HOME » NEWS » Entertainment » DIRECTOR BUCHI BABU COMPARES PUSHPA WITH KGF 2 AND SAYS PUSHPA IS 10 TIMES GREATER THAN KGF CHAPTER 2 AE

KGF -Pushpa: ತೆಲುಗು ಸಿನಿಮಾವನ್ನು ಹೊಗಳುವ ಭರದಲ್ಲಿ ಕೆಜಿಎಫ್​ ಚಿತ್ರದ ಬಗ್ಗೆ ಮಾತು ಜಾರಿದ ನಿರ್ದೇಶಕ..!

ನಿರ್ದೇಶಕ ಬುಚ್ಚಿ ಬಾಬು ಸನಾ, ಸುಕುಮಾರ್​ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ತಮ್ಮ ಗುರು ನಿರ್ದೇಶನದ ಪುಷ್ಪ ಚಿತ್ರವನ್ನು ಹೊಗಳುವ ಬರದಲ್ಲಿ ಪುಷ್ಪ ಚಿತ್ರದೊಂದಿಗೆ ಕೆಜಿಎಫ್​ ಸಿನಿಮಾವನ್ನು ಹೋಲಿಕೆ ಮಾಡಲು ಬಳಸಿಕೊಂಡಿದ್ದಾರೆ. ಇನ್ನು ತಾನು ಪುಷ್ಪ ಚಿತ್ರವನ್ನು ನೋಡಿದ್ದೇನೆ, ಅದು ಹತ್ತು ಕೆಜಿಎಫ್​ ಚಿತ್ರಗಳಿಗೆ ಸಮ ಎಂದು ಹೇಳಿದ್ದಾರೆ.

Anitha E | news18-kannada
Updated:June 18, 2021, 2:00 PM IST
KGF -Pushpa: ತೆಲುಗು ಸಿನಿಮಾವನ್ನು ಹೊಗಳುವ ಭರದಲ್ಲಿ ಕೆಜಿಎಫ್​ ಚಿತ್ರದ ಬಗ್ಗೆ ಮಾತು ಜಾರಿದ ನಿರ್ದೇಶಕ..!
ಅಲ್ಲು ಅರ್ಜುನ್​ - ಯಶ್​ ಅಭಿಮಾನಿಗಳ ನಡುವೆ ವಾರ್
  • Share this:
ಕೆಜಿಎಫ್​ ಚಾಪ್ಟರ್​ ಒಂದು ಸಿನಿಮಾ ರಿಲೀಸ್ ಆದಾಗ ಇಡೀ ಭಾರತೀಯ ಸಿನಿರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡಿತ್ತು. ಜೊತೆಗೆ ಯಶ್​ ಸಹ ರಾಷ್ಟ್ರಮಟ್ಟದಲ್ಲಿ ನಾಯಕನಾಗಿ ಗುರುತಿಸಿಕೊಂಡರು. ಅಲ್ಲಿಯವರೆಗೆ ಸ್ಯಾಂಡಲ್​ವುಡ್ ಸಿನಿರಸಿಕ ಮನ ಗೆದಿದ್ದ ರಾಖಿಂಗ್​ ಸ್ಟಾರ್​ಗೆ ಈಗ ಬೇರೆ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಕೆಜಿಎಫ್​ ಸಿನಿಮಾದ ಮೊದಲ ಭಾಗ ರಿಲೀಸ್​ ಆಗಿ ಕಂಡ ಯಶಸ್ಸಿನಿಂದಾಗಿ ಚಾಪ್ಟರ್​ 2 ಬಗ್ಗೆಸಾಕಷ್ಟು ಕೂತೂಹಲ ಮೂಡಿದೆ. ಅದಕ್ಕೆ ಸಾಕ್ಷಿ ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ ಪ್ರತಿಕ್ರಿಯೆ. ಇನ್ನು ಈಗ  ಎಲ್ಲೆಡೆ ಸಿನಿಮಾಗಳ ಮಾತು ಆರಂಭವಾದರೆ ಕೆಜಿಎಫ್​ ಹೆಸರು ಸಹ ಬಂದೇ ಬರುತ್ತದೆ. ಹೀಗಿರುವಾಗಲೇ ಟಾಲಿವುಡ್​ ನಿರ್ದೇಶಕರೊಬ್ಬರು ಮಾಡಿರುವ ಒಂದು ಎಡವಟ್ಟಿನಿಂದ ಯಶ್​ ಅಭಿಮಾನಿಗಳು ಗರಂ ಆಗಿದ್ದಾರೆ. 

ಕೆಜಿಎಫ್​ ಚಾಪ್ಟರ್​ 2 ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಅದರಂತೆ ದಕ್ಷಿಣ ಭಾರತದಲ್ಲಿ ಮತ್ತಷ್ಟು ಸ್ಟಾರ್​ ನಟರ ಸಿನಿಮಾಗಳೂ ರಿಲೀಸ್​ಗೆ ರೆಡಿಯಾಗಿವೆ. ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ ಸಿನಿಮಾ ಪುಷ್ಪ ಸಹ ತೆರೆ ಕಾಣುವ ಹೊಸ್ತಿಲಲ್ಲಿದೆ. ಅಲ್ಲು ಅರ್ಜುನ್​ ಅಭಿಮಾನಿಗಳಿ ಈ ಸಿನಿಮಾ ನೋಡಲು ಕಾತರದಿಂದಕಾಯುತ್ತಿದ್ದಾರೆ.

Director Buchi babu Sana, Pushpa v/s KGF, Buchibabu comment about KGF, Telugu directors about KGF movie, ನಿರ್ದೇಶಕ ಬುಚ್ಚಿಬಾಬು ಸನಾ, ಪುಷ್ಪ v/s ಕೆಜಿಎಫ್, ಕೆಜಿಎಫ್ ಬಗ್ಗೆ ಬುಚ್ಚಿಬಾಬು ಸನಾ ಹೇಳಿಕೆ, Director Buchi Babu compares Pushpa with Kgf 2 and says pushpa is 10 times greater than kgf chapter 2 ae
ಅಲ್ಲು ಅರ್ಜುನ್​ ಜತೆ ನಿರ್ದೇಶಕ ಬುಚ್ಚಿ ಬಾಬು ಸನಾ


ಹೀಗಿರುವಾಗಲೇ ಉಪ್ಪೆನ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು  ಪುಷ್ಪ ಸನಾ ಸಿನಿಮಾ ಬಗ್ಗೆ ಮಾತಾನಾಡುವಾಗ ಕೆಜಿಎಫ್​ ಚಿತ್ರದ ಹೆಸರನ್ನು ಬಳಸಿಕೊಂಡಿದ್ದಾರೆ. ಕೆಜಿಎಫ್​ ಸಿನಿಮಾದೊಂದಿಗೆ ಪುಷ್ಪ ಚಿತ್ರವನ್ನು ಹೋಲಿಕೆ ಮಾಡಿರುವ ನಿರ್ದೇಶಕ, ಪುಷ್ಪ ಚಿತ್ರ ಕೆಜಿಎಫ್​ ಸಿನಿಮಾಗಿಂತ ಹತ್ತು ಪಟ್ಟು ಚೆನ್ನಾಗಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಶಾಲೆ ಕಟ್ಟಲು ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್​

ನಿರ್ದೇಶಕ ಬುಚ್ಚಿ ಬಾಬು ಸನಾ, ಸುಕುಮಾರ್​ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ತಮ್ಮ ಗುರು ನಿರ್ದೇಶನದ ಪುಷ್ಪ ಚಿತ್ರವನ್ನು ಹೊಗಳುವ ಬರದಲ್ಲಿ ಪುಷ್ಪ ಚಿತ್ರದೊಂದಿಗೆ ಕೆಜಿಎಫ್​ ಸಿನಿಮಾವನ್ನು ಹೋಲಿಕೆ ಮಾಡಲು ಬಳಸಿಕೊಂಡಿದ್ದಾರೆ. ಇನ್ನು ತಾನು ಪುಷ್ಪ ಚಿತ್ರವನ್ನು ನೋಡಿದ್ದೇನೆ, ಅದು ಹತ್ತು ಕೆಜಿಎಫ್​ ಚಿತ್ರಗಳಿಗೆ ಸಮ ಎಂದು ಹೇಳಿದ್ದಾರೆ.ಬುಚ್ಚಿ ಬಾಬು ನೀಡಿರುವ ಹೇಳಿಕೆ ಸದ್ಯ ಯಶ್​ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿ ನಿರ್ದೇಶಕರಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇನ್ನು ಅಲ್ಲು ಅರ್ಜುನ್​ ಅಭಿಮಾನಿಗಳು ಯಶ್​ ಅಭಿಮಾನಿಗಳನ್ನು ಸಮಾಧಾನ ಮಾಡುತ್ತಿದ್ದಾರೆ.

Don't Misunderstand guysಕೆಜಿಎಫ್​ ಸಿನಿಮಾ ನೋಡಲು ಬಹುತೇಕ ತೆಲುಗು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದರ ಜೊತೆಗೆ ಆರ್​ಆರ್​ಆರ್​, ಪುಷ್ಪ ಸೇರಿದಂತೆ ಇತರೆ ದೊಡ್ಡ ಸಿನಿಮಾಗಳು ರಿಲೀಸ್​ ಆಗಲಿವೆ. ನಿರ್ದೇಶಕರೊಬ್ಬರು ಅಭಿಮಾನಿಗಳ ಮನ ಗೆಲ್ಲಲು ಕೊಟ್ಟಿರುವ ಹೇಳಿಕೆ ಇದು ಎಂದು ಫ್ಯಾನ್ಸ್​ ವಾರ್​ಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ನೆಟ್ಟಿಗರೊಬ್ಬರು.ಕೊರೋನಾ ಎರಡಣೇ ಅಲೆ ಆರಂಭವಾಗುವ ಮೊದಲೇ ಯಶ್​ ತಮ್ಮ ಭಾಗದ ಡಬ್ಬಿಂಗ್​ ಮುಗಿಸಿದ್ದಾರೆ. ಇನ್ನು ನಟಿ ಮಾಳವೀಕಾ ಸಹ ಡಬ್ಬಿಂಗ್​ ಆರಂಭಿಸಿದ್ದಾರೆ. ಒಟ್ಟಾರೆ ಸಿನಿಮಾ ಪ್ರಕಟಿಸಿರುವ ದಿನಾಂಕದಂದೇ ತೆರೆಗೆ ಬರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಆಸ್ಟ್​ 13ರಂದು ರಿಲೀಸ್ ಆಗಲಿದೆ. ಆದರೆ ಅದಕ್ಕೂ ಮೊದಲು ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಆಗಲಿದೆ. ಇನ್ನು ಈ ಸಿನಿಮಾಗಳು ರಿಲೀಸ್ ಆದ ನಂತರವಷ್ಟೆ ಯಾವ ಸಿನಿಮಾಗೆ ಪ್ರೇಕ್ಷಕ ಪ್ರಭು ಸಾಹೋ ಹೇಳುತ್ತಾನೆ ಅನ್ನೋದು ತಿಳಿಯಲಿದೆ.
Published by: Anitha E
First published: June 18, 2021, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories