ಗೌರವ ಸಿಕ್ಕಿಲ್ಲ ಅಂತ ಅಕ್ಷಯ್​ ಕುಮಾರ್​ ಅಭಿನಯದ 'ಲಕ್ಷ್ಮಿ ಬಾಂಬ್​' ಸಿನಿಮಾದಿಂದ ಹೊರ ಬಂದ ನಿರ್ದೇಶಕ ರಾಘವ ಲಾರೆನ್ಸ್​

ತಮಿಳಿನ ಕಾಂಚನಾ ಸಿನಿಮಾದ ಹಿಂದಿ ರೀಮೇಕ್​ 'ಲಕ್ಷ್ಮಿ ಬಾಂಬ್​' ಚಿತ್ರದಿಂದ ದಕ್ಷಿಣ ಭಾರತದ ನಿರ್ದೇಶಕ ರಾಘವ ಲಾರೆನ್ಸ್​ ಹೊರ ನಡೆದಿದ್ದಾರೆ. ಬಾಲಿವುಡ್​ನಲ್ಲಿ ಕೆಲಸ ಮಾಡುವಾಗ ಗೌರವ ಸಿಗಲಿಲ್ಲ ಎಂಬ ಕಾರಣಕ್ಕೆ ಲಾರೆನ್ಸ್​ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ನಿರ್ಧಾರದ ಕುರಿತು ತಿಳಿಸಿದ್ದಾರೆ.

ಇದೀಗ ಕಾಲಿವುಡ್-ಟಾಲಿವುಡ್-ಬಾಲಿವುಡ್​ನಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನಿರ್ದೇಶನದ ಮೂಲಕ ರಾಘವ ಲಾರೆನ್ಸ್ ಸಂಚಲನ ಸೃಷ್ಟಿಸಿದ್ದಾರೆ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನು ನಾಯಕರನ್ನಾಗಿಸಿ ಲಕ್ಷ್ಮಿ ಬಾಂಬ್ ಎಂಬ ಹಿಂದಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೀಗ ಕಾಲಿವುಡ್-ಟಾಲಿವುಡ್-ಬಾಲಿವುಡ್​ನಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನಿರ್ದೇಶನದ ಮೂಲಕ ರಾಘವ ಲಾರೆನ್ಸ್ ಸಂಚಲನ ಸೃಷ್ಟಿಸಿದ್ದಾರೆ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನು ನಾಯಕರನ್ನಾಗಿಸಿ ಲಕ್ಷ್ಮಿ ಬಾಂಬ್ ಎಂಬ ಹಿಂದಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

  • News18
  • Last Updated :
  • Share this:
ನಟ ಅಕ್ಷಯ್​ ಕುಮಾರ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಲಕ್ಷ್ಮಿ ಬಾಂಬ್'ನಿಂದ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್​ ಹೊರ ಬಂದಿದ್ದಾರೆ. ಅಲ್ಲಿ ಕೆಲಸ ಮಾಡುವಾಗ ಗೌರವ ಸಿಗದ ಕಾರಣಕ್ಕೆ ಈ ಪ್ರಾಜೆಕ್ಟ್​ನಿಂದ ಹೊ ಬಂದಿರುವುದಾಗಿ ಲಾರೆನ್ಸ್​ ತಿಳಿಸಿದ್ದಾರೆ.

​ 'ಲಕ್ಷ್ಮಿ ಬಾಂಬ್' ಅಭಿನಯದ ಹಾರರ್​ ಕಾಮಿಡಿ ಸಿನಿಮಾ. ಈ ಚಿತ್ರ ಪೋಸ್ಟರ್​ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ​

Bringing you one bomb of a story,#LaxmmiBomb starring @Advani_Kiara & yours truly!Bursting in cinemas on 5th June,2020💥ಆದರೆ ಈಗ ಇದ್ದಕ್ಕಿದ್ಧಂತೆ ಈ ಪ್ರಾಜೆಕ್ಟ್​ನಿಂದ ಲಾರೆನ್ಸ್​ ಹೊರ ನಡೆದಿದ್ದಾರೆ. ಅದರಲ್ಲೂ ಅವರು ನೀಡಿರುವ ಕಾರಣ ನಿಜಕ್ಕೂ ಪ್ರಶ್ನಾರ್ಹವಾಗಿದೆ. ಲಾರೆನ್ಸ್​ ಮಾಡಿರುವ ಟ್ವೀಟ್​ ಇಲ್ಲಿದೆ.ರಾಘವ ಲಾರೆನ್ಸ್​ರ ಟ್ವೀಟ್​ ವಿವರ ಹೀಗಿದೆ...

ತಮಿಳಿನಲ್ಲಿ ಒಂದು ಮಾತಿದೆ. ಯಾವ ಮನೆಯಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲಿ ಕಾಲಿಡಬಾರದು ಎಂದು. ಈ ಪ್ರಪಂಚದಲ್ಲಿ ಹಣ ಹಾಗೂ ಖ್ಯಾತಿಗಿಂತ ಆತ್ಮಗೌರವ ಬಹಳ ಮುಖ್ಯ. ಅದಕ್ಕೆ ಕಾಂಚನಾ ಸಿನಿಮಾದ ಹಿಂದಿ ರೀಮೇಕ್​ 'ಲಕ್ಷ್ಮಿ ಬಾಂಬ್​' ಸಿನಿಮಾದಿಂದ ಹೊರ ಬಂದಿದ್ದೇನೆ. ನನ್ನ ಈ ನಿರ್ಧಾರಕ್ಕೆ ಸಾಕಷ್ಟು ಕಾರಣಗಳಿವೆ. ಆದರೆ ಅವುಗಳಲ್ಲಿ ಒಂದನ್ನು ಮಾತ್ರ ಹೇಳಲು ಬಯಸುತ್ತೇನೆ. ಕಳೆದ ಶನಿವಾರ ನನ್ನ ಗಮನಕ್ಕೆ ಬಾರದಂತೆ ಚಿತ್ರದ ಫಸ್ಟ್​ಲುಕ್​ ಅನ್ನು ಬಿಡುಗಡೆ ಮಾಡಲಾಗಿದೆ. ನಂತರ ಮೂರನೇ ವ್ಯಕ್ತಿಯಿಂದ ನನಗೆ ಈ ವಿಷಯ ತಿಳಿಸಲಾಯಿತು. ಒಬ್ಬ ನಿರ್ದೇಶಕನಾಗಿ ನನ್ನ ಸಿನಿಂಆದ ವಿಷಯವನ್ನು ಮೂರನೇ ವ್ಯಕ್ತಿಯಿಂದ ತಿಳಿದುಕೊಳ್ಳುವುದು ನೋವಿನ ಸಂಗತಿ. ಅಷ್ಟೇ ಅಲ್ಲದೆ  ಸಿನಿಮಾ ಫಸ್ಟ್​ ಲುಕ್​ ನನಗೆ ಇಷ್ಟವಾಗಲಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದ್ದು, ಇದು ನನಗೆ ತೋರಿದ ಅಗೌರವ ಎಂದು ಭಾವಿಸಿದ್ದೇನೆ.

ನಟ ಅಕ್ಷಯ್​ ಕುಮಾರ್​ ಅವರ ಬಗ್ಗೆ ತನಗೆ ಗೌರವ ಇದೆ. ಅವರು ಈ ಸಿನಿಮಾಗೆ ಬೇರೆ ನಿರ್ದೇಶಕರನ್ನು ಹುಡುಕಿಕೊಳ್ಳುತ್ತಾರೆ ಎಂದು ರಾಘವ್​ ನೋವಿನಿಂದ ಬರೆದುಕೊಂಡಿದ್ದಾರೆ.

ಫಾಕ್ಸ್​ ಸ್ಟಾರ್​ ಸ್ಟುಡಿಯೋಸ್​ ಅರ್ಪಿಸುತ್ತಿರುವ ಈ ಸಿನಿಮಾವನ್ನು ಕೇಪ್​ ಆಫ್​ ಗುಡ್​ ಹೋಪ್​ ಪ್ರೊಡಕ್ಷನ್ಸ್​, ಸಬೀನಾ ಎಂಟರ್​ಟೈನ್​ಮೆಂಟ್​ ಹಾಗೂ ತುಷಾರ್ ಎಂಟರ್​ಟೈನ್​ಮೆಂಟ್​ ಹೌಸ್​ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ರಾಘವ್​ ಲಾರೆನ್ಸ್​ ನಿರ್ದೇಶಿಸುತ್ತಿದ್ದ ಈ ಚಿತ್ರದಲ್ಲಿ ಅಕ್ಷಯ್​ಗೆ ನಾಯಕಿಯಾಗಿ ಖೈರಾ ಅದ್ವಾನಿ ನಟಿಸುತ್ತಿದ್ದು,  2020 ಜೂನ್​ 5ಕ್ಕೆ 'ಲಕ್ಷ್ಮಿ ಬಾಂಬ್​' ತೆರೆಗಪ್ಪಳಿಸಬೇಕಿತ್ತು.

 PHOTOS: ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ರೊಮ್ಯಾನ್ಸ್​​

First published: