಲ ವರ್ಮ ಅವರೇನೂ ಮಾತನಾಡಿಲ್ಲ. ಬದಲಿಗೆ, ಈ ಚಿತ್ರವು ಪ್ರತಿ ನಿರ್ದೇಶಕನಿಗೆ ಇನ್ನು ಮುಂದೆ ಚಿತ್ರ ಮಾಡುವುದಕ್ಕೆ ಸವಾಲಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ

ಕಥೆಯನ್ನು ನೋಡಿಯೇ ಬರುತ್ತಿದ್ದಾರೆ ಪ್ರೇಕ್ಷಕರು

ನಾನೂ ಸೇರಿದಂತೆ ಎಲ್ಲ ನಿರ್ದೇಶಕರೂ ಸಿನಿಮಾವು ವೇಗದಲ್ಲಿ ಸಾಗಬೇಕು, ಪ್ರತಿ ಹಂತದಲ್ಲೂ ವೀಕ್ಷಕರನ್ನು ಸೆಳೆದಿಡುವ ಟರ್ನಿಂಗ್ ಪಾಯಿಂಟ್‌ಗಳು  ಇರಬೇಕು, ಅದಿಲ್ಲವಾದರೆ ಸ್ಟಾರುಗಳು, ಐಟಂ ಸಾಂಗ್ ಗಳು ಇರಬೇಕು ಎಂಬೆಲ್ಲ ಸೂತ್ರಗಳನ್ನು ಪಾಲಿಸುತ್ತೇವೆ. ಆದರೆ ‘ದ ಕಾಶ್ಮೀರ್ ಫೈಲ್ಸ್’ ಇವ್ಯಾವ ಸೂತ್ರಗಳನ್ನೂ ಪಾಲಿಸದೆಯೂ ವೀಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಬಹುದೆಂಬುದನ್ನು ತೋರಿಸಿದೆ.

ಈ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ನಿರ್ದೇಶಕ ಏನೂ ಮಾಡದಿದ್ದರೂ, ಕತೆ ಸಾಗುವ ವೇಗ ಬಹಳ ನಿಧಾನಗತಿಯಲ್ಲಿದ್ದರೂ ವೀಕ್ಷಕ ಸಮಯ ಕೊಟ್ಟು ನೋಡುತ್ತಿದ್ದಾನೆ ಅಂತ ವರ್ಮಾ ಹೇಳಿದ್ದಾರೆ.

ದಿ ಕಾಶ್ಮೀರ್‌ ಫೈಲ್ಸ್ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ

ಹೀಗಾಗಿ, ತಾವೂ ಸೇರಿದಂತೆ ಎಲ್ಲ ನಿರ್ದೇಶಕರಿಗೆ ಮುಂದಿನ ಚಿತ್ರ ನಿರ್ದೇಶಿಸುವಾಗ ‘ದ ಕಾಶ್ಮೀರ್ ಫೈಲ್ಸ್’ ರೆಫರೆನ್ಸ್ ಆಗಿ ಇದ್ದೇ ಇರುತ್ತದೆ. ಆ ಚಿತ್ರವನ್ನು ಒಪ್ಪುತ್ತೀರೋ ಬಿಡುತ್ತೀರೋ ಆದರೆ ಅದರ ನಿರ್ಮಾಣ ಮಾದರಿಯನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ರಾಮ ಗೋಪಾಲ ವರ್ಮಾ.

ಉಚಿತ ಪ್ರದರ್ಶನಕ್ಕೆ ನಿರ್ದೇಶಕರ ವಿರೋಧ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಜನರಿಗಾಗಿ ಉಚಿತವಾಗಿ ಕೆಲ ರಾಜಕಾರಣಿಗಳು ಪ್ರದರ್ಶಿಸುತ್ತಾ ಇದ್ದಾರೆ. ಜನಪ್ರತಿನಿಧಿಗಳ ಈ ನಿರ್ಧಾರಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಿರ್ದೇಶಕ ಹಾಗೂ ಸಹ ನಿರ್ಮಾಪಕ ವಿವೇಕ್‌ ಅಗ್ನಿಹೋತ್ರಿ, ʼಸೃಜನಶೀಲ ವ್ಯವಹಾರವನ್ನು ಗೌರವಿಸುವಂತೆʼ ರಾಜಕಾರಣಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: The Kashmir Files ಬಗ್ಗೆ ಹೀಗೆಲ್ಲಾ ಹೇಳಿದ್ರಾ ಪ್ರಕಾಶ್ ರಾಜ್? ಇತ್ತ "ನಾ ಸಿನಿಮಾ ನೋಡಲ್ಲ" ಅಂದ್ರು ಸಿದ್ದರಾಮಯ್ಯ!

ಈ ಕುರಿತು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿರುವ ವಿವೇಕ್‌ ಅಗ್ನಿಹೋತ್ರಿ, ರೇವಾರಿಯಲ್ಲಿ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರದ ಉಚಿತ ಪ್ರದರ್ಶನ ನಿಲ್ಲಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನ ಒತ್ತಾಯಿಸಿದ್ದಾರೆ.
Published by:Annappa Achari
First published: