ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿದ್ದ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಕೊಂಚ ಸಕ್ರಿಯವಾಗಿದ್ದರು. ಆಗಾಗ ಒಂದೊಂದು ಪೋಸ್ಟ್ ಮಾಡುವ ನಿರ್ದೇಶಕ ಇತ್ತೀಚೆಗೆ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳನ್ನು ಕೆಣಕಿದೆ.
'ಬಾಹುಬಲಿ' ನಂತರ ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ 'ಆರ್ಆರ್ಆರ್'. ಈ ಸಿನಿಮಾ ಆರಂಭವಾದಾಗಿನಿಂದ ಅಭಿಮಾನಿಗಳು ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. ರಾಮ್ಚರಣ್ ಹುಟ್ಟುಹಬ್ಬದಂದು ಅವರ ಪಾತ್ರವನ್ನು ಪರಿಚಯಿಸುವ ಟೀಸರ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಆದರೆ ಲಾಕ್ಡೌನ್ನಿಂದಾಗಿ ಜೂ. ಎನ್ಟಿಆರ್ ಅವರ ಫಸ್ಟ್ಲುಕ್ ಕುರಿತಾಗಿ ಯಾವುದೇ ಸುದ್ದಿ ಇಲ್ಲ.
![Bheem for Ramaraju and rrr Rram Charan birthday teaser is out now]()
ರಾಮ್ಚರಣ್
ರಾಜಮೌಳಿ ತಮ್ಮ ಮನೆಯಲ್ಲಿ ಮುದ್ದಿನ ಸಾಕು ನಾಯಿ ಜೊತೆ ಇರುವ ಫೋಟೋಗಳ ಕೊಲಾಜ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಕೊಟ್ಟಿದ್ದು, ಅದೇ ಈಗ ಜೂ.ಎನ್ಟಿಆರ್ ಅಭಿಮಾನಿಗಳನ್ನು ಕೆಣಕಿದೆ.
ಈ ಸಿದ್ಧನಿಂದ ತಾಳ್ಮೆಯನ್ನು ಕಲಿಯಬೇಕು. ನಾನು ಅಂದಾಜು ಅರ್ಧಗಂಟೆ ಸಿದ್ಧನ ಸುತ್ತ ಗೆರೆ ಎಳೆಯುತ್ತಾ ಈ ವೃತ್ತಗಳನ್ನು ರಚಿಸುತ್ತಿದೆ. ಅಷ್ಟೂ ಹೊತ್ತು ತಾಳ್ಮೆಯಿಂದ ಮಲಗಿದ್ದ ಜಾಗದಲ್ಲೇ ಮಲಗಿದ್ದಾನೆ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
![Director Rajamouli posted about patience and fans got angry on him]()
ರಾಜಮೌಳಿ ಅವರ ಇನ್ಸ್ಟಾಗ್ರಾಂ ಪೋಸ್ಟ್
ರಾಜಮೌಳಿ ಅವರೇ ನೀವು ತಾಳ್ಮೆ ಬಗ್ಗೆ ಮಾತನಾಡಬೇಡಿ. ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ನೋಡಲು ಬಹಳ ಸಮಯದಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ಈಗಲಾದರೂ ಎನ್ಟಿಆರ್ ಅವರ ಪೋಸ್ಟರ್ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. ಮತ್ತೆ ಕೆಲವರು ರಾಜಮೌಳಿ ಅವರ ಪರವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್ ಫಿಟ್ನೆಸ್ ವಿಡಿಯೋ ನೋಡಿ ದಂಗಾದ ಅಲ್ಲು ಅರ್ಜುನ್ ಸಹೋದರ
ಇನ್ನೂ ಕೆಲವರು ರಾಜಮೌಳಿ ಅವರು ಬರೆದಿರುವ ಸಿದ್ಧ ಯಾರೆಂದು ಹುಡುಕುತ್ತಿದ್ದರು. ಸಿದ್ಧ ರಾಜಮೌಳಿ ಅವರ ಸಾಕು ನಾಯಿ. ಅದರ ಹೆಸರನ್ನೇ 'ಬಾಹುಬಲಿ' ಸಿನಿಮಾದಲ್ಲಿ ಕಟ್ಟಪ್ಪನ ಕುದುರೆಗೆ ಇಡಲಾಗಿತ್ತು. ಈ ಬಗ್ಗೆಯೂ ನೆಟ್ಟಿಗರು ಚರ್ಚೆ ಆರಂಭಿಸಿದ್ದು, ಕಮೆಂಟ್ ಮಾಡುತ್ತಿದ್ದಾರೆ.
![Rajamoulis RRR Team is releasing title logo and Motion Poster tomorrow]()
ಆರ್ಆರ್ಆರ್ ಸಿನಿಮಾದ ಪೋಸ್ಟರ್
ಈ ಹಿಂದೆ ರಾಜಮೌಳಿ ನಿರ್ದೇಶಕ ವಂಗ ಸಂದೀಪ್ ನೀಡಿದ್ದ 'ಬಿ ದ ರಿಯಲ್ ಮ್ಯಾನ್' ಚಾಲೆಂಜ್ ಸ್ವೀಕರಿಸಿ, ಮನೆಯಲ್ಲಿನ ಹೆಂಗಸರಿಗೆ ಮನೆ ಕೆಲಸ ಮಾಡಿಕೊಟ್ಟಿದ್ದರು. ಅದರ ವಿಡಿಯೋವನ್ನು ಹಂಚಿಕೊಂಡಿದ್ದರು.
Task done, @imvangasandeep. Throwing the challenge to @tarak9999 and @AlwaysRamCharan..
ಸದ್ಯ ಲಾಕ್ಡೌನ್ ಸಡಿಲಗೊಳಿಸಲಾಗಿದ್ದು, ಚಿತ್ರರಂಗ ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರ ಸಿನಿಮಾ ಶೂಟಿಂಗ್ಗೆ ಅನುಮತಿ ಕೊಟ್ಟ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.
ಮಗಳ ಮೊದಲ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಲೂಸ್ ಮಾದ ಯೋಗಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ