ಭಟ್ಟರ ಶಿಷ್ಯನ ಸಿನಿಮಾಗೆ ಸಮಸ್ಯೆಯಾದ ಶೀರ್ಷಿಕೆ 'ಅಯೋಗ್ಯ ಗ್ರಾಮ ಪಂಚಾಯ್ತಿ ಸದಸ್ಯ'

news18
Updated:June 13, 2018, 7:45 PM IST
ಭಟ್ಟರ ಶಿಷ್ಯನ ಸಿನಿಮಾಗೆ ಸಮಸ್ಯೆಯಾದ ಶೀರ್ಷಿಕೆ 'ಅಯೋಗ್ಯ ಗ್ರಾಮ ಪಂಚಾಯ್ತಿ ಸದಸ್ಯ'
news18
Updated: June 13, 2018, 7:45 PM IST
ನ್ಯೂಸ್​ 18 ಕನ್ನಡ

ನಿರ್ದೇಶಕ ಮಹೇಶ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ 'ಅಯೋಗ್ಯ ಗ್ರಾಮ ಪಂಚಾಯ್ತಿ ಸದಸ್ಯ' ಸಿನಿಮಾದ ಶೀರ್ಷಿಕೆಯೇ ಈಗ ದೊಡ್ಡ ಸಮಸ್ಯೆಯಾಗಿದೆ.

ಯೋಗರಾಜ ಭಟ್ಟರ ಶಿಷ್ಯನೆಂದೇ ಕರೆಸಿಕೊಳ್ಳುವ ಮಹೇಶ್ ಅವರ ಈ ಸಿನಿಮಾದ ಶೀರ್ಷಿಕೆಯನ್ನು ಕೂಡಲೇ ಬದಲಿಸಬೇಕು ಎಂದು ಕನ್ನಡ ಕ್ರಾಂತಿ ದಳ ಸಂಘಟನೆ ಆಗ್ರಹಿಸುತ್ತಿದೆ.ಫಿಲಂ ಚೇಂಬರ್​ನಲ್ಲಿ 'ಅಯೋಗ್ಯ' ಎಂಬ ಶೀರ್ಷಿಕೆನ್ನು ಮಾತ್ರ ನೋಂದಣಿ ಮಾಡಿರೋ ನಿರ್ದೇಶಕರು, ಪ್ರಚಾರದಲ್ಲಿ ಎಲ್ಲ ಕಡೆ 'ಅಯೋಗ್ಯ ಗ್ರಾಮ ಪಂಚಾಯ್ತಿ ಸದಸ್ಯ' ಎಂದು  ಸಿನಿಮಾ ಹೆಸರನ್ನು ಬಳಸುತ್ತಿದ್ದಾರೆ. ಜನಪ್ರತಿನಿಧಿಯನ್ನು ಅಯೋಗ್ಯ ಎಂದಿರೋದು ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿದೆ.

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ