HOME » NEWS » Entertainment » DIRECTOR PREM CELEBRATED HIS BIRTHDAY AND KICHCHA SUDEEP WISHED HIM AE

HBD Prem: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ಪ್ರೇಮ್​: ವಿಶ್ ಮಾಡಿದ ಕಿಚ್ಚ ಸುದೀಪ್

Jogi Prem: ಊಟಿಯಲ್ಲಿ ಏಕ್​ಲವ್​ಯಾ ಚಿತ್ರತಂಡದೊಂದಿಗೆ ಮಧ್ಯರಾತ್ರಿ ಕೇಕ್​ ಕತ್ತರಿಸುವ ಮೂಲಕ ಪ್ರೇಮ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನೂ ಪ್ರೇಮ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Anitha E | news18-kannada
Updated:October 22, 2020, 3:08 PM IST
HBD Prem: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ಪ್ರೇಮ್​: ವಿಶ್ ಮಾಡಿದ ಕಿಚ್ಚ ಸುದೀಪ್
ಪ್ರೇಮ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುದೀಪ್​
  • Share this:
ಸ್ಯಾಂಡಲ್​ವುಡ್​ ನಿರ್ದೇಶಕ ಜೋಗಿ ಖ್ಯಾತಿಯ ಪ್ರೇಮ್​ ಇಂದು ಊಟಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ಹಾಗೂ ನಿರ್ದೇಶಕನ ಬರ್ತ್​ ಡೇಗೆ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಇನ್ನು ಹುಟ್ಟುಹಬ್ಬದಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಆದರೆ, ಇರುವ ಜಾಗದಿಂದಲೇ ಲೈವ್​ ಬರುವುದಾಗಿ ಪ್ರೇಮ್ ಹೇಳಿದ್ದರು. ಹೇಳಿದಂತೆಯೇ ಅವರು ಲೈವ್ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಇನ್ನು ತಮ್ಮ ಬಹುನಿರೀಕ್ಷಿತ ಸಿನಿಮಾ ಏಕ್​ಲವ್​ಯಾ ಶೂಟಿಂಗ್​ಗಾಗಿ ಊಟಿಗೆ ಹೋಗಿದ್ದಾರೆ. ಊಟಿಯಲ್ಲಿ ಸಿನಿಮಾದ ಪ್ಯಾಚ್​ ವರ್ಕ್​ ಮಾಡಲು ಲೊಕೇಷನ್​ ಹುಡುಕಿದ್ದು, ಅದರಂತೆ ಈಗ ಚಿತ್ರೀಕರಣ ಆರಂಭಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸಲ ಪ್ರೇಮ್​ ತಮ್ಮ ಹುಟ್ಟುಹಬ್ಬವನ್ನು ಏಕ್​ಲವ್​ಯಾ ಚಿತ್ರತಂಡದೊಂದಿಗೆ ಆಚರಿಸಿಕೊಂಡಿದ್ದಾರೆ. ಅದೂ ಕೂಡ ತುಂಬಾ ಸರಳವಾಗಿದೆ. ಇಲ್ಲಿವೆ ಜೋಗಿ ಪ್ರೇಮ್​ ಹುಟ್ಟುಹಬ್ಬ ಆಚರಣೆ ಕುರಿತಾದ ಮಾಹಿತಿ.

ಊಟಿಯಲ್ಲಿ ಏಕ್​ಲವ್​ಯಾ ಚಿತ್ರತಂಡದೊಂದಿಗೆ ಮಧ್ಯರಾತ್ರಿ ಕೇಕ್​ ಕತ್ತರಿಸುವ ಮೂಲಕ ಪ್ರೇಮ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನೂ ಪ್ರೇಮ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.





ಇನ್ನು ಪ್ರೇಮ್​ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್​ ಸಹ ಶುಭ ಕೋರಿದ್ದಾರೆ. ಸಹೋದರ ನಿನಗೆ ಶುಭವಾಗಲಿ ಎಂದು ಹಾರೈಸಿದ್ದಾರೆ ಸುದೀಪ್​.



ಪ್ರೇಮ್​ ಹುಟ್ಟುಹಬ್ಬಕ್ಕೆ ಮಂಡ್ಯದ ಮುತ್ತು ಅಭಿಮಾನಿ ಬಳಗದವರು ಒಂದು ಹಾಡಿನ್ನು ಮಾಡಿದ್ದಾರೆ. ಅದನ್ನೇ ನಿರ್ದೇಶಕನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.



ಪ್ರೇಮ್​ ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾಗಳನ್ನು ನಿರ್ದೇಶನ ಮಾಡುವುದರೊಂದಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ನಿರ್ದೇಶನದ ಏಕ್​ಲವ್​ಯಾ ಚಿತ್ರೀಕರಣ ಮುಗಿದ ನಂತರ ಪ್ರೇಮ್​ ಸುದೀಪ್​ ಅವರಿಗಾಗಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ.










View this post on Instagram





Thanks for wishing me through an announcement of these movies ❤️🙏 heartfelt thanks to everyone, love u❤️ #prems


A post shared by Prem❣️s (@directorprems) on






ಇವುಗಳ ಜೊತೆಗೆ ಕಲ್ಕಿ, ಪ್ರೊಡಕ್ಷನ್​ ನಂ 2 ಹಾಗೂ ಕೇಡಿ ಕಿಷ್ಣ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಎಂಎಸ್​ಆರ್ ಪ್ರೊಡಕ್ಷನ್ಸ್​ ಅಡಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾದಲ್ಲಿ ಪ್ರೇಮ್​ ನಾಯಕರಾಗಿದ್ದಾರೆ. ಈ ವಿಷಯವನ್ನು ಚಿತ್ರತಂಡ ಇಂದು ಪೋಸ್ಟರ್​ ರಿಲೀಸ್ ಮಾಡುವ ಮೂಲಕ ಹಂಚಿಕೊಂಡಿದೆ. ಈ ಸಿನಿಮಾಗೆ ಇನ್ನೂ ಟೈಟಲ್​ ಫಿಕ್ಸ್​ ಮಾಡಿಲ್ಲ.
Published by: Anitha E
First published: October 22, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories