ಆ ದಿನಗಳ ಬಳಿಕ ಅಂಡರ್​ವರ್ಲ್ಡ್​ನತ್ತ ಮುಖ ಮಾಡಿದ ನಿರ್ದೇಶಕ..!

ಆ ದಿನಗಳ ಬಳಿಕ 'ಸೂರ್ಯಕಾಂತಿ', 'ಪರಾರಿ', 'ಆಟಗಾರ', 'ಆಕೆ' ಸೇರಿದಂತೆ ಒಂದಷ್ಟು ಸಿನಿಮಾ ನಿರ್ದೇಶಿಸಿದ ಚೈತನ್ಯ ಇದೀಗ ಮತ್ತೆ ಅಂಡರ್​ವರ್ಲ್ಡ್​​ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಹೀಗಾಗಿ ಇದು ಆ ದಿನಗಳು-2 ಆಗಿರಲಿದೆ ಎಂದೇ ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಭೂಗತ ಜಗತ್ತಿನ ಕಹಾನಿ ತಿಳಿಸಿದ್ದ ನಿರ್ದೇಶಕ ಕೆಎಂ ಚೈತನ್ಯ ಇದೀಗ ಮತ್ತೊಮ್ಮೆ ಅಂಡರ್​ವರ್ಲ್ಡ್​ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚೈತನ್ಯ ನಿರ್ದೇಶಿಸಿದ 'ಆದ್ಯ' ಚಿತ್ರ ತೆರೆಕಂಡಿತ್ತು. ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಕೊರೋನಾ ಭೀತಿ ಆವರಿಸಿದ್ದರಿಂದ ಚಿತ್ರಮಂದಿರಗಳು ಬಂದ್ ಆಗಿದ್ದವು.

ಇದೀಗ ಚೈತನ್ಯ ಮತ್ತು ಟೀಂ ಮತ್ತೊಂದು ಕಥೆ ಹೆಣೆಯಲು ಸಜ್ಜಾಗಿ ನಿಂತಿದೆ. ಈಗಾಗಲೇ ಸಣ್ಣದೊಂದು ರೌಡಿಸಂ ಕಥೆ ಸೃಷ್ಟಿಸಿಕೊಂಡಿರುವ ಚೈತನ್ಯ ಅದರ ಚಿತ್ರಕಥೆಗೆ ಸ್ಪಷ್ಟ ರೂಪ ತರಲು ಅಣಿಯಾಗುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಭೂಗತ ಜಗತ್ತಿನ ಕಥೆಯನ್ನು ತೆರೆ ಮೇಲೆ ಮೂಡಿಸಿ ಯಶಸ್ವಿಯಾಗಿದ್ದೆ. ಆದರೆ ಈ ಬಾರಿ ಕಾಲ್ಪನಿಕ ಕಥೆಯೊಂದನ್ನು ಬರೆಯುತ್ತಿದ್ದೇನೆ. ಇದು ಸತ್ಯ ಘಟನೆ ಅಲ್ಲದಿದ್ದರೂ, ಈ ಕಥೆಗೂ ಕರ್ನಾಟಕ ಇತಿಹಾಸಕ್ಕೂ ಸಂಬಂಧವಿರಲಿದೆ. ಹೀಗಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದು ಚೈತನ್ಯ ಅವರು ತಿಳಿಸಿದ್ದಾರೆ.

ಆ ದಿನಗಳ ಬಳಿಕ 'ಸೂರ್ಯಕಾಂತಿ', 'ಪರಾರಿ', 'ಆಟಗಾರ', 'ಆಕೆ' ಸೇರಿದಂತೆ ಒಂದಷ್ಟು ಸಿನಿಮಾ ನಿರ್ದೇಶಿಸಿದ ಚೈತನ್ಯ ಇದೀಗ ಮತ್ತೆ ಅಂಡರ್​ವರ್ಲ್ಡ್​​ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಹೀಗಾಗಿ ಇದು ಆ ದಿನಗಳು-2 ಆಗಿರಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕೂಡ ಚೈತನ್ಯ ಸ್ಪಷ್ಟನೆ ನೀಡಿದ್ದು, ಇದು ಆ ದಿನಗಳು-2 ಅಂತು ಅಲ್ಲ, ಅಂತಹ ಕಥೆ ಕೂಡ ಈ ಚಿತ್ರದಲ್ಲಿರಲ್ಲ ಎಂದಿದ್ದಾರೆ. ಸದ್ಯ ಚಿತ್ರಕಥೆಯನ್ನು ರೆಡಿ ಮಾಡುತ್ತಿದ್ದು, ಆ ಬಳಿಕ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಕೂಡ ಚೈತನ್ಯ ಹೇಳಿಕೊಂಡಿದ್ದಾರೆ.
First published: