• Home
  • »
  • News
  • »
  • entertainment
  • »
  • 777 Charlie: ನಿರ್ದೇಶಕ ಕಿರಣರಾಜ್ ಕೆ ಸಿನಿಮಾಕ್ಕೆ ಎಂಟ್ರಿ ಕೊಡುವ ಮುನ್ನ ಇವೆಲ್ಲಾ ಕೆಲಸಗಳನ್ನು ಮಾಡಿದ್ರಂತೆ

777 Charlie: ನಿರ್ದೇಶಕ ಕಿರಣರಾಜ್ ಕೆ ಸಿನಿಮಾಕ್ಕೆ ಎಂಟ್ರಿ ಕೊಡುವ ಮುನ್ನ ಇವೆಲ್ಲಾ ಕೆಲಸಗಳನ್ನು ಮಾಡಿದ್ರಂತೆ

‘777 ಚಾರ್ಲಿ’ ನಿರ್ದೇಶಕ ಕಿರಣರಾಜ್ ಕೆ

‘777 ಚಾರ್ಲಿ’ ನಿರ್ದೇಶಕ ಕಿರಣರಾಜ್ ಕೆ

ಮಾಡಿದರೆ ಸಿನಿಮಾನೇ ಮಾಡಬೇಕು ಎಂದು ಹಲವಾರು ಕನಸು ಹೊತ್ತು ಗೊತ್ತು, ಗುರಿಯಿಲ್ಲದೇ ಬರುವ ಹೊಸಬರಿಗೆ ಚಿತ್ರಂಗದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವುದು ಮಾತ್ರ ಕಷ್ಟ. ಆದಾಗ್ಯೂ ಒಂದೇ ಒಂದು ಸಿನಿಮಾ ಹಿಟ್ ಕೊಟ್ಟರೇ ಸಾಕು ಮತ್ತೆ ಹೊಸದಾಗಿ ಅವರ ಪರಿಚಯವನ್ನು ಪ್ರೇಕ್ಷಕರಿಗೆ ಮಾಡೋದೇ ಬೇಡ, ಅಷ್ಟರ ಮಟ್ಟಿಗೆ ಜನ ಪ್ರೀತಿ ಕೊಟ್ಟು ಬಿಡುತ್ತಾರೆ. ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಉದಯೋನ್ಮುಖ ನಿರ್ದೇಶಕರೊಬ್ಬರ ಹೆಸರು ಈ ಬಾರಿ ಚಾಲ್ತಿಯಲ್ಲಿದ್ದು, ಅವರ ಬಗ್ಗೆ ಒಂದು ಸಣ್ಣ ಡಿಟೇಲ್ಸ್ ಇಲ್ಲಿದೆ

ಮುಂದೆ ಓದಿ ...
  • Share this:

ಚಿತ್ರರಂಗಕ್ಕೆ (Cinema) ಧುಮುಕುವುದು ಸುಲಭದ ಮಾತಲ್ಲ. ಇಲ್ಲಿ ಗಾಡ್ ಫಾದರ್ (God Father) ಜೊತೆ ಬಂದಿರುವವರು ಸಲೀಸಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಿಡ್ತಾರೆ. ಅದೇ, ಮಾಡಿದರೆ ಸಿನಿಮಾನೇ ಮಾಡಬೇಕು ಎಂದು ಹಲವಾರು ಕನಸು (Dream) ಹೊತ್ತು ಗೊತ್ತು, ಗುರಿಯಿಲ್ಲದೇ ಬರುವ ಹೊಸಬರಿಗೆ ಚಿತ್ರಂಗದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವುದು ಮಾತ್ರ ಕಷ್ಟ. ಆದಾಗ್ಯೂ ಒಂದೇ ಒಂದು ಸಿನಿಮಾ ಹಿಟ್ (Hit) ಕೊಟ್ಟರೇ ಸಾಕು ಮತ್ತೆ ಹೊಸದಾಗಿ ಅವರ ಪರಿಚಯವನ್ನು (Introduction) ಪ್ರೇಕ್ಷಕರಿಗೆ ಮಾಡೋದೇ ಬೇಡ, ಅಷ್ಟರ ಮಟ್ಟಿಗೆ ಜನ ಪ್ರೀತಿ ಕೊಟ್ಟು ಬಿಡುತ್ತಾರೆ. ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ (Sandalwood) ಉದಯೋನ್ಮುಖ ನಿರ್ದೇಶಕರೊಬ್ಬರ (Director) ಹೆಸರು ಈ ಬಾರಿ ಚಾಲ್ತಿಯಲ್ಲಿದ್ದು, ಅವರ ಬಗ್ಗೆ ಒಂದು ಸಣ್ಣ ಡಿಟೇಲ್ಸ್ (Details) ಇಲ್ಲಿದೆ


'777 ಚಾರ್ಲಿ' ಸಿನೆಮಾದ ನಿರ್ದೇಶಕ ಕಿರಣರಾಜ್. ಕೆ
ಕಿರಣರಾಜ್. ಕೆ, ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಯುವ ನಿರ್ದೇಶಕ. ಬಹು ನಿರೀಕ್ಷಿತ '777 ಚಾರ್ಲಿ', 'ಕಥಾ ಸಂಗಮ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾವನ್ನೇ ಪ್ಯಾಷನ್ ಆಗಿಸಿಕೊಂಡಿರುವ ಕಿರಣ್ ಅವರ ನಿರ್ದೇಶಕನಾಗುವ ಕನಸಿನ ಹಾದಿ ಸುಲಭವಾಗಿರಲಿಲ್ಲ. ಜೀವನದಲ್ಲಿ ಹಲವಾರು ಏಳು-ಬೀಳುಗಳ ನಡುವೆ ನಿರ್ದೇಶಕರಾಗಿರುವ ಕಿರಣ್ ಜೀವನ ಕಥೆ ಹೀಗಿದೆ.


ಸುದೀರ್ಘ ಕಾಯುವಿಕೆಯ ನಂತರ, ಪ್ಯಾನ್-ಇಂಡಿಯಾ ಸಿನಿಮಾ 777 ಚಾರ್ಲಿ ಬಿಡುಗಡೆಗೆ ಸಿದ್ಧವಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಕಿರಣ್ ರಾಜ್ ಅವರದ್ದೇ ನಿರ್ದೇಶನ.


ಬಾರ್‌ನಲ್ಲಿ ವೇಟರ್ ಆಗಿ, ಸೆಕ್ಯೂರಿಟಿ ಗಾರ್ಡ್ ಆಗಿ, ಸೇಲ್ಸ್ ಮ್ಯಾನ್ ಆಗಿ ಕೆಲಸ
ತಮ್ಮ ಸಿನಿ ಪಯಣದ ಬಗ್ಗೆ ಸ್ವತಃ ಮಾತನಾಡಿರುವ ಕಿರಣ್, “ಮನೆಯ ಆರ್ಥಿಕ ಸ್ಥಿತಿಯಿಂದಾಗಿ ನಾನು 10ನೇ ತರಗತಿಯ ನಂತರ ಶಾಲೆ ಬಿಟ್ಟು ಮಂಗಳೂರಿನ ಬಾರ್‌ನಲ್ಲಿ ವೇಟರ್ ಆಗಿ, ಸೆಕ್ಯೂರಿಟಿ ಗಾರ್ಡ್ ಆಗಿ, ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿದೆ. ಆದರೆ ಎಲ್ಲಾ ಸಮಯದಲ್ಲೂ, ನನ್ನ ಗುರಿ ಚಿತ್ರರಂಗ ಮಾತ್ರ ಆಗಿತ್ತು. 2010ರಲ್ಲಿ ನಾನು ಬೆಂಗಳೂರಿಗೆ ಬಂದೆ ಮತ್ತು ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿದೆ. ಚಿತ್ರರಂಗದ ವ್ಯಕ್ತಿಗಳನ್ನು ಮತ್ತು ಹಲವಾರು ಚಲನಚಿತ್ರ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ. ಆದರೆ ಯಾವೂದು ಕೈ ಹಿಡಿಯಲಿಲ್ಲ. ಹೀಗಾಗಿ ನಾನು ಮತ್ತೆ ಕಾಸರಗೋಡಿಗೆ ಹೋಗಬೇಕಾಯಿತು” ಎನ್ನುತ್ತಾರೆ ಕಿರಣ್.


ಇದನ್ನೂ ಓದಿ: Thank You Movie: ನಾಗ ಚೈತನ್ಯ ಅಭಿನಯಿಸಿರುವ ‘ಥ್ಯಾಂಕ್ಯೂ’ ಚಿತ್ರದ ಡೈಲಾಗ್ ಗಳಲ್ಲಿ ಸಮಂತಾಳನ್ನು ಟಾರ್ಗೆಟ್ ಮಾಡಿದ್ಯಾ?


ಸಿನಿ ಪಯಣ ಶುರು ಆಗಿದ್ದು ಹೀಗೆ
ಮಾತು ಮುಂದುವರಿಸಿದ ಕಿರಣ್ “ನಾನು ಕಬ್ಬಿನ ಹಾಲು ಮುಂತಾದ ಕಿರುಚಿತ್ರಗಳನ್ನು ಮಾಡಿದ್ದೇನೆ ಮತ್ತು ಅವು ಗೆದ್ದವು. ಇದು ಚಲನಚಿತ್ರಗಳಲ್ಲಿ ನನ್ನ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸಲು ನನಗೆ ಆತ್ಮವಿಶ್ವಾಸವನ್ನು ನೀಡಿತು. ಆಗ ನಾನು ನಿರ್ದೇಶಕ ಜಯತೀರ್ಥರನ್ನು ಭೇಟಿಯಾದೆ ಮತ್ತು ಅವರ ಮೂಲಕ 'ಎಂದೆಂದಿಗೂ' ಮತ್ತು 'ರಿಕ್ಕಿ' ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅಲ್ಲಿ ನಾನು ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರನ್ನು ಭೇಟಿ ಮಾಡಿದೆ. 'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಅವರ ಕೆಲಸ ನೋಡಿ ನನಗೆ ಭಯವಾಗಿತ್ತು. ಅವರೊಟ್ಟಿಗಿನ ಕೆಲಸ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿತು ಮತ್ತು ನನ್ನ ಕನಸುಗಳಿಗೆ ರೆಕ್ಕೆಗಳನ್ನು ನೀಡಿತು” ಎನ್ನುತ್ತಾರೆ ಕಿರಣ್.


ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಥಾ ಸಂಗಮದಲ್ಲಿ ಸಾಗರ ಸಂಗಮ ಭಾಗವನ್ನು ಕಿರಣ್‌ರಾಜ್ ನಿರ್ದೇಸಿಸಿದ್ದರು. “ನಾನು ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಅವರ ಭಾಗಗಳನ್ನು ನಿರ್ದೇಶಿಸಿದ್ದೇನೆ. ಅದರಲ್ಲಿ ಒಂದು ನಾಯಿಯೂ ಇತ್ತು, ಅದು ನನ್ನನ್ನು 777 ಚಾರ್ಲಿ ಸಿನಿಮಾಗೆ ಸಿದ್ಧಪಡಿಸಿತು” ಎಂದರು.


ಚಾರ್ಲಿ ಜೊತೆ ಶೂಟಿಂಗ್ ಮಾಡೋದು ಚಾಲೆಂಜ್ ಆಗಿತ್ತಾ?
ಈ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕರು,” ಚಾರ್ಲಿ ಜೊತೆ ಶೂಟ್ ಮಾಡುವುದು ಸುಲಭವಾಗಿರಲಿಲ್ಲ. ಎರಡೂವರೆ ವರ್ಷಗಳ ತಾಳ್ಮೆಗೆ ಫಲ ಸಿಕ್ಕಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಕೂಡ ಮೂಡ್ ಸ್ವಿಂಗ್ ಇರುತ್ತದೆ. ಆದ್ದರಿಂದ, ನಾವು ಅದಕ್ಕೆ ವಿಶ್ರಾಂತಿ ಪಡೆಯಲು ಚಿತ್ರೀಕರಣದ ನಡುವೆ ಬ್ರೇಕ್ ತೆಗೆದುಕೊಳ್ಳಬೇಕಾಗಿತ್ತು” ಎಂದು ಕಿರಣ್‌ರಾಜ್ ಹಂಚಿಕೊಳ್ಳುತ್ತಾರೆ.


ಇದನ್ನೂ ಓದಿ:  Aishwarya Rai: 30 ವರ್ಷಗಳ ಹಿಂದೆ ಐಶ್ವರ್ಯ ರೈ ಹೇಗಿದ್ರು ಗೊತ್ತಾ? ಅವರು ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!


ಸಿನಿಮಾ ಆಯ್ಕೆ ಮಾಡುವ ವಿಷಯಕ್ಕೆ ಬಂದಾಗ, ಕಿರಣರಾಜ್‌ಗೆ '777 ಚಾರ್ಲಿ' ಪರಿಪೂರ್ಣವಾಗಿತ್ತು, ಏಕೆಂದರೆ ಅವರು ಪ್ರಾಣಿ ಪ್ರೇಮಿ ಮತ್ತು ಸಿನಿಮಾದ ಮೇಲೆ ಹೊಸ ಕ್ರೇಜ್ ಇರುವಂತವರು. "ಭಾರತೀಯ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಈ ಪ್ರಕಾರವನ್ನು ಅನ್ವೇಷಿಸಿದ ಚಲನಚಿತ್ರಗಳು ಹೆಚ್ಚು ಇಲ್ಲ, ನಾನು ಆರಂಭದಲ್ಲಿ ಸ್ಕ್ರಿಪ್ಟ್ ಅನ್ನು ಬರೆದಾಗ, ಅದು ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡಿತ್ತು. ನಂತರ ರಕ್ಷಿತ್ ಶೆಟ್ಟಿ ನಮ್ಮ ಸಿನಿಮಾವನ್ನು ಬಹು ಭಾಷೆಗಳಲ್ಲಿ ಯೋಚಿಸುವಂತೆ ಮಾಡಿದರು. ಟ್ರೇಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದು ಪ್ರಪಂಚದಾದ್ಯಂತ ಪ್ರೇಕ್ಷಕರ ನೀರಿಕ್ಷೆಯನ್ನು ಹೆಚ್ಚು ಮಾಡಿದೆ. . ನನ್ನಂತಹ ಚೊಚ್ಚಲ ನಿರ್ದೇಶಕನಿಗೆ ಇದು ತುಂಬಾ ದೊಡ್ಡ ವಿಷಯ ಎನ್ನುತ್ತಾರೆ ಕಿರಣರಾಜ್

Published by:Ashwini Prabhu
First published: