ನಿರ್ದೇಶಕ ಪ್ರೇಮ್ (Director Prem) ಹೊಸ ಯುದ್ಧಕ್ಕೆ ಮುನ್ನಡಿ ಆರಂಭಿಸಿದ್ದಾರೆ. ಈ ಯುದ್ಧಕ್ಕೆ ಅವರ ಜೊತೆ ಕೈ ಜೋಡಿಸಿರುವುದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja). ಇದೇ ಮೊದಲ ಬಾರಿ ಈ ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಸೆಟ್ಟಿರುತ್ತಿದೆ. ಚಿತ್ರದ ಟೈಟಲ್ ಇನ್ನು ಅಧಿಕೃತವಾಗಿಲ್ಲವಾದರೂ, ಈ ಯುದ್ಧಕ್ಕೆ ಇಬ್ಬರು ಕೈ ಜೋಡಿಸಿದ್ದಾರೆ. ಈ ಕುರಿತು ನಿರ್ದೇಶಕ ಪ್ರೇಮ್ (Director Prem New fim) ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಕೆವಿನ್ ಪ್ರೊಡಕ್ಷನ್ನಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರದ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕುತೂಹಲ ಮೂಡಿಸಿದ ಪ್ರೇಮ್ ಟ್ವೀಟ್ (Director Prem Twee)
ಇನ್ನು ಯುದ್ಧದ ಮುನ್ನಡಿ ಇಲ್ಲಿಂದ ಆರಂಭ ಎಂಬ ನಿರ್ದೇಶಕರ ಸಾಲು ಎಲ್ಲರ ಗಮನ ಸೆಳೆದಿದೆ. ವಿಶೇಷ ಕಥಾಚಿತ್ರಗಳ ನಿರ್ದೇಶನದಲ್ಲಿ ಈಗಾಗಲೇ ಪ್ರೇಮ್ ಖ್ಯಾತರಾಗಿದ್ದು, ಇದು ಪ್ರೇಮ ಯುದ್ದವೋ ಅಥವಾ ಜೀವನದ ಹೋರಾಟದ ಯುದ್ಧವೋ ಅಥವಾ ಮತ್ಯಾವ ಯುದ್ಧವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ. @DhruvaSarja #kvnproductions 🙏🙏🙏
The prelude to the war begins now. Shower us with your love and support like you always do.
Love you all. #prems09 #dhruvasarja06 pic.twitter.com/vdVDQHFSrH
— PREM❣️S (@directorprems) August 24, 2021
ಈಗಾಗಲೇ ಒಂದರ ಮೇಲೆ ಒಂದು ಮಾಸ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಧ್ರವ ಸರ್ಜಾ ಅವರ ಆರನೇ ಚಿತ್ರ ಇದಾಗಿದೆ. ಇತ್ತೀಚೆಗಷ್ಟೇ ಅವರ ಮಾರ್ಟಿನ್ ಚಿತ್ರಕ್ಕೆ ಚಾಲನೆ ನೀಡಿದ್ದರು. ಈ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ಇದೀಗ ನಿರ್ದೇಶಕ ಪ್ರೇಮ್ ಜೊತೆ ಮತ್ತೊಂದು ಹೊಸ ಚಿತ್ರ ಘೋಷಣೆ ಮಾಡಿದ್ದಾರೆ.
ಹೆಚ್ಚಿದೆ ನಿರೀಕ್ಷೆ
ನಿರ್ದೇಶಕ ಪ್ರೇಮ್ ಸಿನಿಮಾಗಳು ಎಂದರೆ ಅದರಲ್ಲಿ ಒಂದು ವಿಶೇಷ ಇರುವುದು ಸಾಮಾನ್ಯ. ಈಗ ಅವರು ಆಕ್ಷನ್ ಪ್ರಿನ್ಸ್ ಧ್ರವ ಸರ್ಜಾ ಜೊತೆ ಒಂದಾಗಿರುವುದರಿಂದ ಚಿತ್ರ ಮಾಸ್ ಜೊತೆ ಅದ್ಭುತ ಲವ್ ಸ್ಟೋರಿ ಕಥೆ ಹೊಂದಿರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನು ಓದಿ: ಮಣಿರತ್ನಂ ಸಿನಿಮಾದಲ್ಲಿನ ಐಶ್ವರ್ಯಾ ರೈ ಪಾತ್ರ ಲೀಕ್
ನಾಯಕಿ ಯಾರು
ನಿರ್ದೇಶಕರ ಕಥೆಗೆ ಧ್ರುವ ಸರ್ಜಾ ಒಪ್ಪಿಕೊಂಡಿದ್ದಾರೆ. ನಾಯಕನ ಹೊರತಾಗಿ ಯಾವುದೇ ಕಲಾವಿದರ ಆಯ್ಕೆ ಇನ್ನು ಆಗಿಲ್ಲ. ಈ ಹಿನ್ನಲೆ ಉಳಿದ ತಾರಗಣದ ಆಯ್ಕೆ ಇನ್ನು ನಡೆದಿಲ್ಲ. ಜೊತೆಗೆ ಈ ಚಿತ್ರದಲ್ಲಿ ಧ್ರವ ಸರ್ಜಾಗೆ ಯಾರಾಗಲಿದ್ದಾರೆ ನಾಯಕ ನಟಿ ಎಂಬ ಕುತೂಹಲ ಕೂಡ ಇದೆ.
ಸದ್ಯ ನಿರ್ದೇಶಕ ಪ್ರೇಮ್ ಎಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ನಟ ಧ್ರವ ಅವರೊಂದಿಗೆ ಡೇಟ್ ಹೊಂದಾಣಿಕೆ ಮಾಡಿಕೊಂಡು, ಉಳಿದ ತಾರಾಗಣ ಸೇರಿದಂತೆ ತಾಂತ್ರಿಕ ತಂಡದ ಆಯ್ಕೆ ಆದ ಬಳಿಕ ಈ ಹೊಸ ಚಿತ್ರದ ಚಿತ್ರೀಕರಣ ಚಿತ್ರೀಕರಣ ಆರಂಭಿಸಲಿದ್ದಾರೆ. ಅಂದ ಹಾಗೆ ನಿರ್ದೇಶಕ ಪ್ರೇಮ್ ಅವರ ಒಂಭತ್ತನೇ ಚಿತ್ರ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ