Yash Next Movie: ಪ್ರಭಾಸ್ ಅಲ್ಲ, ಆ ಸ್ಟಾರ್ ಜೊತೆ ಸಿನಿಮಾ ಮಾಡ್ತಾರಂತೆ ರಾಕಿ ಭಾಯ್! ನಿಜವಾಗ್ಲಿ ಎಂದ ಫ್ಯಾನ್ಸ್

ಕೆಜಿಎಫ್ 3 ಚಿತ್ರ ಬರಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿರುವ  ಹಿನ್ನೆಲೆಯಲ್ಲೇ ರಾಕಿ ಬಾಯ್ ಯಶ್ ಇನ್ನೊಂದು ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಅದು ಈ ಸಿನಿಮಾದಲ್ಲಿ ಟಾಲಿವುಡ್​ನ ಸೂಪರ್​ ಸ್ಟಾರ್​ ಜೊತೆಯಾಗಲಿದ್ದಾರಂತೆ.

ರಾಕಿಂಗ್​ ಸ್ಟಾರ್​ ಯಶ್​, ರಾಮ್​ಚರಣ್​

ರಾಕಿಂಗ್​ ಸ್ಟಾರ್​ ಯಶ್​, ರಾಮ್​ಚರಣ್​

  • Share this:
ಕೆಜಿಎಫ್ ಚಾಪ್ಟರ್​ 3 ಚಿತ್ರ ಬರಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿರುವ  ಹಿನ್ನೆಲೆಯಲ್ಲೇ ರಾಕಿ ಬಾಯ್ ಯಶ್ (Yash)  ಇನ್ನೊಂದು ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಹಾಗೇ RRR  ಚಿತ್ರದಲ್ಲಿ ಅಭಿನಯಿಸಿ ಜನಪ್ರಿಯತೆಗೆ ಪಾತ್ರರಾಗಿರುವ   ಮೆಗಾ ಪವರ್ ಸ್ಟಾರ್ ರಾಮ್‌ಚರಣ್‌ ತೇಜಾ (Ram Charan Teja) ಕೂಡ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಇವ್ರಿಬ್ರು ಒಂದೇ ಸಿನಿಮಾದಲ್ಲಿ(Movie)ನಟಿಸ್ತಾರಾ? ಅಭಿನಯಿಸಲಿರೋ ಚಿತ್ರ ಯಾವ್ದು? ಈ ಚಿತ್ರಕ್ಕೆ ಆಕ್ಶನ್ ಕಟ್ ಹೇಳ್ತಿರೋದು ನಮ್ಮ ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕನಂತೆ. ಈ ಸುದ್ದಿ ತಿಳಿದ ಅಭಿಮಾನಿಗಳು ನಿಜವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಅಭಿಮಾನಿಗಳಿಗೆ ಸಿಹಿ ಸುದ್ದಿ:

ನಿರ್ದೇಶಕ ನರ್ತನ್  5 ವರ್ಷಗಳ ಹಿಂದೆ ಬಾಕ್ಸ್ ಆಫಿಸ್​​ನಲ್ಲಿ ಭರ್ಜರಿ ಸದ್ದು ಮಾಡಿದ ಮಫ್ತಿ ಸಿನಿಮಾಗೆ ಆ್ಯಕ್ಷನ್​ ಕಟ್ ಹೇಳಿದ್ದರು. ಸೆಂಚೂರಿ ಸ್ಟಾರ್​ ಶಿವರಾಜ್​ಕುಮಾರ್ ಹಾಗೂ ಶ್ರೀಮುರುಳಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಇನ್ನೂ ಯಶ್​​ ಅವರ ಮುಂದಿನ ಚಿತ್ರಕ್ಕೆ ಇವರೇ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಅಂತ ಸುದ್ದಿಯಾಘಿತ್ತು. ಇದೀಗ ಇದರ ಜೊತೆ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ನರ್ತನ್​ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಾಕಿ ಭಾಯ್​ ಅಷ್ಟೇ ಅಲ್ಲ ತೆಲುಗು ಸೂಪರ್​ ಸ್ಟಾರ್ ರಾಮ್​ ಚರಣ್​ ಕೂಡ ನಟಿಸ್ತಾರೆ ಅಂತ ಹೇಳಲಾಗುತ್ತಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕನ್ನಡಕ್ಕೆ ಬರ್ತಾರಾ ರಾಮ್​​ಚರಣ್​​ ತೇಜಾ?

ಶಂಕರ್ ನಿರ್ದೇಶನದ RRR ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದ ರಾಮ್​​ಚರಣ್​​ ಬಹುಕೋಟಿ ವೆಚ್ಚದ ಪಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸಿದ್ದು, ಈಗ ಕನ್ನಡ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ನಿರ್ದೇಶಕ ನರ್ತನ್ ಅವರು ಈಗಾಗಲೇ ಒನ್ ಲೈನ್ ಸ್ಟೋರಿ ಹೇಳಿದ್ದು ರಾಮ್​​ಚರಣ್​​ಗೆ ಈ ಕಥೆ ಹಿಡಿಸಿದೆ. ಹಾಗಾಗಿ ಅವರು ಮುಂದಿನ ಪೂರ್ತಿ ಕಥೆ ಕೇಳಲು ಉತ್ಸುಕರಾಗಿದ್ದು ಕಥೆಯ ಕುರಿತು ಚರ್ಚೆ ಆರಂಭಿಸಿದ್ದಾರೆ ಎಂದು ಸುದ್ದಿಯಾಗಿದೆ.

ಯಶ್


ನರ್ತನ್ ನಿರ್ದೇಶನ:

5 ವರ್ಷಗಳ ಹಿಂದೆ ಬಾಕ್ಸ್ ಆಫಿಸ್​​ನಲ್ಲಿ ಭರ್ಜರಿ ಸದ್ದು ಮಾಡಿದ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಆಕ್ಶನ್ ಕಟ್ ಹೇಳಲಿದ್ದಾರಂತೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ರೋರಿಂಗ್‌ ಸ್ಟಾರ್ ಶ್ರೀಮುರಳಿ ಅಭಿನಯದಲ್ಲಿ ವಿಭಿನ್ನವಾಗಿ ತೆರೆಕಂಡಿದ್ದ ಚಿತ್ರಕ್ಕೆ ಆಕ್ಶನ್ ಕಟ್ ಹೇಳಿದ್ದ ನರ್ತನ್ ಈ ಬಾರಿಯೂ ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ.

ರಾಮ್​ಚರಣ್


ಇದನ್ನೂ ಓದಿ: ಪ್ರಶಾಂತ್​ ಇಲ್ಲದ ಯಶ್​ ಝೀರೋ! ರಾಕಿ ಭಾಯ್, ಕಿಚ್ಚ ಸುದೀಪ್ ಫ್ಯಾನ್ಸ್ ವಾರ್!

ಫ್ಯಾನ್ ಇಂಡಿಯಾ ಮೂವಿ:

ಈಗ ನರ್ತನ್ ನಿರ್ದೇಶಿಸಲಿರುವ ಹೊಸ ಚಿತ್ರ ಬಿಗ್ ಬಜೆಟ್ ಹಾಗೂ ಪ್ಯಾನ್​ ಇಂಡಿಯಾ ಮೂವಿಯಾಗಲಿದೆ ಎಂಬ ವಿಚಾರವೂ ತಿಳಿದು ಬರುತ್ತಿದೆ. ಈ ಚಿತ್ರದಲ್ಲಿ ಇಬ್ಬರೂ ನಾಯಕ ನಟರ ಪಾತ್ರದಲ್ಲೇ ಅಭಿನಯಿಸುತ್ತಾರಾ? ಅಥವಾ ಒಬ್ಬರು ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಾರಾ?   RRR ಸಿನಿಮಾದಲ್ಲಿರುವಂತೆ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಾರಾ? ಅಥವಾ ಯಾರಾದರೂ ಒಬ್ಬರೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಡೈರೆಕ್ಟರ್ ನರ್ತನ್


ಇದನ್ನೂ ಓದಿ:ಸಖತ್ ಟ್ರೆಂಡ್​​ ಆಗಿದೆ ಯಶ್ ಹೇರ್​​ಸ್ಟೈಲ್​; ರಾಕಿ ಭಾಯ್ ಲುಕ್ ನಮಗೂ ಬೇಕು ಅಂತಿದ್ದಾರೆ ಫ್ಯಾನ್ಸ್​!

ಈ ಕಥೆಯನ್ನು ನರ್ತನ್ ಅವರು ರಾಕಿಂಗ್ ಸ್ಟಾರ್ ಯಶ್ ಅವರಿಗಾಗಿ ಬರೆದಿದ್ದರಂತೆ. ಈ ಸಿನಿಮಾದ ಕಥೆ ನೇವಿ ಕುರಿತಾಗಿ ಇದೆ ಎಂದು ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ರಾಮ್​​ಚರಣ್​ ತೇಜಾ ಮತ್ತು ಯಶ್ ಒಟ್ಟಿಗೆ ಅಭಿನಯಿಸುತ್ತಾರೆ ಅಥವಾ ಯಾರಾದರೂ ಒಬ್ಬರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಕಾದು ನೋಡ ಬೇಕಿದೆ.
First published: