Anitha EAnitha E
|
news18-kannada Updated:November 30, 2020, 9:02 AM IST
ಕಾಶ್ಮೀರದಲ್ಲಿ ನಿರ್ದೇಶಕ ಪ್ರೇಮ್
ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಸದ್ಯ ಏಕಲವ್ ಯಾ ಸಿನಿಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ಪತ್ನಿ ರಕ್ಷಿತಾರ ಸಹೋದರ ರಾಣಾ ಅವರನ್ನೇ ಈ ಸಿನಿಮಾಗೆ ನಾಯಕನನ್ನಾಗಿ ತೆಗೆದುಕೊಂಡಿರುವುದು ಗೊತ್ತೇ ಇದೆ. ಲಾಕ್ಡೌನ್ ಆರಂಭವಾಗುವ ಮೊದಲೇ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿತ್ತು. ಇನ್ನು ಈಗ ಲಾಕ್ಡೌನ್ ಸಡಿಲಗೊಂಡ ನಂತರ ಸಿನಿಮಾದ ಮೊದಲ ಹಂತದ ಚಿತ್ರೀಕರಣದ ಊಟಿಯಲ್ಲಿ ನಡೆಯಿತು. ಊಟಿಯಿಂದ ಪ್ರೇಮ್ ಲೊಕೇಷನ್ ಹುಡುಕಾಟಕ್ಕಾಗಿ ಕಾಶ್ಮೀರಕ್ಕೆ ತಲುಪಿದ್ದರು. ಕಾಶ್ಮೀರದ ಕಣಿವೆಗಳಲ್ಲಿ ಸುತ್ತಾಡುತ್ತಾ, ತಮ್ಮ ನಿತ್ಯದ ಅಪ್ಡೇಟ್ ಅನ್ನೂ ಅಭಿಮಾನಿಗಳಿಗೆ ನೀಡುತ್ತಿದ್ದರು. ಕಾಶ್ಮೀರದ ಕಣಿವೆಗಳಲ್ಲಿ ಈಗಾಗಲೇ ಮಣು ಹಿಮ ಬೀಳಲು ಆರಂಭವಾಗಿದೆ. ಭೂಮಿ ಮೇಲಿನ ಸ್ವರ್ಗವಾಗಿರುವ ಕಾಶ್ಮೀರದಲ್ಲಿ ಹಿಮ ಬಿದ್ದಾಗ ಅದರ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಇಂತಹ ಸಮಯಕ್ಕಾಗಿಯೇ ಕಾಯುತ್ತಿದ್ದ ನಿರ್ದೇಶಕ ಪ್ರೇಮ್ ಈಗ ಕಾಶ್ಮೀರದಲ್ಲಿ ಶೂಟಿಂಗ್ ಆರಂಭಿಸಿದ್ದಾರೆ.
ಹೌದು, ನಿರ್ದೇಶಕ ಪ್ರೇಮ್ ಹಾಗೂ ಅವರ ಏಕ ಲವ್ ಯಾ ಚಿತ್ರತಂಡ ಈಗಾಗಲೇ ಕಾಶ್ಮೀರಕ್ಕೆ ಬಂದು ಇಳಿದಿದ್ದಾರೆ. ಅಲ್ಲಿನ ಮೈಕೊರೆಯುವ ಚಳಿಯಲ್ಲಿ ಸಿನಿಮಾ ಚಿತ್ರೀಕರಣದಕ್ಕೆ ಎಲ್ಲ ಸಿದ್ಧಥೆ ಮಾಡಿಕೊಳ್ಳುತ್ತಿದ್ದಾರೆ.
ಆರ್ಟಿಕಲ್ 370 ಜಾರಿಗೆ ತಂದ ನಂತರ ಕಾಶ್ಮೀರದಲ್ಲಿ ಕನ್ನಡ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ ಎಂದು ಪ್ರೇಮ್ ಖುಷಿಯಿಂದ ಅಭಿಮಾನಿಗಳೊಂದಿಗೆ ಹಂಚಿಕೊಡಿದ್ದಾರೆ. ಇನ್ನು ಈ ಸಿನಿಮಾದ ಆಡಿಯೋ ಸಹ ಸದ್ಯದಲ್ಲೇ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ ಪ್ರೇಮ್.
ಇನ್ನು ಈ ಸಿನಿಮಾ ಕಾಶ್ಮೀರದ ನಂತರ ಗುಜರಾತ್ನ ಹಲವಾರು ಭಾಗಗಳಲ್ಲೂ ಚಿತ್ರೀಕರಣಗೊಳ್ಳಲಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ಸಹ ನಟಿಸಿದ್ದು, ಟಾಮ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗರೇಟ್ ಹಿಡಿದು ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುವ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ ಗುಳಿ ಕೆನ್ನೆ ಸುಂದರಿ.
ಗುಜರಾತಿನಲ್ಲಿ ಶೂಟಿಂಗ್ ಲೊಕೇಷನ್ ನೋಡಲು ಹೋಗಿದ್ದಾಗ ಅಲ್ಲಿ ಕಣ್ಣಿಗೆ ಬಿದ್ದ ಎಮ್ಮೆ ಹಾಗೂ ಕರುವನ್ನು ಪ್ರೇಮ್ ತಮ್ಮ ತೋಟಕ್ಕೆ ತಂದಿದ್ದಾರೆ. ಅಮ್ಮನಿಗೆ ಮಂಡೋದರಿ ಹಾಗೂ ಮಗಳಿಗೆ ಭೈರವಿ ಎಂದು ಹೆಸರಿಟ್ಟಿದ್ದಾರೆ. ಇವು ಈಗ ಪ್ರೇಮ್ ಅವರ ಅಮ್ಮೊಂದಿಗೆ ತೋಟದಲ್ಲಿವೆ.
Published by:
Anitha E
First published:
November 30, 2020, 9:02 AM IST