ಸದ್ಯ ಕನ್ನಡ(Kannada) ಚಿತ್ರೋದ್ಯಮವು ಹಿಂದೆಂದಿಗಿಂತಲೂ ತನ್ನ ವರ್ಚಸ್ಸನ್ನು ಹೆಚ್ಚಿನ ಮಟ್ಟಕ್ಕೆ ಏರಿಸಿಕೊಂಡಿದ್ದು, ಬಾಲಿವುಡ್ (Bollywood) ಸೇರಿದಂತೆ ವಿವಿಧ ಭಾಷೆಯ ಸಿನಿಮಾ ರಂಗದಲ್ಲಿ ನಮ್ಮ ಕನ್ನಡದ (Kannada) ನಟ, ನಟಿಯರು ಹಾಗೂ ನಿರ್ದೇಶಕರು (Director) ಛಾಪು ಮೂಡಿಸುತ್ತಿದ್ದಾರೆ. ಕನ್ನಡದ ಸಿನಿಮಾ ಕೆಜಿಎಫ್ (KGF) ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಹಾಗೆಯೇ ಹಲವಾರು ಕನ್ನಡದ ಸಿನಿಮಾಗಳು ಹಿಂದಿ ಸೇರಿದಂತೆ ವಿವಿಧ ಭಾಷೆಗೆ ರಿಮೇಕ್ ಹಾಗೂ ಡಬ್ ಆಗಿದೆ. ಈಗ ಸ್ಯಾಂಡಲ್ವುಡ್ನ ನಿರ್ದೇಶಕರೊಬ್ಬರು ಬಾಲಿವುಡ್ಗೆ ಹಾರಿದ್ದಾರೆ.
ಅಕ್ಟೋಬರ್ನಿಂದ ಸಿನಿಮಾ ಆರಂಭ
ಹೌದು, ಗೂಗ್ಲಿ ಸಿನಿಮಾ ನಿರ್ದೇಶಕ ಪವನ್ ಒಡೆಯರ್, ಬಾಲಿವುಡ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಕನ್ನಡದ ಪ್ರತಿಭಾವಂತ ನಿರ್ದೇಶಕರ ಪೈಕಿ ಒಬ್ಬರಾದ ಪವನ್ ಒಡೆಯರ್ ಅವರು ಹಿಂದಿ ಚಿತ್ರರಂಗಕ್ಕೆ ಹಾರಿದ್ದು ಅಲ್ಲಿ ಅವರು ಬೆಂಗಾಲಿ ತಾರೆಯಾದ ಪರಂಬ್ರತಾ ಚಟ್ಟೋಪಾಧ್ಯಾಯ ಅವರೊಂದಿಗೆ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಇದೀಗ ಈ ಸಿನಿಮಾ ಬಗ್ಗೆ ಪವನ್ ಒಡೆಯರ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಪವನ್ ಒಡೆಯರ್ ಈಗಾಗಲೇ ತೆಲುಗಿನಲ್ಲಿ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಅವರದ್ದೇ ಸಿನಿಮಾ ಗೋವಿಂದಾಯ ನಮಃದ ರಿಮೇಕ್ ಆಗಿರುವ ಪೋಟುಗಾಡು ಎನ್ನುವ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ನೋಟರಿ ಎನ್ನುವ ಸಿನಿಮಾವನ್ನು ಹಿಂದಿಯಲ್ಲಿ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕರಲ್ಲಿ ಪವನ್ ಒಡೆಯರ ಕೂಡ ಒಬ್ಬರು. ಅವರು ಗೋವಿಂದಾಯ ನಮಃ ಹಾಗೂ ಗೂಗ್ಲಿ ಸೇರಿದಂತೆ ಅದ್ಭುತ ಸಿನಿಮಾಗಳನ್ನು ಜನರಿಗೆ ನೀಡಿದ್ದಾರೆ. ಈಗ ಹಿಂದಿಯಲ್ಲಿ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಮತ್ತೆ ತೆರೆ ಮೇಲೆ ಓಂ ಸಿನಿಮಾ? ಶಿವಣ್ಣ ಬಿಚ್ಚಿಟ್ರು ಸೀಕ್ರೆಟ್!
ಈ ಬಗ್ಗೆ ಹೇಳಿರುವ ಪವನ್ ಒಡೆಯರ್, ರೇಮೊ ಸಿನಿಮಾದ ಕೆಲಸದಲ್ಲಿ ಬಹಳ ಬ್ಯುಸಿ ಆಗಿದ್ದು, ಆ ಕೆಲಸ ಮುಗಿದ ನಂತರ ಹಿಂದಿ ಸಿನಿಮಾದತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ. ಈ ನೋಟರಿ ಸಿನಿಮಾದ ಕಥೆಯನ್ನು ನಾನೇ ಬರೆದಿದ್ದು,ಈ ಸಿನಿಮಾಗೆ ಸಂಭಾಷಣೆಯನ್ನು ಬಾಲಿವುಡ್ನ ಖ್ಯಾತ ಬರಹಗಾರರಾದ ಸ್ಪರ್ಶ್ ಮತ್ತು ತಾಷ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ, ಈ ಇಬ್ಬರ ಜೊತೆ ಸೇರಿ ನಾನು ಚಿತ್ರ ಕಥೆ ತಯಾರಿ ಮಾಡಿದ್ದು, ಅಕ್ಟೋಬರ್ನಿಂದ ಸಿನಿಮಾ ಸ್ಟಾರ್ ಆಗಬಹುದು ಎಂದು ತಿಳಿಸಿದ್ದಾರೆ.
ಸಿನಿಮಾ ನಿರ್ಮಾಣ ಮಾಡ್ತಿದ್ದಾರಂತೆ ಪವನ್
ಇನ್ನು ಪವನ್ ಒಡೆಯರ್ ಹೇಳುವಂತೆ ಅವರಿಗೆ ಬಹಳ ದಿನಗಳಿಂದ ಬಾಲಿವುಡ್ಗೆ ಬರುವಂತೆ ಆಫರ್ ಇತ್ತಂತ್ತೆ. ಇನ್ನು ಈ ಸಿನಿಮಾಗೆ ಸಿದ್ಧಾರ್ಥ್ ಮಲ್ಹೋತ್ರಾ ಅವರ 'ಶೇರ್ಷಾ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಶಬ್ಬೀರ್ ಬಾಕ್ಸ್ವಾಲ ಮತತು ಪವನ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ಮನದಲ್ಲಿ ರಾಜರತ್ನ ಅಜರಾಮರ, ಜಾತ್ರೆಯಲ್ಲೂ ಮಿಂಚಿದ ಪುನೀತ್ ರಾಜ್ಕುಮಾರ್ ಫೋಟೋ
ಈ ಮಧ್ಯೆ ಮೂಲಗಳ ಪ್ರಕಾರ ಪವನ್ ಒಡೆಯರ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಪವನ್ ಹೇಳುವಂತೆ ಈ ಸಿನಿಮಾದ ನಾಯಕ ಎಂದಿಗೂ ಸುಳ್ಳು ಹೇಳದ ಸಿದ್ಧಾಂತ ಹೊಂದಿರುವ ವ್ಯಕ್ತಿಯಾಗಿರುತ್ತಾನೆ. ಆದರೆ, ಆ ನಾಯಕ ತಾನು ಕೆಲಸ ಮಾಡುತ್ತಿರುವ ಕ್ಷೇತ್ರ ನಿತ್ಯ ಸುಳ್ಳು ಹೇಳುವಂತಹ ಕೆಲಸವಾಗಿರುತ್ತದೆ. ಆ ಸಂದರ್ಭಗಳನ್ನು ನಾಯಕ ತನ್ನ ನಂಬಿಕೆಗಳನ್ನು ತ್ಯಜಿಸದೆ ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ಕಥೆ ಸುತ್ತುತ್ತದೆ. ಪವನ್ ಹೇಳುವಂತೆ ಚಿತ್ರವು ಪ್ರಾರಂಭದಿಂದ ಅಂತ್ಯದವರೆಗೆ ಹಾಸ್ಯಮಯ ಅಂಶಗಳನ್ನು ಹೊಂದಿದಯೆಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ