KGF 2 ಜಸ್ಟ್​ ಗ್ಯಾಂಗ್​ಸ್ಟರ್​ ಸಿನಿಮಾ ಅಲ್ಲ.. ಬಾಲಿವುಡ್​ ಮಂದಿಗೆ ಭಯ ಹುಟ್ಟಿಸೋ ಹಾರರ್​ ಚಿತ್ರ ಎಂದ RGV

ಕೆಜಿಎಫ್ 2 ಚಿತ್ರಕ್ಕೆ ಎಲ್ಲಾ ಸಿನಿರಂಗದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಈ ಸಾಲಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ (Ram Gopal Varma) ಸೇರಿದ್ದಾರೆ. ಅಲ್ಲದೇ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 (KGF 2) ಚಿತ್ರ ಈಗಾಗಲೇ ಬಿಡುಗಡೆ ಆಗಿ ವಿಶ್ವದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದೆ.ಅಲ್ಲದೇ ಬಾಕ್ಸ್​ ಆಫೀಸ್​(Box Office)ನಲ್ಲಿ ರಾಕಿ ಭಾಯ್​ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್​ ಮಾಡುತ್ತಿದೆ. ಮೊದಲ ದಿನವೇ 135.5 ಕೋಟಿ ಕಲೇಕ್ಷನ್ ಮಾಡಿದರೆ, 2ನೇ ದಿನ ಒಟ್ಟು 240 ಕೋಟಿಗೂ ಹೆಚ್ಚು ಕಮಾಯಿ ಮಾಡುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಕೆಜಿಎಫ್ 2 ಅಳಿಸಿ ಹಾಕುತ್ತಿದೆ. ಇದರ ನಡುವೆ ಚಿತ್ರಕ್ಕೆ ಎಲ್ಲಾ ಸಿನಿರಂಗದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಈ ಸಾಲಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ (Ram Gopal Varma) ಸೇರಿದ್ದಾರೆ. ಅಲ್ಲದೇ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಟ್ವೀಟ್:

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವು ಬರೀ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ. ಅದು ಬಾಲಿವುಡ್ ಇಂಡಸ್ಟ್ರಿ ಪಾಲಿಗೆ ಹಾರರ್ ಚಿತ್ರವಾಗಿದೆ. ಈ ಸಿನಿಮಾದ ಯಶಸ್ಸು ಬಾಲಿವುಡ್‌ ಮಂದಿಗೆ ಅನೇಕ ವರ್ಷಗಳ ಕಾಲ ಕಾಡುತ್ತದೆ.ಎಂದು ಫಿಲ್ಮ್ ಮೇಕರ್ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಇದು ಮಾತ್ರವಲ್ಲದೇ ಸರಣಿ ಟ್ವೀಟ್ ಮಾಡಿರುವ ಅವರು, ಬಾಲಿವುಡ್ ಸೇರಿಂದತೆ ತಮಿಳು, ತೆಲುಗು ಚಿತ್ರರಂಗದವರ ಕುರಿತೂ ಮಾತನಾಡಿದ್ದಾರೆ.

ಸಿನಿಮಾದಲ್ಲಿ ಹೇಗೆ ರಾಕಿ ಭಾಯ್ ಮುಂಬೈಗೆ ಬಂದು ಮಷಿನ್ ಗನ್‌ನಲ್ಲಿ ವಿಲನ್‌ಗಳನ್ನು ಹೊಡೆದುರುಳಿಸುತ್ತಾರೋ, ಅದೇ ರೀತಿ ನಟ ಯಶ್ ಬಾಕ್ಸ್‌ ಆಫೀಸ್‌ ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್‌ ಸ್ಟಾರ್‌ಗಳನ್ನ ಮಷಿನ್ ಗನ್ ಮೂಲಕ ಹೊಡೆದುರುಳಿಸಿದ್ದಾರೆ. ಕೆಜಿಎಫ್ 2 ಸಿನಿಮಾದ ಫೈನಲ್ ಕಲೆಕ್ಷನ್ ಅಂತೂ ಬಾಲಿವುಡ್‌ ಮೇಲೆ ಸ್ಯಾಂಡಲ್‌ವುಡ್ ನ್ಯೂಕ್ಲಿಯರ್ ದಾಳಿ ಮಾಡಿದ ಹಾಗಿರುತ್ತದೆ ಎಂದು ನೇರವಾಗಿ ಬಾಲಿವುಡ್​ಗೆ ಟಾಂಗ್ ನೀಡಿದ್ದಾರೆ.

ಹಿಂದಿ ಚಿತ್ರರಂಗ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರರಂಗ ಕೂಡ ಕನ್ನಡ ಚಿತ್ರರಂಗವನ್ನು ಕೆಜಿಎಫ್ ಬರುವವರೆಗೂ ಸೀರಿಯಸ್‌ ಆಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗವನ್ನು ವರ್ಲ್ಡ್‌ ಮ್ಯಾಪ್‌ನಲ್ಲಿ ಹಾಕಿದ್ದಾರೆ ಎಂದು ನೀಲ್ ಅವರನ್ನು ಹಾಡಿಹೊಗಳಿದ್ದಾರೆ.

ಸ್ಟಾರ್‌ಗಳ ಸಂಭಾವನೆಗೆಂದು ದುಡ್ಡು ಹಾಕುವ ಬದಲು ಮೇಕಿಂಗ್‌ ಮೇಲೆ ಹಣ ಖರ್ಚು ಮಾಡಿದರೆ ಅತ್ಯುತ್ತಮ ಕ್ವಾಲಿಟಿಯ ಸಿನಿಮಾಗಳು ಹಾಗೂ ದೊಡ್ಡ ಮಟ್ಟದ ಹಿಟ್ಸ್ ಕೊಡಲು ಸಾಧ್ಯ ಎಂಬುದನ್ನು ಇದೀಗ ಕನ್ನಡದ ಕೆಜಿಎಫ್ 2 ಸಿನಿಮಾ ತನ್ನ ಯಶಸ್ಸಿನಿಂದ ಸಾಬೀತು ಪಡಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ವರ್ಮಾ ಕೆಜೆಎಫ್ 2 ಚಿತ್ರದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: KGF Chapter 2: `ರಣ ಬೇಟೆಗಾರ’ ರಾಕಿ ಭಾಯ್​ ರಣಾರ್ಭಟ, ಕೆಜಿಎಫ್​ 2 ಹಿಟ್​ ಆಗಲು ಈ 5 ಶಕ್ತಿಗಳೇ ಕಾರಣ!

ವರ್ಲ್ಡ್​ ವೈಡ್​ ಕೆಜಿಎಫ್​ 2 ಕಲೆಕ್ಷನ್​  ಎಷ್ಟು?

ವಿಶ್ವದಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎರಡು ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಕಾ ಸಾವಿರ ಕೋಟಿ ಕ್ಲಬ್​ ಸೇರುತ್ತೆ ಅಂತ ಸಿನಿಪಂಡಿತರು ಹೇಳುತ್ತಿದ್ದಾರೆ.

ಇದನ್ನೂ ಓದಿ: KGF 2 ಅಬ್ಬರದ ನಡುವೆ ಹೊಸ ಹಾಡು ರಿಲೀಸ್, ಮೆಹಬೂಬಾ ಆಡಿಯೋ ಸಾಂಗ್ ಬಿಡುಗಡೆ

ಹಿಂದಿಯಲ್ಲಿ  ದಾಖಲೆ ಬರೆದ ರಾಕಿಬಾಯ್:

ಎರಡು ದಿನಗಳಲ್ಲಿ ಹಿಂದಿ ವರ್ಷನ್ 100.74 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಂತ ಟ್ರೇಡ್ ಎಕ್ಸ್‌ಪರ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.ಎರಡು ದಿನಗಳಲ್ಲೇ 100.74 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್‌ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಹೊಸ ದಾಖಲೆ ನಿರ್ಮಿಸಿದೆ.
Published by:shrikrishna bhat
First published: