• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Director Prem: ಪ್ರೇಮ್ ಅಡ್ಡದಿಂದ ಕೈಜಾರಿ ಹೋದ 'ಕಾಳಿ'; 'ಆ್ಯಕ್ಷನ್‌ ಪ್ರಿನ್ಸ್‌'ಗೇ ಶಾಕ್ ನೀಡಿದ 'ಹೆಬ್ಬುಲಿ'!

Director Prem: ಪ್ರೇಮ್ ಅಡ್ಡದಿಂದ ಕೈಜಾರಿ ಹೋದ 'ಕಾಳಿ'; 'ಆ್ಯಕ್ಷನ್‌ ಪ್ರಿನ್ಸ್‌'ಗೇ ಶಾಕ್ ನೀಡಿದ 'ಹೆಬ್ಬುಲಿ'!

ನಿರ್ದೇಶಕ ಪ್ರೇಮ್ ಮತ್ತು ನಿರ್ದೇಶಕ ಕೃಷ್ಣ

ನಿರ್ದೇಶಕ ಪ್ರೇಮ್ ಮತ್ತು ನಿರ್ದೇಶಕ ಕೃಷ್ಣ

ಪ್ರೇಮ್ ನಟ ಧ್ರುವಗಾಗಿ ಕಂಡಿದ್ದ ಕನಸಿದೆ ನಿರ್ದೇಶಕ ಮುಂಗಾರುಮಳೆ ಕೃಷ್ಣ ಭಾರೀ ಮಳೆಯನ್ನ ಸುರಿಸಿ ಬಿಟ್ಟಿದ್ದಾರೆ. ಜೋಗಿ ಪ್ರೇಮ್ ಇತ್ತ ಟೈಟಲ್ ಗ್ರಾಫಿಕ್ಸ್ ಕೆಲಸದಲ್ಲಿ ಕಳೆದೊಗಿದ್ರೆ‌, ಅತ್ತ ಕೃಷ್ಣ ಸೈಲೆಂಟ್ ಆಗಿ ನಾನು ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜೊತೆ ಸಿನಿಮಾ ಮಾಡ್ತಿದ್ದು, ಆ ಚಿತ್ರಕ್ಕೆ "ಕಾಳಿ" ಎಂಬ ಟೈಟಲ್ ಇಟ್ಟಿದ್ದಿನಿ ಅಂತ ಅನೌನ್ಸ್ ಮಾಡಿದ್ದಾರೆ!

ಮುಂದೆ ಓದಿ ...
  • Share this:

    ಹ್ಯಾಟ್ರಿಕ್ ಡೈರೆಕ್ಟರ್ (Hat rick Director) ಜೋಗಿ ಪ್ರೇಮ್ (Jogi Prem) ಆಕ್ಷನ್ ಪ್ರಿನ್ಸ್ (Action Prince) ಜೊತೆ ಸೇರಿ ಯುದ್ದಕ್ಕೆ (War) ಸನ್ನದ್ದರಾಗ್ತಿದ್ದಾರೆ. ಯುದ್ದಕ್ಕೆ ಈಗಾಗಲೇ ರಣಕಹಳೆ ಊದಿರುವ ಪ್ರೇಮ್ ಗೆ ಮತ್ತೋರ್ವ ನಿರ್ದೇಶಕ (Director) ಹೆಬ್ಬುಲಿ ಕೃಷ್ಣ (Hebbuli Krishna) ಶಾಕ್ ನೀಡಿದ್ದು, ಪ್ರೇಮ್ ಬತ್ತಳಿಕೆ ಯಲ್ಲಿದ್ದ ಆಯುಧವನ್ನು ಕೃಷ್ಣ ವಶ ಮಾಡ್ಕೊಂಡಿದ್ದಾರೆ. ‘ಏಕ್ ಲವ್ ಯಾ’ (Ek Love Ya) ಸಿನಿಮಾ ಮುಗಿಸಿ ಪ್ರೇಮ್ ಫಸ್ಟ್ ಟೈಮ್ ಪ್ಯಾನ್ ಇಂಡಿಯಾ (Pan India) ಚಿತ್ರಕ್ಕೆ ಕೈ ಹಾಕಿದ್ದಾರೆ. ಪ್ರೇಮ್  9ನೇ ಚಿತ್ರವನ್ನು ದಶದಿಕ್ಕುಗಳಿಗೆ ರೀಚ್ (Reach) ಮಾಡಿಸಲೇ ಬೇಕಂತ ಪಣತೊಟ್ಟಂತೆ ಕಾಣ್ತಿದ್ದು, ಈ ಚಿತ್ರಕ್ಕೆ ಭರ್ಜರಿ ತಾಲೀಮು ಮಾಡ್ತಿದ್ದಾರೆ ಶೋಮ್ಯಾನ್ (Showman). ಆದ್ರೀಗ ಪ್ರೇಮ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೋಡಿಗೆ ಶಾಕ್ (Shock) ಎದುರಾಗಿದೆ.


    70-80ರ ದಶಕದ ಕಥೆ ಮಾಡಿಕೊಂಡಿದ್ದ ಪ್ರೇಮ್


    ಇನ್ನು ಪ್ರೇಮ್ 70-80ರ ದಶಕದ ಕತೆರೆಡಿಮಾಡ್ಕೊಂಡು, ಆ ಕತೆಗೆ ಪೊಗರು ಪೋರನನ್ನು ಕತೆಗೆ ಬೇಕಾದಂತೆ ಸಿಂಗರಿಸುತ್ತಿದ್ದರು. ಚಿತ್ರದ ಟೈಟಲ್ ಗಾಗಿಗೂ ಸಖತ್ ಹೋಮ್ ವರ್ಕ್ ಮಾಡಿ ಇನ್ನೇನು ಟೈಟಲ್ ಅನೌನ್ಸ್ ಮಾಡಬೇಕು ಅನ್ನೋವಷ್ಟರಲ್ಲಿ ಜೋಗಪ್ಪ ಪ್ರೇಮ್ ಗೆ ಹೆಬ್ಬುಲಿ ಕೃಷ್ಣ ಸಖತ್ ಆಗಿ ಪೆಟ್ಟುಕೊಟ್ಟಿದ್ದಾರೆ‌.


    ಟೈಟಲ್ ಅನೌನ್ಸ್‌ಗೆ ಸಜ್ಜಾಗಿದ್ದ ಪ್ರೇಮ್


    ಪ್ರೇಮ್ ಸಿನಿಮಾಗಳೇ ಹಾಗೆ.. ಆರಂಭದಿಂದ ರಿಲೀಸ್ ಆಗೋ ವರೆಗೂ ಸೌಂಡ್ ಮಾಡ್ತಾನೆ ಇರ್ತವೆ.. ಇನ್ನು ಪ್ಯಾನ್ ಇಂಡಿಯಾ ಚಿತ್ರ ಅಂದ್ರೆ  ಕೇಳಬೇಕಾ. ಮೈಸೂರಿನಲ್ಲಿ ಚಾಮುಂಡಮ್ಮನ ಸನ್ನಿಧಿ ಯಲ್ಲಿ ದಸರಾ ರೀತಿ ಚಿತ್ರದ ಅದ್ಧೂರಿ ಮುಹೂರ್ತ ಮಾಡಿದ್ದ ಪ್ರೇಮ್, ಧ್ರುವ ಜೊತೆ ಯುದ್ದಭೂಮಿಗೆ ಇಳ್ಯೋಕು ಮುನ್ನ ಚಿತ್ರದ ಟೈಟಲ್ ಅನ್ನು ಕಲರ್ ಫುಲ್ ಇವೆಂಟ್ ಮೂಲಕ ಅನೌನ್ಸ್ ಮಾಡೊಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ರು.


    ಇದನ್ನೂ ಓದಿ:  Kichcha Sudeep: ಪ್ರಧಾನಿ ಮಾತಿಗೆ ಕಿಚ್ಚನ ಮೆಚ್ಚುಗೆ! ಅಷ್ಟಕ್ಕೂ ಮೋದಿ ಹೇಳಿದ್ದೇನು? ಸುದೀಪ್ ಏನ್ ಹೇಳಿದ್ರು?


    ‘ಕಾಳಿ’ ಟೈಟಲ್ ಫಿಕ್ಸ್ ಮಾಡಿದ್ದ ಪ್ರೇಮ್ 


    ಧ್ರುವನ 6 ನೇ ಚಿತ್ರಕ್ಕೆ "ಕಾಳಿ" ಎಂದು ಟೈಟಲ್ ಫಿಕ್ಸ್ ಮಾಡಿ, ಈ ಟೈಟಲ್ ಗೆ ಪ್ರೇಮ್ ತಮ್ಮ ಸ್ಟೈಲ್ ನಂತೆ "Tha Devil"ಎಂಬ ಇಂಗ್ಲಿಷ್ ಪದವನ್ನು ಸಬ್ ಟೈಟಲ್ ಆಗಿ ಫಿಕ್ಸ್ ಮಾಡಿದ್ರು. ಅಲ್ಲದೆ ಈ ಚಿತ್ರದ ಟ್ರೈಟಲ್ ಡಿಸೈನ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿ, 3D ಎಫೆಕ್ಟ್ ನಲ್ಲಿ ಗ್ರಾಫಿಕ್ ಡಿಸೈನ್ ಮಾಡ್ಸೊದ್ರಲ್ಲಿ ಪ್ರೇಮ್ ಬ್ಯುಸಿಯಾಗಿದ್ರು.


    ಪ್ರೇಮ್ ಅಡ್ಡದಿಂದ ಕೈಜಾರಿದ ‘ಕಾಳಿ’! 


    ಗ್ರಾಫಿಕ್ ಟೀಂ ಜೊತೆ ಸೇರಿ ಟೈಟಲ್ ಗ್ರಾಫಿಕ್ ವರ್ಕ್ನ ಕಂಪ್ಲೀಟ್ ಮಾಡಿದ್ದ ಪ್ರೇಮ್..ಜೂನ್ ಎಂಡ್ ನಲ್ಲಿ ಗ್ರಾಂಡ್ ಇವೆಂಟ್ ಮೂಲಕ ಟೈಟಲ್ ರಿವೀಲ್ ಮಾಡೊ ಕನಸ್ಸು ಕಂಡಿದ್ರು ಪ್ರೇಮ್ ಅಂಡ್ ಧ್ರುವ..ಅದ್ರೆ ಪ್ರೇಮ್ ಧ್ರುವಗಾಗಿ ಕಂಡಿದ್ದ ಈ ಕನಸ್ಸಿಗೆ ನಿರ್ದೇಶಕ ಕೃಷ್ಣ "ಭಾರೀ ಮಳೆ"ಯನ್ನ ಸುರಿಸಿ ಬಿಟ್ಟಿದ್ದಾರೆ. ಜೋಗಿ ಪ್ರೇಮ್ ಇತ್ತ " ಕಾಳಿ the Devil" ಟೈಟಲ್ ಗ್ರಾಫಿಕ್ಸ್ ಕೆಲಸದಲ್ಲಿ ಕಳೆದೊಗಿದ್ರೆ‌. ಅತ್ತ ಕೃಷ್ಣ ಸೈಲೆಂಟ್ ಆಗಿ ನಾನು ಜೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜೊತೆ ಸಿನಿಮಾ ಮಾಡ್ತಿದ್ದು, ಆ ಚಿತ್ರಕ್ಕೆ "ಕಾಳಿ" ಎಂಬ ಟೈಟಲ್ ಇಟ್ಟಿದ್ದಿನಿ ಅಂತ ಅನೌನ್ಸ್ ಮಾಡಿ ಕರೆಂಟ್ ಹೊಡ್ದಂಗೆ ಸರ್ಯಾಗೆ  ಹೊಡ್ದಿದ್ದಾರೆ.


    ನಿರ್ಲಕ್ಷ್ಯದಿಂದ ತಪ್ಪು ಮಾಡಿದ್ರಾ ಪ್ರೇಮ್?


    ಪ್ರೇಮ್ ಕಳೆದ ಮೂರು ತಿಂಗಳಿನಿಂದ ಕಾಳಿ ಗಾಗಿ ಶ್ರಮ ಹಾಕ್ತಿದ್ದಾರೆ‌. ಅದ್ರೆ ಅವರು ಮಾಡಿದ ಒಂದು ಸಣ್ಣ ತಪ್ ಅಂದ್ರೆ ಕಾಳಿ ಟೈಟಲ್ ಹೆಬ್ಬುಲಿ ಚಿತ್ರ ನಿರ್ಮಾಣ ಮಾಡಿದ್ದ ಎಸ್ ಅರ್ ವಿ ಪ್ರೊಡಕ್ಷನ್ ಅಲ್ಲಿ ರಿಜಿಸ್ಟರ್ ಆಗಿದೆ  ಅಂತ ಗೊತ್ತಿತ್ತು. ಅಲ್ಲದೆ ಅವರಿಂದ ಆ ಟೈಟಲ್ ಪಡೆಯೊ ಕೆಲಸ ಕೂಡ ಮಾಡಿದ್ರು.. ಅದ್ರೆ ಪ್ರೇಮ್ ಗೆ ಹೆಬ್ಬುಲಿ ನಿರ್ಮಾಪಕರು ಸರಿಯಾದ ಸಮಯಕ್ಕೆ ಕೈಗೆ ಸಿಗಲಿಲ್ಲ.. ಅಯ್ಯೋ ಅವ್ರು ನಮ್ಮವ್ರೆ ಅಲ್ವಾ ' ಕಾಳಿ ' ಟೈಟಲ್ ನ ಅಮೇಲೆ ಇಸ್ಕೊಂಡ್ರೆ ಆಯ್ತು ಅಂತ ಗ್ರಾಫಿಕ್  ಕೆಲಸ ಮಾಡೊಕಡೆ ಗಮನ ಹರಿಸಿದ್ರು.


    ಕಾಳಿಯಾಗ್ತಿದ್ದಾರೆ ಜ್ಯೂನಿಯರ್ ಅಂಬರೀಶ್!


    ಇನ್ನು ಪ್ರೇಮ್ "ಕಾಳಿ" ಟೈಟಲ್ ಹಿಂದೆ ಬಿದ್ದಿರೊ ವಿಚಾರ ಕೃಷ್ಣ ಕಿವಿಗೆ ಬಿದ್ದು ಅಲರ್ಟ್ ಆಗಿ ತನ್ನ ಹೆಬ್ಬುಲಿ ಚಿತ್ರದ ನಿರ್ಮಾಪಕರ ಭೇಟಿ ಮಾಡಿ ಕಾಳಿ ಟೈಟಲ್ ನ ಅಭಿ ಚಿತ್ರಕ್ಕಾಗಿ ಪಡೆದು., ಕತೆ ಕೆಲಸ ಇನ್ನು ಮುಗಿಯದೇ ಇದ್ರು ರಿಸ್ಕ್ ಯಾಕೆ ಅಂತ ಕೃಷ್ಣ ಸೈಲೆಂಟ್ ಆಗಿ" ಕಾಳಿ " ಟೈಟಲ್ ನಲ್ಲಿ ಸಿನಿಮಾ ಮಾಡ್ತಿರೋದಾಗಿ ಹೇಳಿದ್ದಾರೆ ಅನ್ನೋ ಗಾಳಿ ಸುದ್ದಿ ಈಗ "ಕಾಳಿ " ಟೈಟಲ್ ಕುರಿತಾಗಿ ಬಂದಿದೆ..


    ಹೊಸ ಟೈಟಲ್ ಹುಡುಕಾಟದಲ್ಲಿ ಪ್ರೇಮ್


    ಯಾವಾಗ ಕೃಷ್ಣ " ಕಾಳಿ," ಟೈಟಲ್ ನಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಲೀಕ್ ಆಯ್ತೋ ಪ್ರೇಮ್ ಶಾಕ್ ಆಗಿ ಬಿಟ್ಟಿದ್ದಾರೆ. ಅಲ್ಲದೆ ಈಗ ಏನು ಮಾಡ ಲಾಗದ ಪರಿಸ್ಥಿತಿಯಲ್ಲಿರುವ ಪ್ರೇಮ್ ಮತ್ತೆ ಹೊಸ ಟೈಟಲ್ ಹುಡುಕಾಟದಲ್ಲಿ ತಲೆ ಕೆಡಿಸಿಕೊಂಡಿದ್ದಾರೆ.. ಯಾಕಂದ್ರೆ ಪ್ರೇಮ್ ಕಾಳಿ ಟೈಟಲ್ ಗೂ ಮೊದಲು ಧ್ರುವ ಚಿತ್ರಕ್ಕೆ "ಕೇಡಿ" ಎಂಬ ಟೈಟಲ್ ಹಿಂದೆ ಬಿದ್ದಿದ್ರು. ಅದ್ರೆ ಪ್ರೇಮ್ "ಕೇಡಿ" ಟೈಟಲ್ ಗೆ ಬೇಡಿ ತೊಡಿಸೊಕು ಮುನ್ನ ಹೊಸ ಟೀಮ್ ಒಂದು "ಕೇಡಿ" ಟೈಟಲ್ ನಲ್ಲಿ ಸಿನಿಮಾ ಅನೌನ್ಸ್ ಮಾಡಿ ಶೂಟಿಂಗ್ ಕಂಪ್ಲೀಟ್ ಮಾಡಿದ್ರು.


    ಇದನ್ನೂ ಓದಿ: Actor Jaggesh: ಹೊಸ ಕಾರು ಖರೀದಿಸಿದ ನವರಸ ನಾಯಕ - ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್


    ಇದರಿಂದ" ಕೇಡಿ" ಸಹವಾಸ ಬಿಟ್ಟಿದ್ದ ಪ್ರೇಮ್ "ಕಾಳಿ" ಬೆನ್ನು ಬಿದ್ದಿದ್ರು.. ಅದ್ರೆ ಈಗ ಕಾಳಿಯೂ ಪ್ರೇಮ್ ಕೈ ನಿಂದ ಜಾರಿದ್ದು ಮತ್ಯಾವ ಟೈಟಲ್ ಧ್ರುವ ಚಿತ್ರಕ್ಕೆ ಫೈನಲ್ ಮಾಡಿ ಶೂಟಿಂಗ್ ಶುರು ಮಾಡ್ತಾರೆ ಕಾದು ನೋಡಬೇಕು.


    (ವರದಿ: ಸತೀಶ್ ಎಂ.ಬಿ.)

    Published by:Annappa Achari
    First published: