ಭರ್ಜರಿ ಚೇತನ್​ ಅವರ ಮುಂದಿನ ಸಿನಿಮಾಗೂ 'ಬ' ಅಕ್ಷರದ ಟೈಟಲ್​ ಫಿಕ್ಸ್​

news18
Updated:June 23, 2018, 12:42 PM IST
ಭರ್ಜರಿ ಚೇತನ್​ ಅವರ ಮುಂದಿನ ಸಿನಿಮಾಗೂ 'ಬ' ಅಕ್ಷರದ ಟೈಟಲ್​ ಫಿಕ್ಸ್​
news18
Updated: June 23, 2018, 12:42 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಈ ಸಿನಿಮಾ ರಂಗದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸೆಂಟಿಮೆಂಟ್ ಇರುತ್ತದೆ ! ಒಂದು ಸಲ ಯಾವುದೋ ಒಂದು ಅಂಶ ಕೈ ಹಿಡಿದರೆ ಅದನ್ನ ಜಪ್ಪಯ್ಯ ಅಂದರೂ ಬಿಟ್ಟುಕೊಡೋಕೆ ಸಿದ್ಧರಿರೋದಿಲ್ಲ ಯಾರು. ಈಗ ಭರ್ಜರಿ ಚೇತನ್‍ ಅವರಿಗೂ ಗೆಲುವಿನ ದಾರಿ ಹಾಗೂ ಅದೊಂದು ಅಕ್ಷರದಲ್ಲಿರೋ ಗುಟ್ಟು ಗೊತ್ತಾಗಿದೆ. ಹೀಗಾಗಿ ಅವರು ಆ ಸೆಂಟಿಮೆಂಟ್​ ಬಿಟ್ಟು, ಬೇರೆ ಮಾಡೋಕೆ ಸಿದ್ದರಿಲ್ಲ.

ಚೇತನ್ 'ಬಹದ್ಧೂರ್' ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಆ್ಯಕ್ಷನ್ ಪ್ರಿನ್ಸ್‍ಗೆ ನಿರ್ದೇಶನ ಮಾಡಿದ್ದ ಚೇತನ್, ಮೊದಲ ಚಿತ್ರದಲ್ಲೇ ಯಶಸ್ಸು ಕಂಡು ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಎನಿಸಿಕೊಂಡರು.

ಇನ್ನು 'ಭರ್ಜರಿ' ಮೂಲಕ ಎರಡನೇ ಬಾರಿಗೆ ಧೃವನಿಗೆ ಜೊತೆಯಾದ ಚೇತನ್, ಎರಡನೇ ಚಿತ್ರದಲ್ಲೂ ಯಶಸ್ಸಿನ ಸವಾರಿ ಮಾಡಿದ್ದರು. ಈ ಮೂಲಕ ಚಂದನವನದ ಯಶಸ್ವೀನಿರ್ದೇಶಕರ ಸಾಲಿನಲ್ಲಿ ನಿಂತರು.

ಇವೆರಡು ಸಿನಿಮಾಗಳನ್ನ ಗಮನಿಸೋದಾದರೆ, ಎರಡು ಸಿನಿಮಾಗಳ ಹೆಸರುಗಳು 'ಬ' ಅಕ್ಷರದಿಂದ ಶುರುವಾಗಿದ್ದವು. ಹೀಗಾಗಿ `ಬ' ಅನ್ನೋದು ನನ್ನ ಗೆಲುವಿನ ಫ್ಯಾಕ್ಟರ್​ ಅನ್ನೋ ಸೆಂಟಿಮೆಂಟ್‍ಗೆ ಚೇತನ್ ಕಟ್ಟುಬಿದ್ದಿದ್ದಾರೆ. ಹೀಗಾಗಿ ಶ್ರೀ ಮುರಳಿ ಜೊತೆಗಿನ ಮುಂದಿನ ಚಿತ್ರಕ್ಕೆ 'ಭರಾಟೆ' ಎನ್ನುವ ಟೈಟಲ್ ಇಟ್ಟಿದ್ದಾರೆ.

ಈ ಮೂಲಕ ಹ್ಯಾಟ್ರಿಕ್ ಬಾರಿಸಲು ಸಜ್ಜಾಗಿದ್ದಾರೆ ಚೇತನ್​. ಹಾಗಂತ ಒಂದು ಸಿನಿಮಾದ ಗೆಲುವಿನಲ್ಲಿ ಯಾವುದೋ ಒಂದು ಅಕ್ಷರ, ಅಥವಾ ಇನ್ಯಾವುದೋ ಲಕ್ ಫ್ಯಾಕ್ಟರ್​ ಮುಖ್ಯವಾಗುತ್ತೆ ಅಂತಲ್ಲ. ಆದರೆ ಸಿನಿರಂಗದಲ್ಲಿ ಪ್ರತಿಭೆ ಜೊತೆ ಲಕ್ ಕೂಡ ಮುಖ್ಯವಾಗುವುದರಿಂದ, ಒಮ್ಮೆ ನಂಬಿದ ನಂಬಿಕೆಯನ್ನ ಬಿಡೋಕೆ ಯಾರು ಸಿದ್ದರಿರೋದಿಲ್ಲ.

 
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...