Kichcha Sudeep: ಕಿಚ್ಚನ ಬಗ್ಗೆ ಅವಹೇಳನಕಾರಿ ಹೇಳಿಕೆ, ನಿರ್ದೇಶಕ ನಂದ ಕಿಶೋರ್​ ಗರಂ!

ಅನಾಮಿಕ ವ್ಯಕ್ತಿಯೊಬ್ಬಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಇದೀಗ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೇ ಇದರ ಕುರಿತು ಇದಿಗ ಸ್ವತಃ ಸ್ಯಾಂಡಲ್​ವುಡ್​ನ ನಿರ್ದೇಶಕ ನಂದ ಕಿಶೋರ್​ (Nanda Kishore) ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ನಟ ಕಿಚ್ಚ ಸುದೀಪ್ (Kiccha Sudeep)​ ಸದ್ಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ‘ (Vikrant Rona) ಚಿತ್ರದ ಪ್ರಮೋಶನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಿಚ್ಚ ಎಲ್ಲಡೇ ಚಿತ್ರದ ಪ್ರಚಾರದ ಕಾರ್ಯದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ಪ್ರೀ ರಿಲೀಸ್​ ಇವೆಂಟ್​ ನಲ್ಲಿ ಅನೇಕ ಕನ್ನಡ ಚಿತ್ರರಂಗವೇ ಪಾಲ್ಗೊಂಡಿದ್ದರು. ಇದರ ನಡುವೆ ಅನಾಮಿಕ ವ್ಯಕ್ತಿಯೊಬ್ಬಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಇದೀಗ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೇ ಇದರ ಕುರಿತು ಇದಿಗ ಸ್ವತಃ ಸ್ಯಾಂಡಲ್​ವುಡ್​ನ ನಿರ್ದೇಶಕ ನಂದ ಕಿಶೋರ್​ (Nanda Kishore) ಸಹ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಸುದೀಪ್ ಅಭಿಮಾನಿಗಳ ಜೊತೆ ನಂದಕಿಶೋರ್ ಸಾಥ್:

ಸುದೀಪ್ ಬಗ್ಗೆ ಮಾತನಾಡಿರೋ ವ್ಯಕ್ತಿಯ ವಿರುದ್ದ ನಂದಕಿಶೋರ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಕುರಿತು ನಿರ್ದೇಶಕ ನಂದ ಕಿಶೋರ್ ಆಕ್ರೋಶ ಹೊರ ಹಾಕಿ ವಿಡಿಯೋ ಹರಿ ಬಿಟ್ಟಿದ್ದು, ‘ಕನ್ನಡದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಯಾವುದೇ ವಿಚಾರ ಮಾತನಾಡುವಾಗ ಎಚ್ಚರಿಕೆ ಇರಬೇಕು. ಕನ್ನಡದ ಕಲಾವಿದರ ಬಗ್ಗೆ ಮಾತನಾಡುವಾಗ ಯೋಚಿಸಿ ಎಂದು ಕನ್ನಡ ಕಾಲಾಭಿಮಾನಿಗಳಲ್ಲಿ ನಂದಕಿಶೋರ್ ಮನವಿ ಮಾಡಿದ್ದಾರೆ.ನಿನ್ನ ಬಗ್ಗೆ ಬೇಕಾಗಿರುವ ಪಬ್ಲಿಸಿಟಿಗಾಗಿ ಈ ರೀತಿ ಧೀಮಂತ ನಾಯಕರ ಬಗ್ಗೆ ಮಾತಾನಡಬೇಡಿ. ನಿನ್ನ ಮಾತುಗಳು ಕೇಳಿದರೆ ನಿನ್ನ ಸಂಸ್ಕ್ರತಿ ಏನೆಂದು ತಿಳಿಯುತ್ತದೆ. ಈ ಮಾತಿಗೆ ಎಲ್ಲರ ಎದುರಿಗೆ ಬಂದು ಕ್ಷಮೆ ಕೇಳಿ ಇಲ್ಲವಾದಲ್ಲಿ ನಡು ರೋಡಲ್ಲಿ ನಿಂತು ಚಪ್ಪಲಿಯಲ್ಲಿ ಏಟು ತಿನ್ನಬೇಕಾಗುತ್ತದೆ. ಇದು ಕೇಔಲ ಕಿಚ್ಚನ ಅಭಿಮಾನಿಣಿಗಳಲ್ಲದೇ ಎಲ್ಲಾ ಕನ್ನಡ ಕಾಲಾಭಿಮಾನಿಗಳಲ್ಲಿಯೂ ಈ ಮೂಲಕ ಒಂದು ಮನವಿ ಎಂದರೆ ಎಲ್ಲರೂ ನಮ್ಮವರೇ ಹೀಗಾಘಿ ಈ ರೀತಿ ಯಾರದೇ ವಿರುದ್ಧ ಮಾತನಾಡಿದರೂ ಎಲ್ಲರೂ ಇದರ ಪರವಾಗಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Vikrant Rona: ‘ವಿಕ್ರಾಂತ್​ ರೋಣ‘ ಚಿತ್ರದ ‘ರಾಜಕುಮಾರಿ‘ ಸಾಂಗ್ ರಿಲೀಸ್, ಲಾಲಿ ಹಾಡಿಗೆ ತಲೆದೂಗಿದ ಕಿಚ್ಚ

ವಿಕ್ರಾಂತ್ ರೋಣನ ಅಬ್ಬರ ಆರಂಭ:

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Vikrant Rona: ದ್ವಿಪಾತ್ರದಲ್ಲಿ ಕಿಚ್ಚ, ‘ವಿಕ್ರಾಂತ್ ರೋಣ‘ ಹೀರೋನಾ? ವಿಲನ್ನಾ?

ದ್ವಿಪಾತ್ರದಲ್ಲಿ ಮಿಂಚಲಿದ್ದಾರಾ ಸುದೀಪ್?:

ಹೌದು, ಟ್ರೈಲರ್ ನೋಡಿದ ಎಲ್ಲರಲ್ಲಿಯೂ ಇದೊಂದು ಪ್ರಶ್ನೆ ಮೂಡಿದ್ದು, ಸುದೀಪ್ ವಿಕ್ರಾಂತ್ ರೋಣ ಚಿತ್ರದ್ಲಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಟ್ರೈಲರ್​ ನಲ್ಲಿ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ಕೊನೆಯಲ್ಲಿನ ಟ್ವಿಸ್ಟ್ ಸುದೀಪ್ ಬಗ್ಗೆ ಹೊಸ ಕುತೂಹಲ ಕೆರಳಿಸುತ್ತಿದೆ. ಇದರ ಮೂಲಕ ಸುದೀಪ್ ದ್ವಿಪಾತ್ರದಲ್ಲಿ ಕಾನಿಸಿಕೊಂಡಿದ್ದಾರಾ ಎಂಬ ಕುತೂಹಲ ಮುಡುತ್ತಿದೆ. ಎಲ್ಲಾ ಕುತೂಹಲಕ್ಕೂ ಅಂತಿಮ ಉತ್ತರಕ್ಕಾಗಿ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲೇ ಬೇಕಿದೆ.
Published by:shrikrishna bhat
First published: