ದಕ್ಷಿಣ ಭಾರತದ ಮಹಾನ್ (Ponniyin Selvan Making Video) ನಿರ್ದೇಶಕ ಮಣಿರತ್ನಂ ಚಿತ್ರಗಳ ಮೇಕಿಂಗ್ ವಿಭಿನ್ನವಾಗಿಯೇ ಇರುತ್ತವೆ. ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ (Mani Ratnam) ನಿರ್ದೇಶನ ಆರಂಭಿಸಿದ್ದ ಮಣಿರತ್ನಂ ಮುಂದೆ ತೆಗೆದ ಚಿತ್ರಗಳೆಲ್ಲ ಅದ್ಭುತವಾಗಿಯೇ ಇವೆ. ಆದರೆ ಸೋಲು ಮತ್ತು ಗೆಲುವು ಎರಡನ್ನೂ ಕಂಡಿರೋ ಮಣಿರತ್ನಂ, ತಮಿಳು ರಾಜನ ಕಥೆಯನ್ನ ಎರಡು (Ponniyin Selvan-2 Movie) ಭಾಗದಲ್ಲಿ ತಯಾರಿಸಿದ್ದಾರೆ. ಈಗಾಗಲೇ ಒಂದು ಭಾಗದ ಸಿನಿಮಾ ಬಂದು ಹೋಗಿದೆ. ಇದನ್ನ ಜನ ಕೂಡ ಮೆಚ್ಚಿ ಆಗಿದೆ. ಆದರೆ ಈಗ ಎರಡನೇ ಭಾಗದ ಚಿತ್ರೀಕರಣ ಕೂಡ ಶುರು ಆಗಿದೆ. ಇದರ ಮೇಕಿಂಗ್ (Movie Making) ಕೂಡ ಮಜವಾಗಿದೆ. ಇದನ್ನ ತಿಳಿಸೋ ಒಂದು ವಿಡಿಯೋ ಈಗ ಹೊರ ಬಂದಿದೆ.
ಪೊನ್ನಿಯನ್ ಸೆಲ್ವನ್-2 ಸೂಪರ್ ಮೇಕಿಂಗ್ ಔಟ್
ಪೊನ್ನಿಯನ್ ಸೆಲ್ವನ್ ಮತ್ತು ಕಾಂತಾರ ಸಿನಿಮಾ ಒಂದೇ ಟೈಮ್ಲ್ಲಿಯೇ ಬಂದಿದ್ದವು. ಕಳೆದ ವರ್ಷ ಸೆಪ್ಟೆಂಬರ್-30 ರಂದು ಕಾಂತಾರ ರಿಲೀಸ್ ಆಗಿತ್ತು. ಇದೇ ದಿನವೇ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾ ತೆರೆ ಕಂಡಿತ್ತು.
ಇದು ತೆರೆಗೆ ಬಂದು ಕನ್ನಡದ ಸಿನಿಮಾಗಳ ಅಬ್ಬರವನ್ನ ಕುಗ್ಗಿಸುತ್ತದೆ ಅನ್ನುವ ನಂಬಿಕೆ ಇತ್ತು. ಆದರೆ ಕಾಂತಾರ ಎಲ್ಲವನ್ನೂ ಮೀರಿ ಜನಕ್ಕೆ ಇಷ್ಟ ಆಯಿತು. ಇದರಿಂದ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಯಾವುದೇ ರೀತಿಯ ಎಫೆಕ್ಟ್ ಆಗಲಿಲ್ಲ ಬಿಡಿ.
A tiny glimpse into all the fun the team had while making #PS1 and #PS2! #PS2 in theatres worldwide from April 28 🔥#PonniyinSelvan #CholasAreBack #ManiRatnam @arrahman @madrastalkies_ @Tipsofficial @IMAX @primevideoIN @chiyaan @actor_jayamravi @Karthi_Offl #Jayaram pic.twitter.com/bBsHJQ0LcO
— Lyca Productions (@LycaProductions) March 1, 2023
ಇದರಿಂದ ತಮಿಳು ರಾಜನ ಕಥೆಯನ್ನ ಮಣಿರತ್ನಂ ಅವರು ಪಾರ್ಟ್-2ದಲ್ಲೂ ಮುಂದುವರೆಸಿದ್ದಾರೆ. ಪಾರ್ಟ್-1 ರಿಸಲ್ಟ್ ಬಂದ್ಮೇಲೆ ಈ ಕೆಲಸ ತೀವ್ರತೆ ಪಡೆದಿತ್ತು. ಅದೇ ರೀತಿ ಈಗಾಗಲೇ ಈ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಪೊನ್ನಿಯನ್ ಸೆಲ್ವನ್-2 ಈಗೀನ ಅಪ್ಡೇಟ್ಸ್ ಏನು?
ಅಧಿಕೃತ ಅನೌನ್ಸ್ಮೆಂಟ್ ಪ್ರಕಾರ ಇದೇ ವರ್ಷ ಏಪ್ರಿಲ್-28 ರಂದು ಪೊನ್ನಿಯನ್ ಸೆಲ್ವನ್-2 ಸಿನಿಮಾ ರಿಲೀಸ್ ಆಗೋದಿದೆ. ಈ ಹಿನ್ನೆಲೆಯಲ್ಲಿ ಕೆಲಸ ಕೂಡ ಜೋರಾಗಿಯೇ ನಡೆದಿದೆ.
ಇದರ ಬಗ್ಗೆ ಒಂದು ಝಲಕ್ ಕೊಡುವ ಒಂದು ವಿಡಿಯೋವನ್ನ ಲೈಕಾ ಮೀಡಿಯಾ ತನ್ನ ಅಧಿಕೃತ ಪೇಜ್ ಅಲ್ಲೆ ರಿಲೀಸ್ ಮಾಡಿದೆ. ಈ ಒಂದು ವಿಡಿಯೋದಲ್ಲಿ ನಟ ಜಯಂ ರವಿ ಮಾತನಾಡಿದ್ದಾರೆ. ಚಿತ್ರದ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.
ಪೊನ್ನಿಯನ್ ಸೆಲ್ವನ್-2 ಚಿತ್ರದ ಮೇಕಿಂಗ್ ರಿವೀಲ್
ಚಿಯಾನ್ ವಿಕ್ರಮ್ ಕೂಡ ಈ ಚಿತ್ರದ ಹತ್ತು ಹಲವು ಅನುಭವ ಶೇರ್ ಮಾಡಿಕೊಂಡಿದ್ದಾರೆ. ಇವರ ಈ ಸಿನಿಮಾದ ಝಲಕ್ ಕೂಡ ಇದೇ ಪುಟ್ಟ ವಿಡಿಯೋದಲ್ಲಿ ನಿಮಗೆ ದೊರೆಯುತ್ತದೆ.
ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟ ಕಾರ್ತಿ ಕೂಡ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಚೋಳ ರಾಜನ ಕಥೆಯನ್ನ ಕಟ್ಟಿಕೊಟ್ಟಿದೆ.
ಪೊನ್ನಿಯನ್ ಸೆಲ್ವನ್-2 ಸಿನಿಮಾ ರೆಡಿ ಆಯಿತಾ?
ಜನ ಕೂಡ ಈ ಚಿತ್ರದ ಪಾತ್ರಗಳನ್ನ ಇಷ್ಟಪಟ್ಟಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರ ಹೆಚ್ಚು ಜನರನ್ನ ತಲುಪುವಂತಿದೆ. ವಿಶೇಷವಾಗಿ ರಾಜನ ಕಥೆ ಅಂದಾಗ ಜನರಲ್ಲಿ ಒಂದು ಸೆಳೆತ ಇದ್ದೇ ಇರುತ್ತದೆ.
ಈಗೀನ ದಿನಮಾನದಲ್ಲಿ ಹಿಸ್ಟೋರಿಕಲ್ ಕಥೆ ಬರೋದು ಕಡಿಮೆನೆ ಆಗಿದೆ. ಇದಕ್ಕಾಗಿ ಸೂಕ್ತ ಸಂಶೋಧನೆ ಕೂಡ ಬೇಕಾಗುತ್ತದೆ. ಬಹು ಕೋಟಿಯನ್ನ ದುಡ್ಡನ್ನು ಕೂಡ ಹೂಡಬೇಕಾಗುತ್ತದೆ.
ಆದರೆ ರಾಜಮೌಳಿ ನಿರ್ದೇಶನ ಮತ್ತು ಮಣಿರತ್ನಂ ನಿರ್ದೇಶನ ಸಿನಿಮಾಗಳು ಅಂದ್ರೆ ಅಲ್ಲಿ ನಿರ್ಮಾಪಕರು ದುಡ್ಡು ಹಾಕೋಕೆ ಮುಂದೆ ಬರ್ತಾರೆ. ಅದೇ ರೀತಿನೆ ಈಗ ಪೊನ್ನಿಯನ್ ಸೆಲ್ವನ್ ಬಂದು ಹೋಗಿದೆ.
ಇದನ್ನೂ ಓದಿ: Rakul Preet Singh: ಜನರಲ್ಲಿ ದುಡ್ಡಿಲ್ಲ! ಅದಕ್ಕೇ ನನ್ನ ಸಿನಿಮಾ ಫ್ಲಾಪ್ ಆಗ್ತಿದೆ ಎಂದ ನಟಿ
ಪಾರ್ಟ್-2 ಕೂಡ ರೆಡಿ ಆಗುತ್ತಿದೆ. ಏಪ್ರಿಲ್-28 ರಂದು ಚಿತ್ರ ರಿಲೀಸ್ ಪ್ಲಾನ್ ಆಗಿದೆ ಬಂದ್ಮೇಲೆ ಏನೆಲ್ಲ ಮಾಡುತ್ತದೆ ಅನ್ನೋದು ಈಗೀನ ಕುತೂಹಲವೇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ