‘ಇಂಡಿಯಾ v/s ಇಂಗ್ಲೆಂಡ್‘; ಟೀಸರ್​ ಮೂಲಕ ಹೀರೋ ಇಂಟ್ರೊಡಕ್ಷನ್ ಮಾಡುತ್ತಿದ್ದಾರೆ ನಿರ್ದೇಶಕ ನಾಗತಿಹಳ್ಳಿ

India v/s England: ‘ಅಮೆರಿಕಾ ಅಮೆರಿಕಾ‘, ‘ಪ್ಯಾರಿಸ್​ ಪ್ರಣಯ‘ ಸಿನಿಮಾದ ನಂತರ ಎರಡು ದೇಶದ ಹೆಸರನ್ನು ತೆಗೆದುಕೊಂಡು ‘ಇಂಡಿಯಾ ವರ್ಸಸ್​ ಇಂಗ್ಲೆಂಡ್​‘ ಚಿತ್ರವನ್ನು ಕೈಗೊತ್ತಿಕೊಂಡಿದ್ದಾರೆ. ಸಿನಿಮಾದ ಟೈಟಲ್​ನಷ್ಟೇ ಕಥೆಯು ವಿಭಿನ್ನವಾಗಿರಬಹುದೆಂಬುದು ಸಿನಿ ಪ್ರೇಕ್ಷಕರ ಅನಿಸಿಕೆ. 

news18-kannada
Updated:November 30, 2019, 3:08 PM IST
‘ಇಂಡಿಯಾ v/s ಇಂಗ್ಲೆಂಡ್‘; ಟೀಸರ್​ ಮೂಲಕ ಹೀರೋ ಇಂಟ್ರೊಡಕ್ಷನ್ ಮಾಡುತ್ತಿದ್ದಾರೆ ನಿರ್ದೇಶಕ ನಾಗತಿಹಳ್ಳಿ
India vs England Film
  • Share this:
ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೆಶನದ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘​ ಸಿನಿಮಾದ ಹೀರೋ ಇಂಟ್ರೊಡಕ್ಷನ್​ ಟೀಸರ್​ ಇಂದು 4 ಗಂಟೆಗೆ ಬಿಡುಗಡೆಯಾಗುತ್ತಿದೆ.

ಬಹು ಸಮಯದ ಹಿಂದೆ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘​ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ನಾಗತಿಹಳ್ಳಿ ಚಂದ್ರಶೇಖರ್ ಸ್ಯಾಂಡಲ್​ವುಡ್​ನ ಸಿನಿ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟಿದ್ದರು. ಅದರಂತೆ ಯಾರಿಗೂ ತಿಳಿಯದಂತೆ ಸಿನಿಮಾದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಲಂಡನ್​ನ​ ಹಲವಾರು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

‘ಅಮೆರಿಕಾ ಅಮೆರಿಕಾ‘, ‘ಪ್ಯಾರಿಸ್​ ಪ್ರಣಯ‘ ಸಿನಿಮಾದ ನಂತರ ಎರಡು ದೇಶದ ಹೆಸರನ್ನು ತೆಗೆದುಕೊಂಡು ‘ಇಂಡಿಯಾ ವರ್ಸಸ್​ ಇಂಗ್ಲೆಂಡ್​‘ ಚಿತ್ರವನ್ನು ಕೈಗೊತ್ತಿಕೊಂಡಿದ್ದಾರೆ. ಸಿನಿಮಾದ ಟೈಟಲ್​ನಷ್ಟೇ ಕಥೆಯು ವಿಭಿನ್ನವಾಗಿರಬಹುದೆಂಬುದು ಸಿನಿ ಪ್ರೇಕ್ಷಕರ ಅನಿಸಿಕೆ.

‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘​


ಈ ಸಿನಿಮಾದಲ್ಲಿ ನಾಯಕನಾಗಿ ವಸಿಷ್ಠ ಸಿಂಹ ಅಭಿನಯಿಸಿದರೆ, ನಾಯಕಿಯಾಗಿ ಮಾನ್ವಿತಾ  ಹರೀಶ್​ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಅನಂತ್​ನಾಗ್​​, ಸುಮಲತಾ ಅಂಬರೀಶ್​, ಸಾಧುಕೋಕಿಲ, ಪ್ರಕಾಶ್​ ಬೆಳವಾಡಿ ಸೇರಿಂದರೆ ಅನೇಕ ತಾರಗಣವೆ ಇದೆ.

ನಟ ವಸಿಷ್ಠ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘​  ಚಿತ್ರದಲ್ಲಿ ಕಂಪ್ಲೀಟ್​ ಬೇರೆ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗಂತೂ ಈ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಹೀರೋ  ಇಂಟ್ರೊಡಕ್ಷನ್​ ಹೇಗಿರಲಿದೆ ಅನ್ನೋ ಬಾರೀ ನಿರಿಕ್ಷೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: Xiaomi: 13 ಕೆ.ಜಿ ತೂಕದ ಎಲೆಕ್ಟ್ರಿಕ್ ಸೈಕಲ್ ಪರಿಚಯಿಸಿದ ಶಿಯೋಮಿ; ಗಂಟೆಗೆ ಎಷ್ಟು ಕಿ.ಮೀ ಸಾಗುತ್ತೆ ಗೊತ್ತಾ?ಇದನ್ನೂ ಓದಿ: Bigg Boss Kannada 7: ಈ ವಾರ ಮನೆಯಿಂದ ಹೊರ ಹೋಗುವ 7ನೇ ಸ್ಪರ್ಧಿ ಇವರೇ!?

 
First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading