Nagashekar: ಸ್ಯಾಂಡಲ್​ವುಡ್​ ಸ್ಟಾರ್ ಡೈರೆಕ್ಟರ್​​ಗೆ 50 ಲಕ್ಷ ದೋಖಾ: ಮಹಿಳೆ ವಿರುದ್ಧ ಠಾಣೆ ಮೆಟ್ಟಿಲೇರಿದ ನಾಗಶೇಖರ್​!

2020ರ ಆಗಸ್ಟ್‌ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಬಳಿಕ ಹಂತ ಹಂತವಾಗಿ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದ ನಾಗಶೇಖರ್, ಒಟ್ಟು ₹ 50 ಲಕ್ಷ ನೀಡಿದ್ದರು. ಅಲ್ಲದೇ ಸೇಲ್ ಅಗ್ರಿಮೆಂಟ್ ಬಳಿಕ ಪಡೆದಿದ್ದ 50 ಲಕ್ಷ ರೂ ಹಣವನ್ನು ವಾಪಸ್ ನೀಡಿಲ್ಲ ಎಂದು ನಿರ್ದೇಶಕ ಆರೋಪಿಸಿದ್ದಾರೆ.

ನಿರ್ದೇಶಕ ನಾಗಶೇಖರ್​

ನಿರ್ದೇಶಕ ನಾಗಶೇಖರ್​

  • Share this:
ಸ್ಯಾಂಡಲ್​ವುಡ್​​(Sandalwood)ನ ಖ್ಯಾತ ನಿರ್ದೇಶಕ(Director) ನಾಗಶೇಖರ್ (Nagshekar)​ ಪೊಲೀಸ್​ ಠಾಣೆ  ಮೆಟ್ಟಿಲೇರಿದ್ದಾರೆ.ಮನೆ ಮಾರಾಟ ಪ್ರಕರಣದಲ್ಲಿ ಮಹಿಳೆಯಿಂದ 50 ಲಕ್ಷ ರೂಪಾಯಿ ವಂಚನೆ ಒಳಗಾಗಿರುವುದಾಗಿ ಪೊಲೀಸ(Police)ರಿಗೆ ದೂರು ನೀಡಿದ್ದಾರೆ.  50 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಬೆಂಗಳೂರಿನ ಆರ್.ಆರ್ ನಗರ (RR Nagar) ಪೊಲೀಸ್ ಠಾಣೆಗೆ ನಿರ್ದೇಶಕ ದೂರು ನೀಡಿದ್ದಾರೆ. ಆರ್.ಆರ್ ನಗರದ ಮೀನಾ ಹಾಗೂ ರಾಜ್​ಕುಮಾರ್ ವಿರುದ್ಧ ದೂರು ನೀಡಲಾಗಿದೆ. ಮನೆ ಖರೀದಿಗೆ ಮಾತನಾಡಿ, ನಾಗಶೇಖರ್ ಹಣ ನೀಡಿದ್ದರು.. ಆರ್.ಆರ್.ನಗರ(R.R.Nagar)ದ ಜಯಣ್ಣಲೇಔಟ್‍ನಲ್ಲಿ ಮನೆ ಖರೀದಿಸಲು ನಾಗಶೇಖರ್ ಅವರು ಮುಂದಾಗಿದ್ದರು. ನಂತರ ಮನೆ ಖರೀದಿಗೆ ಮಾತುಕತೆ ನಡೆಸಿ ಮೀನಾ ಅವರಿಗೆ 2 ಕೋಟಿ 70 ಲಕ್ಷ ರೂಪಾಯಿಯನ್ನು ನೀಡಿದ್ದರು. ಇದೀಗ ಮನೆ(House)ಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಇತ್ತ ಹಣವೂ ಇಲ್ಲ, ಮನೆಯೂ ಇಲ್ಲ ತಮಗೆ ವಂಚನೆಯಾಗಿದೆ ಎಂದು ನಾಗಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಸ್ಯಾಂಡಲ್​ವುಡ್​ ನಿರ್ದೇಶಕನಿಗೆ ವಂಚನೆಯಾಗಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.ಆಗ್ರಿಮೆಂಟ್ ಆದ ಬಳಿಕ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿರುವುದು ತಪ್ಪು ಅಂತಿದ್ದಾರೆ ಸ್ಯಾಂಡಲ್​​ವುಡ್​ ನಿರ್ದೇಶಕ ನಾಗಶೇಖರ್​. 

ನಿಜಕ್ಕೂ ಇಲ್ಲಿ ಆಗಿದ್ದೇನು?

ಆರ್​.ಆರ್​.ನಗರದ ಜಯಣ್ಣ ಲೇಔಟ್‌ನಲ್ಲಿ ಮನೆ ಖರೀದಿ ಮಾಡಲು ಮುಂದಾಗಿದ್ದ ನಿರ್ದೇಶಕ ನಾಗಶೇಖರ್, ಅದಕ್ಕಾಗಿ 2 ಕೋಟಿ 70 ಲಕ್ಷ ರೂ.ಗೆ ಮೀನಾ ಎಂಬುವವರ ಬಳಿ ಮಾತುಕತೆ ನಡೆಸಿದ್ದರು. 2020ರ ಆಗಸ್ಟ್‌ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅಗ್ರಿಮೆಂಟ್ ಬಳಿಕ ಹಂತ ಹಂತವಾಗಿ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದ ನಾಗಶೇಖರ್, ಒಟ್ಟು ₹ 50 ಲಕ್ಷ ನೀಡಿದ್ದರು. ಅಲ್ಲದೇ ಸೇಲ್ ಅಗ್ರಿಮೆಂಟ್ ಬಳಿಕ ಪಡೆದಿದ್ದ 50 ಲಕ್ಷ ರೂ ಹಣವನ್ನು ವಾಪಸ್ ನೀಡಿಲ್ಲ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದುಡ್ಡು, ಮನೆ ಎರಡೂ ಇಲ್ಲದೇ ಕಂಗಾಲಾಗಿರುವ ನಿರ್ದೇಶಕ, ಮೀನಾ ಹಾಗೂ ರಾಜ್​ಕುಮಾರ್ ವಿರುದ್ಧ ಆರ್​.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸೆಕ್ಷನ್ 420ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : `ಕರುನಾಡ ರತ್ನ’ನಿಗೆ ಇದೆಂಥಾ ಅವಮಾನ: ಕಿಡಿಗೇಡಿಗಳು ಸಿಕ್ರೆ ಸುಮ್ಮನೆ ಬಿಡಲ್ಲ ಎಂದ ಕನ್ನಡಿಗರು!

ಆರೋಪಿ ಎಸ್ಕೇಪ್​, ನಾಗಶೇಖರ್​ ಕಂಗಾಲು!

ಪೊಲೀಸರು ಆರೋಪಿ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೀನಾ ಪರಾರಿಯಾಗಿದ್ದು, ಇತ್ತ ದುಡ್ಡು ಇಲ್ಲದೇ ಮನೆಯೂ ಸಿಗದೇ ನಾಗಶೇಖರ್ ಕಂಗಾಲಾಗಿದ್ದಾರೆ. ನಿರ್ದೇಶಕ ನಾಗಶೇಖರ್ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ, ಚೇತನ್ ನಟನೆಯ ಮೈನಾ, ಶ್ರೀನಗರ ಕಿಟ್ಟಿ, ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ, ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ, ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸೇರಿದಂತೆ ಹಲವು ಖ್ಯಾತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇದನ್ನು ಓದಿ : ಅಕ್ಷಯ್​ ಎದುರು ನಟಿಸಿ ಫುರ್ಲ್ ಮಾರ್ಕ್ಸ್​ ಪಡೆದ ಧನುಷ್: ಅಬ್ಬಬ್ಬಾ.. ಅತರಂಗಿ ರೇ ಸೂಪರ್​!

ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದ ನಾಗಶೇಖರ್​!

ನೆವಂಬರ್​ 13 2016. `ಮಾಸ್ತಿಗುಡಿ' ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ನಟರು ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಸಿದಂತೆ ಚಿತ್ರದ ನಿರ್ದೇಶಕ ನಾಗಶೇಖರ್‌, ಸಾಹಸ ನಿರ್ದೇಶಕ ರವಿವರ್ಮ, ಸಹ ನಿರ್ದೇಶಕ ಸಿದ್ದು ಅವರು ನಾಯಕ ನಟ ದುನಿಯಾ ವಿಜಯ್‌ ಅವರ ಸಮ್ಮುಖದಲ್ಲಿ ಮಾಗಡಿ ಪೊಲೀಸರಿಗೆ ಶರಣಾಗಿದ್ದರು. ಇದೇ ಚಿತ್ರದ ಚಿತ್ರೀಕರಣ ವೇಳೆ ಕನ್ನಡ ಚಿತ್ರರಂಗದ ಇಬ್ಬರು  ವಿಲನ್​ಗಳನ್ನು ಕಳೆದುಕೊಂಡಿತು. ಅನಿಲ್​ ಹಾಗೂ ಉದಯ್​ ಇಬ್ಬರು ನಟರು ಇಂದು ಇದ್ದರೆ, ಎಲ್ಲಾ ಭಾಷೆಗಳಲ್ಲಿ ಮಿಂಚುತ್ತಿದ್ದರು. ಈ ಪ್ರಕರಣದ ಬಳಿಕ ನಾಗಶೇಖರ್ ಮರೆಯಾಗಿದ್ದರು. ಇದೀಗ ಈ ವಂಚನೆ ವಿಚಾರದಲ್ಲಿ ಮತ್ತೆ ಸುದ್ದಿಯಾಗುತ್ತಿದ್ದಾರೆ.
Published by:Vasudeva M
First published: