ಲಾಕ್ಡೌನ್ ಸಮಯದಲ್ಲಿ ಸಿನಿಮಾ ನಿರ್ದೇಶಕರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ನಿರ್ದೇಶಕ ಪ್ರೇಮ್ ಕೂಡ ಏಕ್ ಲವ್ ಯಾ ಸಿನಿಮಾ ಮ್ಯೂಸಿಕ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆಂದೇ ಸ್ವಾಮೀಜಿಯೊರೊಬ್ಬರ ಜೊತೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ!.
ಅಂದಹಾಗೇ, ಈ ಮೊದಲು ಅರ್ಜುನ್ ಜನ್ಯ ಅವರು ‘ಏಕ್ ಲವ್ ಯಾ‘ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದರಲ್ವಾ? ಹಾಗಿದ್ದರೆ ಇದೀಗ ಹೊಸ ಸ್ವಾಮೀಜಿ ಒಬ್ಬರತ್ರ ಸಂಗೀತ ಸಂಯೋಜಿಸುತ್ತಿದ್ದಾರಾ? ಎಂಬ ಪ್ರಶ್ನೆಗಳು ಅನೇಕರಲ್ಲಿ ಉದ್ಭವವಾಗಿರಬಹುದು. ಅದಕ್ಕೆ ಪ್ರೇಮ್ ಅವರೇ ಉತ್ತರ ಕೊಟ್ಟಿದ್ದಾರೆ!.
ಇತ್ತೀಚೆಗೆ ಸರ್ಕಾರ ಸಿನಿಮಾಗೆ ಸಂಬಂಧಿಸಿದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸೀಮಿತ ಜನರನ್ನು ಬಳಸಿಕೊಂಡು ಕೆಲಸ ಮಾಡಬಹುದೆಂದು ಹೇಳಿತ್ತು. ಅದರಂತೆ ಪ್ರೇಮ್ ಕೂಡ ತಮ್ಮ ‘ಏಕ್ ಲವ್ ಯಾ‘ ಚಿತ್ರದ ಹಾಡುಗಳ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶುಕ್ರವಾರದಂದು ಅರ್ಜುನ್ ಜನ್ಯ ಅವರ ಸ್ಟುಡಿಯೋಗೆ ತೆರಳಿದ್ದಾರೆ ಈ ವೇಳೆ ಅರ್ಜುನ್ ಜನ್ಯ ಅವರ ಅವತಾರ ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪ್ರೇಮ್ ತಮ್, ಟ್ವಿಟ್ಟರ್ ಖಾತೆಯಲ್ಲಿ ಇವ್ರ್ಯಾರೋ ಹೊಸ ಸ್ವಾಮೀಜಿ ಅಂತ ಕನ್ಫ್ಯೂಸ್ ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ. ಸಾಂಗ್ಗಳನ್ನ ಕೊಡೋದರ ಜೊತೆಗೆ ಅವರ ಗೆಟಪ್ ಕೂಡ ಅಪ್ಡ್ಡೇಟ್ ಮಾಡ್ಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ confuse ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ...
Updated ಸಾಂಗ್'ಗಳನ್ನ ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ update ಮಾಡ್ಕೊಂಡಿದಾರೆ. #EkLoveya rerecording on swing🎸#Audio Soooon ❤️ on @A2Music2 @RakshithaPrem @Raanna_6 @ArjunMusician #Prems pic.twitter.com/VNVXNb3EBd
— PREM❣️S (@directorprems) May 22, 2020
Salman Khan: ದಕ್ಷಿಣ ಭಾರತದ ನಿರ್ದೇಶಕನತ್ತ ಸಲ್ಮಾನ್ ಖಾನ್ ಚಿತ್ತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ