ಜಾನಪದ‌ ಕ್ರೀಡೆಗೆ ಅಂತರರಾಷ್ಟ್ರೀಯ ಮನ್ನಣೆ: ನಿರ್ಮಾಣಗೊಳ್ಳಲಿದೆ ಕಂಬಳ ಕಥೆಯಾಧಾರಿತ ಸಿನಿಮಾ

ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧಗಳೇ ಚಿತ್ರದ ಮುಖ್ಯ ಕಥೆಯಾಗಲಿದ್ದು, ಕೋಣ, ಕೋಣವನ್ನು ತಮ್ಮ ಮಗುವಿಗಿಂತಲೂ ಮುದ್ದಾಗಿ ಸಾಕುವ ಕೋಣದ ಯಜಮಾನರು, ಕೆಲಸಗಾರರು ಹೀಗೆ ಎಲ್ಲ ವಿಷಯಗಳು ಚಿತ್ರದಲ್ಲಿರಲಿದೆಯಂತೆ.

ಕಂಬಳ ಕ್ರೀಡೆ ಆಧಾರಿತ ಸಿನಿಮಾದ ಕೆಲಸ ಆರಂಭಿಸಿದ ರಾಜೇಂದ್ರ ಸಿಂಗ್​ ಬಾಬು

ಕಂಬಳ ಕ್ರೀಡೆ ಆಧಾರಿತ ಸಿನಿಮಾದ ಕೆಲಸ ಆರಂಭಿಸಿದ ರಾಜೇಂದ್ರ ಸಿಂಗ್​ ಬಾಬು

  • Share this:
ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅಂತರರಾಷ್ಟ್ರೀಯ ಮನ್ನಣೆ ಪಡೆಯುವ ವೇದಿಕೆ ಸಜ್ಜುಗೊಂಡಿದೆ. ಹೌದು, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳ ಕುರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗುವ ರೀತಿಯಲ್ಲಿ ಚಿತ್ರ ನಿರ್ಮಿಸುವ ಪಣ ತೊಟ್ಟಿದ್ದಾರೆ. ಪ್ರಾಣಿ-ಮನುಷ್ಯನ ನಡುವಿನ ಸಂಬಂಧ, ತುಳುನಾಡಿನ ಸಂಸ್ಕೃತಿಯ ಸಾರವನ್ನು ಹೊಂದಿರುವ ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಚಿತ್ರ ನಿರ್ಮಾಣಕ್ಕೆ ಬೇಕಾದ ಎಲ್ಲ ತಯಾರಿಗಳು ನಡೆಯುತ್ತಿವೆ. ಪ್ರಾಣಿ ಹಿಂಸೆಯಾಗುತ್ತಿದೆ ಎನ್ನುವ ಕಾರಣಕ್ಕೆ ನಿಷೇಧದ ಅಂಚಿನಲ್ಲಿದ್ದ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ದೇಶದ ಸುಪ್ರೀಂ ಕೋರ್ಟ್​  ಈಗಾಗಲೇ ಕಂಬಳ ನಡೆಸುವಂತೆ ಗ್ರೀನ್ ಸಿಗ್ನಲ್ ನೀಡಿದೆ. ಹಲವು ಷರತ್ತುಗಳ ಮೂಲಕ ಕಂಬಳವನ್ನು ನಡೆಸಲು ಅನುಮತಿಯನ್ನು ನೀಡುವ ಮೂಲಕ ತುಳುನಾಡಿನ ಜನರ ಕ್ರೀಡೆಯನ್ನು ಉಳಿಸುವ ನಿರ್ಧಾರವನ್ನು ಕೈಗೊಂಡಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಇದೀಗ ಕರಾವಳಿಯಾದ್ಯಂತ ಮತ್ತೆ ಕಂಬಳದ ಕೋಣಗಳ ಹೂಂಕಾರ ಕೇಳಿ ಬರಲಾರಂಭಿಸಿದೆ.

ಈ ನಡುವೆ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ಅಂತರರಾಷ್ಟ್ಟೀಯ ಮನ್ನಣೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭಗೊಂಡಿವೆ. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕಂಬಳದ ಕುರಿತು ಚಿತ್ರ ನಿರ್ಮಿಸುವ ಮೂಲಕ ಆಸ್ಕರ್ ಪ್ರಶಸ್ತಿಯನ್ನು ಈ ಸಿನಿಮಾಕ್ಕೆ ಪಡೆಯುವ ಉದ್ಧೇಶವನ್ನೂ ಇಟ್ಟುಕೊಂಡಿದ್ದಾರಂತೆ. ಕಂಬಳದ ಹಲವು ಮಜಲುಗಳು ಚಿತ್ರಕಥೆಯಲ್ಲಿ ಮೂಡಿಬರಲಿದ್ದು, ಚಿತ್ರ ನಿರ್ಮಾಣಕ್ಕೆ ಬೇಕಾದಂತಹ ಎಲ್ಲಾ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ.

Kambala, sandalwood, movie on Kambala, Rajendra Singh Babu, ಕಂಬಳ, ಕಂಬಳ ಸಿನಿಮಾ, ರಾಜೇಂದ್ರ ಸಿಂಗ್​ ಬಾಬು, Rajendra Singh Babu Daughter, bangalore crime, bangalore accident, Rajendra Singh Babu Movies, Jai Jagadish Family, Jai Jagadish Daughter, Rishika Singh Car Accident, Sandalwood News, ಸ್ಯಾಂಡಲ್​ವುಡ್, ರಿಷಿಕಾ ಸಿಂಗ್ ಕಾರು ಅಪಘಾತ, ರಾಜೇಂದ್ರ ಸಿಂಗ್ ಬಾಬು ಮಳ ಕಾರು ಅಪಘಾತ, ಜೈ ಜಗದೀಶ್ ಮಗಳ ಕಾರು ಅಪಘಾತ
ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು


ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧಗಳೇ ಚಿತ್ರದ ಮುಖ್ಯ ಕಥೆಯಾಗಲಿದ್ದು, ಕೋಣ, ಕೋಣವನ್ನು ತಮ್ಮ ಮಗುವಿಗಿಂತಲೂ ಮುದ್ದಾಗಿ ಸಾಕುವ ಕೋಣದ ಯಜಮಾನರು, ಕೆಲಸಗಾರರು ಹೀಗೆ ಎಲ್ಲ ವಿಷಯಗಳು ಚಿತ್ರದಲ್ಲಿರಲಿದೆಯಂತೆ. ಅಲ್ಲದೆ, ಕೋಣ ಸಾಕುವಲ್ಲಿ ಅತ್ಯಂತ ಹೆಚ್ಚಿನ ಶ್ರಮವಹಿಸುವ ಮಹಿಳೆಯನ್ನೂ ಕಂಬಳದ ಚಿತ್ರದಲ್ಲಿ ಸೇರಿಸಿಕೊಳ್ಳುವ ಇಂಗಿತವನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವ್ಯಕ್ತಪಡಿಸಿದ್ದಾರೆ. ಎಲ್ಲ ಸ್ತರಗಳಲ್ಲೂ ಮಹಿಳೆ ಇದೀಗ ಮುಂಚೂಣಿಯಲ್ಲಿದ್ದು, ಕೋಣ ಓಡಿಸುವುದಕ್ಕೂ ಮಹಿಳೆಗೆ ಅವಕಾಶವನ್ನು ಕಲ್ಪಿಸಬೇಕೆನ್ನುವ ಮಹದಾಸೆ ನಿರ್ದೇಶಕ ರಾಜೇಂದ್ರ ಸಿಂಗ್ ಅವರದ್ದಾಗಿದ್ದು, ಇದೇ ಕಾರಣಕ್ಕೆ ಕಂಬಳದ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಮಹಿಳೆಯಿಂದಲೇ ಕೋಣ ಓಡಿಸುವ ದೃಶ್ಯ ಸೇರಿಸಿಕೊಳ್ಳುವ ಸಾಧ್ಯತೆಯನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Puneeth Rajkumar: ದಿನಕರ್​ ತೂಗುದೀಪ-ಪುನೀತ್​ ರಾಜ್​ಕುಮಾರ್​ ಕಾಂಬಿನೇಶನ್​ನಲ್ಲಿ ಹೊಸ ಸಿನಿಮಾ..!

ಮಹಿಳೆಗೂ ಕಂಬಳದಲ್ಲಿ ಕೋಣಗಳನ್ನು ಓಡಿಸಲು ಅವಕಾಶ ನೀಡಬೇಕು ಎನ್ನುವ ಕೂಗಿಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಧ್ವನಿಯಾಗಿದ್ದಾರೆ. ಸುಮಾರು 800-900 ವರ್ಷಗಳ ಪರಂಪರೆಯನ್ನು ಹೊಂದಿರುವ ಕಂಬಳದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯ ಕುರಿತು ಸ್ಪಷ್ಟ ನಿರ್ಧಾರ ಈವರೆಗೂ ಬಂದಿಲ್ಲ. ಈ ಕಾರಣಕ್ಕಾಗಿ ಇದರ ಬಗ್ಗೆ ಚರ್ಚೆ ನಡೆಸಿ, ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಚಿತ್ರದಲ್ಲಿ ಮಹಿಳೆಯಿಂದ ಕೋಣ ಓಡಿಸಲು ನಿರ್ದೇಶಕ ಸಿಂಗ್ ನಿರ್ಧರಿಸಿದ್ದಾರೆ.

Coastal Karnataka's Kambala sports not held this year due to Corona virus
ಕಂಬಳ


ಕಂಬಳದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಕಂಬಳದ ತೀರ್ಪುಗಾರರಾದ ಗುಣಪಾಲ್ ಕಡಂಬ ಅವರಿಂದ ಚಿತ್ರಕ್ಕೆ ಬೇಕಾದಂತಹ ಎಲ್ಲಾ ಪರಿಕರಗಳನ್ನು ಪಡೆದುಕೊಳ್ಳಲಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರೂ ಚಿತ್ರಕಥೆಗೆ ಬೇಕಾದಂತಹ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಕಂಬಳ ಕುರಿತ ತುಳುಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.

ಇದನ್ನೂ ಓದಿ: ಬ್ಯಾಡ್ ​ಬಾಯ್​ ಸಲ್ಮಾನ್​ ಖಾನ್​ ಅಂಗರಕ್ಷಕನ ಸಂಬಳ ಎಷ್ಟು ಗೊತ್ತಾ?

ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವ ಕಾರಣಕ್ಕೆ ಚಿತ್ರವನ್ನು ಇಂಗ್ಲಿಷ್​ನಲ್ಲೂ ಡಬ್ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ ತುಳುನಾಡಿನಲ್ಲೇ ಹುಟ್ಟಿ ಹೆಸರುಗಳಿಸಿರುವ ನಟ-ನಟಿಯರೇ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿಯನ್ನೂ ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ.
Published by:Anitha E
First published: