ಸ್ಯಾಂಡಲ್ವುಡ್ನ (Sandalwood) ಬಹು ನಿರೀಕ್ಷಿತ ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ತೆರೆಗೆ ಬಂದಿದ್ದು, ಎಲ್ಲೆಡೆ ಅಭಿಮಾನಿಗಳು (Fans) ಸಂಭ್ರಮ ಆಚರಿಸಿದ್ದಾರೆ. ಸಿನಿಮಾ ಬಗ್ಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೂಪರ್ ಸಿನಿಮಾ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ರಾಜಮೌಳಿ (Rajamouli), ಕಿಚ್ಚನ ಬಗ್ಗೆ ಹಾಡಿ ಹೊಗಳಿದ್ದಾರೆ.
ಕಿಚ್ಚನಿಗೆ ವಿಶ್ ಮಾಡಿದ್ದ ರಾಜಮೌಳಿ
ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಕಿಚ್ಚನ ಸಿನಿಮಾಗೆ ವಿಶ್ ಮಾಡಿರುವ ನಿರ್ದೇಶಕ ರಾಜಮೌಳಿ, ಪ್ರಯೋಗ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. #VikrantRona ನಲ್ಲಿ ಅವರು ಏನು ಮಾಡಿದ್ದಾರೆಂದು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ದೃಶ್ಯಗಳು ಭವ್ಯವಾಗಿದೆ ಅನಿಸುತ್ತಿದೆ. ಸಿನಿಮಾ ತಂಡಕ್ಕೆ ನನ್ನ ಶುಭಾಶಯಗಳು @KicchaSudeep ಎಂದು ಬರೆದುಕೊಂಡಿದ್ದಾರೆ.
ಇನ್ನು ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಕೂಡ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದು, ನಾನು ಅವರ ಕೆಲಸವನ್ನು ನೋಡಿದ್ದೇನೆ. ಅವರು ಅದ್ಭುತ ನಟ ಎಂದಿದ್ದಾರೆ. ಉತ್ತರ ಭಾರತದಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಮಾಡಲು ಸಲ್ಮಾನ್ ಖಾನ್ ಕಿಚ್ಚನಿಗೆ ಸಾಥ್ ನೀಡಿದ್ದು, ಈ ಬಗ್ಗೆ ಮಾತನಾಡಿದ್ದ ಅವರು, ಕೇವಲ ನನ್ನ ಸ್ನೇಹಿತ ಎಂದು ನಾನು ಸಾಥ್ ನೀಡಿಲ್ಲ. ಒಳ್ಳೆಯ ಸಿನಿಮಾಗೆ ನಾನು ಸಹಾಯ ಮಾಡಲು ಯಾವಗಲೂ ಸಿದ್ದ, ಅದರ ಭಾಗವಾಗಲು ನನಗೆ ಇಷ್ಟ ಎಂದಿದ್ದಾರೆ.
ಇದನ್ನೂ ಓದಿ: ಪತಿಯ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟ ಪತ್ನಿ, ವಿಕ್ರಾಂತ್ ರೋಣ ಬಗ್ಗೆ ಪ್ರಿಯಾ ಸುದೀಪ್ ಮೆಚ್ಚುಗೆ
Sudeep is always first in experimenting & taking up challenges. Can’t wait to see what he has done in #VikrantRona. The visuals look grand. My best wishes to @KicchaSudeep and the entire team for their release tomorrow.
— rajamouli ss (@ssrajamouli) July 27, 2022
ಇನ್ನು ತಮಿಳುನಾಡಿನ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿದ್ದು, ಕೇರಳದಲ್ಲಿ 110 ಸ್ಕ್ರೀನ್ನಲ್ಲಿ, 600 ಕ್ಕೂ ಹೆಚ್ಚು ಶೋ ಆಗುವ ಸಾಧ್ಯತೆ ಇದೆ. ಇನ್ನು ಉತ್ತರ ಭಾರತದ ವಿಚಾರಕ್ಕೆ ಬಂದರೆ ಒಟ್ಟು 690 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಿದ್ದು, ಉತ್ತರ ಭಾರತ ಭಾಗದಲ್ಲಿ ಮೊದಲ ದಿನ 2800 ಶೋ ನಡೆಯಲಿದೆ ಎನ್ನುವ ಮಾಹಿತಿ ಇದೆ. ವಿದೇಶದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಸುದೀಪ್ ಸಿನಿಮಾ ಸದ್ದು ಮಾಡುತ್ತಿದ್ದು, ಓವರ್ಸೀಸ್ನ 600 ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಇದ್ದು, ಮೊದಲ ದಿನ 1500 ಶೋ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ರಕ್ಕಮ್ಮನ ಡ್ಯಾನ್ಸ್, ಕಿಚ್ಚನ ಫೈಟ್, ಬಾಕ್ಸ್ ಆಫೀಸ್ ಉಡೀಸ್! ಹೇಗಿದ್ದಾನೆ ಗೊತ್ತಾ ವಿಕ್ರಾಂತ್ ರೋಣ?
ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡಿತ್ತು, ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆ ತುಸು ಹೆಚ್ಚಿತ್ತು. ಹಾಗೆಯೇ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇದ್ದು, ಕಿಚ್ಚನ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಸಾಮಾನ್ಯವಾಗಿ ಕಿಚ್ಚನ ಸಿನಿಮಾ ಎಂದರೆ ವಿಶೇಷತೆಯಿಂದ ಕೂಡಿರುತ್ತದೆ. ಅವರ ಮ್ಯಾನರಿಸಂ, ಸ್ಟೈಲ್, ಫೈಟಿಂಗ್ ನೋಡುವುದು ಒಂದು ರೀತಿ ಚೆಂದ. ಈ ಸಿನಿಮಾದಲ್ಲಿ ಸಹ ಅವರು ಬಹಳ ಇಷ್ಟವಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ