HOME » NEWS » Entertainment » DIRECTOR PREM CELEBRATING HIS BIRTHDAY IN OOTY WITH EKLOVEYA TEAM AE

HBD Prem: ಹುಟ್ಟುಹಬ್ಬದಂದು ಊಟಿಯಲ್ಲಿದ್ದರೂ ಅಭಿಮಾನಿಗಳನ್ನು ಭೇಟಿ ಮಾಡ್ತಾರಂತೆ ಜೋಗಿ ಪ್ರೇಮ್..!

Jogi Prem: ಏಕ್​ ಲವ್​ ಯಾ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಅದಕ್ಕಾಗಿ ಪ್ರೇಮ್​ ಊಟಿ ತಲುಪಿದ್ದಾರೆ. ಈ ಕುರಿತಾಗಿಯೇ ಪ್ರೇಮ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Anitha E | news18-kannada
Updated:October 21, 2020, 3:06 PM IST
HBD Prem: ಹುಟ್ಟುಹಬ್ಬದಂದು ಊಟಿಯಲ್ಲಿದ್ದರೂ ಅಭಿಮಾನಿಗಳನ್ನು ಭೇಟಿ ಮಾಡ್ತಾರಂತೆ ಜೋಗಿ ಪ್ರೇಮ್..!
ನಿರ್ದೇಶಕ ಪ್ರೇಮ್​
  • Share this:
ಒಂದು ಕಡೆ ಕೊರೋನಾ, ಮತ್ತೊಂದು ಕಡೆ ಸುರಿಯುತ್ತಿರುವ ಮಳೆ. ಇವರೆಡರ ನಡುವೆ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣಗಳಿಂದಾಗಿಯೇ ಈ ಸಲ ಯಾವ ಸೆಲೆಬ್ರಿಟಿಗಳೂ ತಮ್ಮ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಕೆಲವರು ಮನೆಯಲ್ಲಿ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರೆ, ಮತ್ತೆ ಕೆಲವರು ಊರಿನಿಂದ ದೂರ ಹೋಗುತ್ತಿದ್ದಾರೆ. ಕಾರಣ ಇಷ್ಟೆ, ಕೊರೋನಾ ಇರುವುದರಿಂದ ಅಭಿಮಾನಿಗಳು ಮನೆಗಳ ಬಳಿ ಬಂದು ಗುಂಪುಗೂಡುವುದನ್ನು ತಪ್ಪಿಸುವುದು. ನಾಳೆ ಸ್ಯಾಂಡಲ್​ವುಡ್​ ನಿರ್ದೇಶಕ ಜೋಗಿ ಪ್ರೇಮ್​ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅವರೂ ಈ ಸಲ ಮನೆಯಲ್ಲಿ ಇರುವುದಿಲ್ಲವಂತೆ. ಆದ ಕಾರಣದಿಂದ ಯಾರೂ ಅವರ ನೆ ಬಳಿ ಬಂದು ಕಾಯುವುದು ಬೇಡವೆಂದು ಪ್ರೇಮ್​ ಮನವಿ ಮಾಡಿದ್ದಾರೆ.  ಪ್ರೇಮ್​ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ ಏಕ್​ ಲವ್​ ಯಾ  ಚಿತ್ರೀಕರಣದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಏಕ್​ಲವ್​ ಯಾ ಸಿನಿಮಾದ ಚಿತ್ರೀಕರಣಕ್ಕಾಗಿ ಲೊಕೇಷನ್​ ಹುಡುಕಾಟದಲ್ಲಿದ್ದಾರೆ ನಿರ್ದೇಶಕ ಪ್ರೇಮ್​. ಅದಕ್ಕಾಗಿ ಅವರು ಇತ್ತೀಚೆಗೆ ಊಟಿಗೆ ಹೋಗಿದ್ದರು. ಲಾಕ್​ಡೌನ್​ನಿಂದಾಗಿ ನಿಂತಿರುವ ಸಿನಿಮಾದ ಶೂಟಿಂಗ್​ನ ಪ್ಯಾಚ್​ ವರ್ಕ್​ ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ನು, ಏಕ್​ ಲವ್​ ಯಾ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಅದಕ್ಕಾಗಿ ಪ್ರೇಮ್​ ಊಟಿ ತಲುಪಿದ್ದಾರೆ. ಈ ಕುರಿತಾಗಿಯೇ ಪ್ರೇಮ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
'ಎಲ್ಲ ನನ್ನ ಪ್ರೀತಿಯ ಸ್ನೇಹಿತರಲ್ಲೊಂದು ಮನವಿ, ನಮ್ಮ ಏಕ್'ಲವ್'ಯಾ ಶೂಟಿಂಗ್ ಇರುವ ಕಾರಣ ಈ ಬಾರಿ ನನ್ನ ಹುಟ್ಟುಹಬ್ಬದ ದಿನ ಊಟಿಯಲ್ಲಿರ್ತೀವಿ,
ಎಲ್ಲಿದ್ದರೂ ಹೇಗಿದ್ದರೂ ಸದಾ ನಿಮ್ಮೊಟ್ಟಿಗೆ ನಾನು. ನಿಮ್ಮ ಅಭಿಮಾನವೇ ನನ್ನ ಶ್ರೀರಕ್ಷೆ.  22ರಂದು ರಾತ್ರಿ 12ಕ್ಕೆ ಅಂದರೆ ಇಂದು ರಾತ್ರಿ ಶೂಟಿಂಗ್ ಸ್ಪಾಟ್​ನಿಂದಲೇ ಲೈವ್ ಬರ್ತೀನಿ' ಎಂದು ಪ್ರೇಮ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂದು ರಾತ್ರಿ ಲೈವ್​ ಬರುವ ಮೂಲಕ ಅಭಿಮಾನಿಗಳನ್ನು ಭೇಟಿಯಾಗುತ್ತಿರುವ ಪ್ರೇಮ್​, ಏಕ್​ ಲವ್​ ಯಾ ನಂತರ ಸುದೀಪ್​ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಬಗ್ಗೆ ಪ್ರಕಟಿಸಿದ್ದಾರೆ. ದಿ ವಿಲನ್​ ನಂತರ ಸುದೀಪ್​ ಹಾಗೂ ಪ್ರೇಮ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರ ಇದಾಗಿದೆ.
Published by: Anitha E
First published: October 21, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories