HOME » NEWS » Entertainment » DIRECTOR PREM RELEASED EKLOVEYA NEW POSTER ON ACTOR RANAS BIRTHDAY AE

HBD Raanna: ಹುಟ್ಟುಹಬ್ಬದ ಸಂಭ್ರಮದಲ್ಲಿ ಏಕ್​ ಲವ್​ ಯಾ ಸಿನಿಮಾದ ನಾಯಕ ರಾಣಾ: ಹೊಸ ಪೋಸ್ಟರ್​ ರಿಲೀಸ್​ ಮಾಡಿದ ಪ್ರೇಮ್​..!

ತಮಿಳಿನ ವೀರಂ, ವೇದಾಳಂನಂತರ ಸೂಪರ್​ಹಿಟ್​ ಸಿನಿಮಾಗೆ ಫೈಟ್ಸ್​ ಕೊರಿಯೋಗ್ರಾಫ್ ಮಾಡಿರುವ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ ಕನ್ನಡದ ಏಕಲವ್ಯ ಚಿತ್ರದಲ್ಲಿ ಸಾಹಸ​ ನಿರ್ದೇಶನ ಮಾಡಿದ್ದಾರೆ.

Anitha E | news18-kannada
Updated:October 15, 2020, 8:33 AM IST
HBD Raanna: ಹುಟ್ಟುಹಬ್ಬದ ಸಂಭ್ರಮದಲ್ಲಿ ಏಕ್​ ಲವ್​ ಯಾ ಸಿನಿಮಾದ ನಾಯಕ ರಾಣಾ: ಹೊಸ ಪೋಸ್ಟರ್​ ರಿಲೀಸ್​ ಮಾಡಿದ ಪ್ರೇಮ್​..!
ಏಕ್​ ಲವ್​ ಯಾ ಸಿನಿಮಾ ಹೊಸ ಪೋಸ್ಟರ್​
  • Share this:
ರಕ್ಷಿತಾ ಪ್ರೇಮ್​ ನಿರ್ಮಾಣದ ಹಾಗೂ ಪ್ರೇಮ್​ ನಿರ್ದೇಶನದ ಏಕಲವ್ಯಯಾ ಸಿನಿಮಾದ ನಾಯಕ ರಾಣಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಿನಿಮಾದ ಮೂಲಕ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಪರಿಚಯವಾಗುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇನ್ನು ದಿ​ ವಿಲನ್​ ಚಿತ್ರದ ನಂತರ ಪ್ರೇಮ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರ ಇದಾಗಿದೆ. ರಾಣಾ ಹುಟ್ಟುಹಬ್ಬವನ್ನು ಏಕ್​ ಲವ್​ ಯಾ ಚಿತ್ರತಂಡ ಹಾಗೂ ಕುಟುಂಬದವರೊಂದಿಗೆ  ಆಚರಿಸಲಾಯಿತು. ರಾಣಾ ಕೇಕ್​ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದರ ಜೊತೆಗೆ ಚಿತ್ರತಂಡದ ಕಡೆಯಿಂದ ರಾಣಾ ಹುಟ್ಟುಹಬ್ಬದಂದು ಒಂದು ಹೊಸ ಪೋಸ್ಟರ್​ ಸಹ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​ನಲ್ಲಿ ಲೀಕಿಂಗ್​ (ಸ್ಮೊಕಿಂಗ್​) ಇಸ್​ ಇನ್​ಜುರಿಯಸ್ಟ್​ ಟು ಹೆಲ್ತ್​ ಎಂಬ ಟ್ಯಾಗ್​ ಲೈನ್​ ಬರೆಯಲಾಗಿದೆ. 

ಇನ್ನು ಪ್ರೇಮ್​ ಅವರ ಈ ಸಿನಿಮಾದ ಚಿತ್ರೀಕರಣ ಈಗ ಮತ್ತೆ ಆರಂಭವಾಗಿದ್ದು, ಮೊದಲು ಊಟಿಯಲ್ಲಿ ಶೂಟಿಂಗ್​ ನಡೆಯಲಿದೆ. ಕಾರಣ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಅದರ ಪ್ಯಾಚ್​ ವರ್ಕ್​ ಊಟಿಯಲ್ಲಿ ನಡೆಯಲಿದ್ದು, ನಂತರ ರಾಜಸ್ತಾನ, ಕಾಸ್ಮೀರ ಸೇರಿದಂತೆ ಹಲವಾರು ಕಡೆ ಮುಂದುವರೆಯಲಿದೆಯಂತೆ.
View this post on Instagram

@rakshitha__official @rachita_instaofficial @vijay_eshwar @reeshma_nanaiah @manju_gowda_bs #Ekloveya audio soon🎧 #prems


A post shared by Prem❣️s (@directorprems) on


ತಮಿಳಿನ ವೀರಂ, ವೇದಾಳಂನಂತರ ಸೂಪರ್​ಹಿಟ್​ ಸಿನಿಮಾಗೆ ಫೈಟ್ಸ್​ ಕೊರಿಯೋಗ್ರಾಫ್ ಮಾಡಿರುವ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ ಕನ್ನಡದ ಏಕಲವ್ಯ ಚಿತ್ರದಲ್ಲಿ ಸಾಹಸ​ ನಿರ್ದೇಶನ ಮಾಡಿದ್ದಾರೆ.

Happy Birthday Raanna, Ekloveya movie, Rana birthday, ekloveya new poster, rachita ram, rakshita prem, , Jogi Jaatre, Kannada movie Jogi, 15 years For Jogi, director Prem facebook live, JOGI15Years, ಜೋಗಿ ಜಾತ್ರೆ, ಜೋಗಿ ಪ್ರೇಮ್​, ಸ್ಯಾಂಡಲ್​ವುಡ್​, ಜೋಗಿ ಸಿನಿಮಾಗೆ 15 ವರ್ಷ, ಶಿವರಾಜ್​ಕುಮಾರ್​, ಜೋಗಿ ಜಾತ್ರೆ ಕಾಮನ್​ ಸಿಪಿಡಿ
ರಚಿತಾ ರಾಮ್


ಜೋಗಿ ಪ್ರೇಮ್ ನಿರ್ದೇಶನದ ‘ಎಕ್ ಲವ್ ಯಾ’ ಸಿನಿಮಾದ ಟೀಸರ್ ನಿನ್ನೆ ರಿಲೀಸ್ ಆಗಿದೆ. ರಾಣಾ ಅಭಿನಯದ ಈ ಚಿತ್ರದಲ್ಲಿ ರಚಿತಾ ಕೂಡ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಟೀಸರ್ನಲ್ಲಿ ಲಿಪ್ ಲಾಕ್ ಮಾಡಿ, ಸಿಗರೇಟ್ ಸೇದಿ ರಚಿತಾ ರಾಮ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.ಲಾಕ್​ಡೌನ್​ ಸಡಿಲಗೊಂಡ ನಂತರ ನಿರ್ದೇಶಕ ಪ್ರೇಮ್​ ಹಾಗೂ ಏಕ್​ ಲವ್​ ಯಾ ಚಿತ್ರತಂಡ ಊಟಿಗೆ ಹೋಗಿತ್ತು. ಅಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿ ಲೊಕೇಷನ್​ ಹುಡುಕಾಟದಲ್ಲಿ ನಿರತರಾಗಿದ್ದರು. ಈ ವೇಳೆ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ಪ್ರೇಮ್​ ಚಿತ್ರಮಂದಿರಗಳು ಮತ್ತೆ ಓಪನ್​ ಆಗುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರೇಕ್ಷಕರೇ ನಮ್ಮ ಅನ್ನದಾತರು. ಚಿತ್ರಮಂದಿರಗಳು ತೆರೆಯುತ್ತಿವೆ. ಮತ್ತೆ ಬಂದು ನೀವು ಕನ್ನಡ ಸಿನಿಮಾಗಳನ್ನು ನೋಡಿ ಆನಂದಿಸಿ ಎಂದು ಮನವಿ ಮಾಡಿದ್ದಾರೆ.
Published by: Anitha E
First published: October 15, 2020, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories