• Home
  • »
  • News
  • »
  • entertainment
  • »
  • Jogi Prem Film: ಜೋಗಿ ಪ್ರೇಮ್ ಚಿತ್ರದ ಪೋಸ್ಟರ್​​ನಲ್ಲಿ ಚಪ್ಪಲಿ-ಮಚ್ಚು-ಕುರ್ಚಿ ಇರೋದ್ಯಾಕೆ? ಧ್ರುವ ಫ್ಯಾನ್ಸ್ ಸಿಟ್ಟಾಗೋದಿಲ್ವೇ?

Jogi Prem Film: ಜೋಗಿ ಪ್ರೇಮ್ ಚಿತ್ರದ ಪೋಸ್ಟರ್​​ನಲ್ಲಿ ಚಪ್ಪಲಿ-ಮಚ್ಚು-ಕುರ್ಚಿ ಇರೋದ್ಯಾಕೆ? ಧ್ರುವ ಫ್ಯಾನ್ಸ್ ಸಿಟ್ಟಾಗೋದಿಲ್ವೇ?

ಇದೇ 20ಕ್ಕೆ ಧ್ರುವ ಸರ್ಜಾ -ಜೋಗಿ ಪ್ರೇಮ್ ಟೈಟಲ್ ರಿವೀಲ್

ಇದೇ 20ಕ್ಕೆ ಧ್ರುವ ಸರ್ಜಾ -ಜೋಗಿ ಪ್ರೇಮ್ ಟೈಟಲ್ ರಿವೀಲ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಟೈಟಲ್ ಇದೇ ಅಕ್ಟೋಬರ್ 20 ರಂದು ರಿವೀಲ್ ಆಗುತ್ತಿದೆ. ಈ ಬಗ್ಗೆ ಹಬ್ಬದ ದಿನ ವಿಶೇಷ ಪೋಸ್ಟರ್ ಮೂಲಕ ಜೋಗಿ ಪ್ರೇಮ್ ಮಾಹಿತಿ ಕೊಟ್ಟಿದ್ದಾರೆ.

  • Share this:

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಹಾಗೂ ಡೈರೆಕ್ಟರ್ ಜೋಗಿ ಪ್ರೇಮ್ (Director Jogi Prem) ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಚಾರ ಈಗಾಗಲೇ ವೈರಲ್ (Viral) ಆಗಿದೆ. ಆದರೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಮುಂಬೈಗೆ ಹೋಗಿ ಲೈವ್ ಮ್ಯೂಸಿಕ್ ಮಿಕ್ಸಿಂಗ್ ಕೂಡ ಮಾಡಿಸಿಕೊಂಡು ಬಂದಿದ್ದಾರೆ. ಇದು ಬಿಟ್ಟರೇ, ಈ ಸಿನಿಮಾ ಬಗ್ಗೆ ಇಲ್ಲಿವರೆಗೂ ಯಾವುದೇ ಮಾಹಿತಿ ಹೊರಗೆ ಬಿದ್ದಿಯೇ ಇಲ್ಲ. ಅಧಿಕೃತವಾಗಿಯೂ ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ಹೇಳಿಕೊಂಡಿಲ್ಲ. ಆದರೆ ದಸರಾ ಹಬ್ಬದ ದಿನ ಜೋಗಿ ಪ್ರೇಮ್ ಒಂದು ನ್ಯೂಸ್ ಕೊಟ್ಟಿದ್ದಾರೆ. ಈ ನ್ಯೂಸ್ ಧ್ರುವ ಜನ್ಮ ದಿನಕ್ಕೆ ಗಿಫ್ಟ್ ಕೂಡ ಆಗಿದೆ. ಆ ಸುದ್ದಿ ಏನೂ ಅನ್ನೋದನ್ನ ತಿಳಿಯೋಕೆ ಈ ಸ್ಟೋರಿ ಓದಿ.


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ಜೋಗಿ ಪ್ರೇಮ್ ಸಿನಿಮಾ ಟೈಟಲ್ ಏನು?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡೈರೆಕ್ಟರ್ ಜೋಗಿ ಪ್ರೇಮ್ ಈ ಸಿನಿಮಾ ಮೂಲಕವೇ ಫಸ್ಟ್ ಟೈಮ್ ಜೋಡಿ ಆಗಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೋಸ್ಕರವೇ ಡೈರೆಕ್ಟರ್ ಪ್ರೇಮ್ ಈ ಸಿನಿಮಾ ಮಾಡುತ್ತಿದ್ದಾರೆ.


Director Jogi Prem Action Prince Dhruva Sarja New Movie Title Launch on October 20
ಇದೇ 20 ರಂದು ಧ್ರುವ-ಪ್ರೇಮ್ ಸಿನಿಮಾ ಟೈಟಲ್


ಧ್ರುವ ಸರ್ಜಾ ಆ್ಯಕ್ಷನ್ ಪ್ರಿನ್ಸ್ ಆದ್ರೆ, ಜೋಗಿ ಪ್ರೇಮ್ ಮಾಸ್ ಡೈರೆಕ್ಟರ್ ಅಂತಲೇ ಹೇಳಬಹುದು. ಹಿಂಗಿರೋವಾಗ, ಈ ಜೋಡಿಯ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಕೂಡ ಹುಟ್ಟಿಕೊಂಡಿದೆ.


ಧ್ರುವ ಸರ್ಜಾ ಚಿತ್ರದಲ್ಲೂ ಅದ್ಭುತ ಹಾಡುಗಳ ಹಂಗಾಮ
ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಒಳ್ಳೆ ಹಾಡುಗಳು ಕೂಡ ಇರುತ್ತವೆ. ಹೀಗಂತ ಹೇಳೋಕೆ ಈಗಾಗಲೇ ಒಂದು ಎಕ್ಸಾಂಪಲ್ ಅನ್ನೂ ನಾವು ಕೊಡಬಹುದು. ಹೌದು, ಜೋಗಿ ಪ್ರೇಮ್ ಮತ್ತು ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಜೊತೆಗೂಡಿಯೇ ಈಗಾಗಲೇ ಹಾಡುಗಳನ್ನ ರೆಡಿ ಮಾಡಿಸಿದ್ದಾರೆ.


ಇದನ್ನೂ ಓದಿ: Kantara Demand: ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಕನಸು ನನಸು! ಕಾಂತಾರಕ್ಕೆ ಡಬ್ಬಿಂಗ್ ಡಿಮ್ಯಾಂಡ್


ಅರ್ಜುನ್ ಜನ್ಯ ಮತ್ತು ಜೋಗಿ ಪ್ರೇಮ್ ಮುಂಬೈಗೂ ಹೋಗಿದ್ದರು. ಅಲ್ಲಿಯ ಯಶ್ ರಾಜ್ ಸ್ಟುಡಿಯೋದಲ್ಲಿ ಲೈವ್ ಮ್ಯೂಸಿಕ್ ಮಿಕ್ಸಿಂಗ್ ಕೂಡ ಮಾಡಿಸಿಕೊಂಡು ಬಂದಿದ್ದಾರೆ.


ದಸರಾ ಹಬ್ಬ ದಿನ ಧ್ರುವ ಸರ್ಜಾಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಜೋಗಿ
ಜೋಗಿ ಪ್ರೇಮ್ ತಮ್ಮ ಚಿತ್ರ ಜೀವನದಲ್ಲಿ ಎಂದೂ ಯಾವುದನ್ನೂ ಮೊದಲೇ ಬಿಟ್ಟುಕೊಡುವುದಿಲ್ಲ. ಏನೂ ಹೇಳದೇನೆ ಎಲ್ಲವನ್ನೂ ಹೇಳುವ ಹಾಗೆ ಮಾಡೋ ಡೈರೆಕ್ಟರ್ ಜೋಗಿ ಪ್ರೇಮ್, ಈ ಚಿತ್ರದ ವಿಚಾರದಲ್ಲೂ ಈಗಲೇ ಏನೂ ಬಿಟ್ಟುಕೊಟ್ಟಿಲ್ಲ.


ಆದರೆ ಈ ಚಿತ್ರದ ಒಂದು ವಿಷಯವನ್ನ ಹಬ್ಬದ ದಿನ ಡೈರೆಕ್ಟರ್ ಜೋಗಿ ಪ್ರೇಮ್ ಬಿಟ್ಟುಕೊಟ್ಟಿದ್ದಾರೆ. ಹೌದು, ಜೋಗಿ ಪ್ರೇಮ್ ತಮ್ಮ ಈ ಚಿತ್ರದ ಟೈಟಲ್ ರಿಲೀಸ್ ಬಗ್ಗೆ ಒಂದು ಮಾಹಿತಿಯನ್ನ ಈಗಲೇ ಕೊಟ್ಟಿದ್ದಾರೆ.


ಅ-20 ರಂದು ಧ್ರುವ ಸರ್ಜಾ-ಜೋಗಿ ಪ್ರೇಮ್ ಚಿತ್ರದ ಟೈಟಲ್ ರಿವೀಲ್
ಧ್ರುವ ಸರ್ಜಾ ಹಾಗೂ ಡೈರೆಕ್ಟರ್ ಪ್ರೇಮ್ ಸಿನಿಮಾ ಟೈಟಲ್ ಬಗ್ಗೆ ಈಗಲೇ ಭಾರೀ ಕುತೂಹಲ ಹುಟ್ಟಿಕೊಂಡಿದೆ. ಧ್ರುವ ಸರ್ಜಾ ಫ್ಯಾನ್ಸ್​ಗೂ ಈ ಕುರಿತು ಕುತೂಹಲ ಇದೆ.
ನಿಜ, ಈ ಒಂದು ಕಾರಣಕ್ಕೇನೆ ಟೈಟಲ್ ವಿಚಾರದಲ್ಲೂ ಡೈರೆಕ್ಟರ್ ಜೋಗಿ ಪ್ರೇಮ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅಕ್ಟೋಬರ್-20 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಚಿತ್ರದ ಟೈಟಲ್ ರಿವೀಲ್ ಆಗುತ್ತಿದೆ.


ಟೈಟಲ್ ರಿವೀಲ್ ಡೇಟ್ ಅನೌನ್ಸ್ ಮಾಡಲು ಸ್ಪೆಷಲ್ ಫೋಸ್ಟರ್
ಜೋಗಿ ಪ್ರೇಮ್ ತಮ್ಮ ಚಿತ್ರವನ್ನ ತುಂಬಾ ಚೆನ್ನಾಗಿಯೇ ಪ್ರಚಾರ ಮಾಡ್ತಾರೆ. ಜನರಲ್ಲಿ ಆ ಬಗ್ಗೆ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಾರೆ. ಅದರಂತೆ ತಮ್ಮ ಈ ಚಿತ್ರದ ಟೈಟಲ್ ರಿವೀಲ್ ಮಾಡುತ್ತೇವೆ ಅಂತ ಡೇಟ್ ಅನೌನ್ಸ್ ಮಾಡಲು ಕೂಡ ಜೋಗಿ ಪ್ರೇಮ್ ಈ ಒಂದು ಫೋಸ್ಟರ್ ಮಾಡಿಸಿದ್ದಾರೆ.


Director Jogi Prem Action Prince Dhruva Sarja New Movie Title Launch on October 20
ಧ್ರು ಸರ್ಜಾ ಸಖತ್ ಪೋಜ್


ಈ ಫೋಸ್ಟರ್ ಅನ್ನ ದಸರಾ ಹಬ್ಬದ ಶುಭಾಶಯ ತಿಳಿಸಲೂ ಕೂಡ ಜೋಗಿ ಪ್ರೇಮ್ ಬಳಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಅನ್ನ ಇದೇ 20ಕ್ಕೆ ರಿವೀಲ್ ಮಾಡ್ತೀವಿ ಅಂತಲೂ ಇದರಲ್ಲಿಯೇ ಹೇಳಿಕೊಂಡಿದ್ದಾರೆ.


ಟೈಟಲ್ ರಿವೀಲ್ ಗೆ ಮಾಡಿರೋ ಫೋಸ್ಟರ್ ವಿಶೇಷ ಏನು ಗೊತ್ತೇ?
ಈ ಫೋಸ್ಟರ್ ಅನ್ನ ಸೂಕ್ಷ್ಮವಾಗಿ ಒಮ್ಮೆ ಗಮನಿಸಿ ನೋಡಿದ್ರೆ ಇಲ್ಲಿ ಹಲವು ವಿಶೇಷತೆಗಳಿವೆ. ಸಿಂಹಾಸನ ರೀತಿಯ ಒಂದು ಕುರ್ಚಿ ಇದೆ. ಒಂದು ಜೋಡು ಚಪ್ಪಲಿಯನ್ನ ಇಡಲಾಗಿದೆ. ಇದೇ ಕುರ್ಚಿ ಬಳಿಯ ರಕ್ತಸಿಕ್ತ ಬಿಳ್ಳಿ ಬಣ್ಣದ ಮಚ್ಚು ಕೂಡ ಇದೆ.


ಇಷ್ಟೆಲ್ಲ ಈ ಒಂದು ಪೋಸ್ಟರ್ ನಲ್ಲಿಯೇ ಇವೆ. ಇದರ ಜೊತೆಗೆ ಈ ಚಿತ್ರವೂ ಕನ್ನಡ, ಹಿಂದಿ, ತಮಿಳು, ತೆಲುಗು ಮಲೆಯಾಳಂ ಭಾಷೆಯಲ್ಲೂ ರೆಡಿ ಆಗುತ್ತದೆ.


ಇದನ್ನೂ ಓದಿ: Rashmika Mandanna: ಗುಡ್ ಬೈ ಚಿತ್ರ ಬಿಡುಗಡೆಗೂ ಮುನ್ನ ರಶ್ಮಿಕಾ ಮಂದಣ್ಣ ವೈಟ್​​ಗೌನಲ್ಲಿ ಮಿಂಚಿದ್ದು ಹೀಗೆ!


ಈ ಒಂದು ವಿಚಾರ ಇದೇ ಫೋಸ್ಟರ್ ನಲ್ಲಿಯೇ ತಿಳಿಯುತ್ತದೆ. ಕೆವಿಎನ್ ಪ್ರೋಡಕ್ಷನ್ ಹೌಸ್ ನ ಈ ಚಿತ್ರದ ಟೈಟಲ್ ಟೀಸರ್ ಲಾಂಚ್ ವಿಚಾರ ಈಗ ಸದ್ಯದ ಅಪ್​ಡೇಟ್ ಅಂದ್ರೆ ತಪ್ಪೇ ಇಲ್ಲ.

First published: