• Home
  • »
  • News
  • »
  • entertainment
  • »
  • YASH 19 ಕುರಿತು ಹೊರಬಿತ್ತು ಬಿಗ್​ ಅಪ್​ಡೇಟ್​, ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಎಂದ ನಿರ್ದೇಶಕ

YASH 19 ಕುರಿತು ಹೊರಬಿತ್ತು ಬಿಗ್​ ಅಪ್​ಡೇಟ್​, ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಎಂದ ನಿರ್ದೇಶಕ

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

ನಟ ಯಶ್​ ಗೆ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಾರಂತೆ ಎಂದು ಸ್ಯಾಂಡಲ್​ವುಡ್​ನಲ್ಲಿ ತುಂಬಾ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಇದೀಗ ಈ ಕುರಿತು ಸ್ವತಃ ನಿರ್ದೇಶಕ ನರ್ತನ್ ಅವರೇ ಮಾತಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆಳೆದಿದ್ದಾರೆ.

  • Share this:

ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ನಂತರ ಯಾವ ಸಿನಿಮಾ ಮಾಡ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಅವರ ಯಾವುದೇ ಚಿತ್ರದ ಅನೌನ್ಸ್​ ಆಗಿಲ್ಲ. ಅಭಿಮಾನಿಗಳಂತೂ (Fans) ಯಾವಾಗ ರಾಕಿಭಾಯ್ (Rocky Bhai) ಹೊಸ ಸಿನಿಮಾದ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.  ಇದರ ನಡುವೆ ಇದೀಗ ಹೊಸ  ಸುದ್ದಿಯೊಂದು ಹೊರಬಿದ್ದಿದ್ದು, ಎಲ್ಲಡೆ ಸಖತ್ ಚೆರ್ಚೆಗೆ ಕಾರಣವಾಗಿದೆ. ಹೌದು, ಯಶ್ ಅವರ 19ನೇ ಸಿನಿಮಾವನ್ನು ನಿರ್ದೇಶಕ ನರ್ತನ್​ (Narthan ) ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲಿದೆ. ಆದರೆ ಈ ಕುರಿತು ಯಾವುದೇ ಅಧಿಕೃತವಾದ ಮಾಹಿತಿ ಹೊರ ಬಿದ್ದಿರಲಿಲ್ಲ. ಆದರೆ ಇದೀಗ ಸ್ವತಃ ನಿರ್ದೇಶಕ ನರ್ತನ್ ಅವರೇ ಈ ಕುರಿತು ಮಾತನಾಡಿದ್ದು, ಯಶ್ ಅವರ 19ನೇ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್:


ಹೌದು, ನಟ ಯಶ್​ ಗೆ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಾರಂತೆ ಎಂದು ಸ್ಯಾಂಡಲ್​ವುಡ್​ನಲ್ಲಿ ತುಂಬಾ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಇದೀಗ ಈ ಕುರಿತು ಸ್ವತಃ ನಿರ್ದೇಶಕ ನರ್ತನ್ ಅವರೇ ಮಾತಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆಳೆದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಯಶ್​ ಅವರ 19ನೇ ಚಿತ್ರದ ಬಗ್ಗೆ ಎಲ್ಲಡೆ ಗಾಸಿಫ್ ಗಳು ಹರಿದಾಡುತ್ತಿವೆ. ಕೆಜಿಎಫ್ 2 ನಂತರ ಅವರ ಮುಂದಿನ ಸಿನಿಮಾದ ಅನೌನ್ಸ್ ಮಾಡಲು ಸ್ವಲ್ಪ ತಡವಾಗುತ್ತಿದೆ. ಆದರೆ ಇನ್ನೊಂದು ವಾರದಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳಲಿದ್ದು, ಎಲ್ಲವೂ ಫೈನಲ್ ಆಗಲಿದೆ‘ ಎಂದು ಹೇಳಿದ್ದಾರೆ. ಈ ವಿಷಯ ಕೇಳಿದ ರಾಕಿ ಭಾಯ್ ಫ್ಯಾನ್ಸ್ ಸಖತ್ ಖುಷಿಯಲ್ಲಿದ್ದಾರೆ.


ಯಶ್​ಗೆ​ ಆ್ಯಕ್ಷನ್ ಕಟ್ ಹೇಳ್ತಾರಾ ನರ್ತನ್?:


ಯಶ್ 19ನೇ ಸಿನಿಮಾ ಕುರಿತು ದಿನೇ ದಿನೇ ಹೊಸ ಹೊಸ ಅಪ್​ಡೇಟ್​ ಬರುತ್ತಿದೆ. ಆದರೆ ಈ ಬಾರಿ ನೇರವಾಗಿ ನಿರ್ದೇಶಕ ನರ್ತನ್ ಅವರು ಯಶ್ 19ನೇ ಸಿನಿಮಾದ ಕುರಿತು ಮಾತನಾಡಿರುವುದರಿಂದ ಇವರೇ ಯಶ್​ ಅವರಿಗೆ ಆ್ಯಕ್ಷನ್ ಕಟ್ ಹೇಳ್ತಾರೆ ಎಂಬ ಮಾತುಗಳು ಮತ್ತಷ್ಟು ಬಲವಾಗಿ ಕಾಣುತ್ತಿದೆ. ಸೂಪರ್ ಹಿಟ್ ‘ಮಫ್ತಿ‘ ಚಿತ್ರದ ನಂತರ ಇದೀಗ ತುಂಬಾ ದಿನಗಳ ಬಳಿಕ ನರ್ತನ್ ನಿರ್ದೇಶಿಸುತ್ತಿದ್ದು, ಯಶ್​ ಅವರಿಗಾಗಿ ವಿಶೇಷ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಏನೇ ಆದರೂ ನರ್ತನ್ ಅವರ ಮಾಹಿತಿ ಪ್ರಕಾರ ಇನ್ನಿಂದು ವಾರಕ್ಕೆ ಯಶ್ ಅವರ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಅಲ್ಲಿಯವರೆಗೆ ಎಲ್ಲರೂ ಕಾಯಲೇ ಬೇಕಿದೆ.


ಇದನ್ನೂ ಓದಿ: 2022ರ IMDB ಪಟ್ಟಿ ಬಿಡುಗಡೆ; ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದ ತಮಿಳು ಸಿನಿಮಾ


ವಿಂಬಲ್ಡನ್​ನಲ್ಲಿಯೂ ನಿಲ್ಲದ ರಾಕಿ ಭಾಯ್​ ಹವಾ:


ಹೌದು, ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಸತತ 4ನೇ ಬಾರಿಗೆ ಹಾಗೂ ಒಟ್ಟು 7ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ಧ 4-6, 6-3, 6-4, 7-6ರ ಸೆಟ್​ನಲ್ಲಿ ಗೆದ್ದು ಬೀಗಿದರು. ಹೀಗಾಗಿ ವಿಂಬಲ್ಡನ್ ನೊವಾಕ್ ಜೊಕೊವಿಕ್ ಗೆ ವಿಶ್​ ಮಾಡಲು ತನ್ನ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ. ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ನೊವಾಕ್ ಜೊಕೊವಿಕ್ ಫೋಟೋ ಹಂಚಿಕೊಂಡಿದ್ದು, ‘ಟ್ರೋಫಿಸ್​, ಟ್ರೋಫಿಸ್​, ಟ್ರೋಫಿಸ್​...ಐ ಲೈಕ್​ ಟ್ರೋಫಿಸ್​... ಟ್ರೋಫಿಸ್​ ಲೈಕ್ಸ್ ಮೀ.. ಐ ಕಾಂಟ್​ ಅವಾಯ್ಡ್​‘ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Pavitra Lokesh: ಈ ಸಿನಿಮಾದಿಂದ ನರೇಶ್-ಪವಿತ್ರಾ ಲೋಕೇಶ್ ಸಂಬಂಧ ಶುರುವಾಯ್ತಾ? ವೈರಲ್ ಆಗ್ತಿದೆ ಚಿತ್ರದ ದೃಶ್ಯಗಳು


ಸಲಾರ್​ ಚಿತ್ರದಲ್ಲಿ ಯಶ್​?:


ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​ ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್‘ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಲಾರ್ ಚಿತ್ರದಲ್ಲಿ ಯಶ್ ಕೇವಲ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದು, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Published by:shrikrishna bhat
First published: