ಬಿಜೆಪಿ ಅಭ್ಯರ್ಥಿ ಸೋತಿದಕ್ಕೆ ತಲೆ ಬೋಳಿಸಿಕೊಂಡ ಖ್ಯಾತ ನಿರ್ದೇಶಕ..!

ಈ ಬಾರಿ ತಿರುವನಂತಪುರದಲ್ಲಿ ಕುಮ್ಮನಂ ರಾಜಶೇಖರನ್ ಮೂಲಕ ಕಮಲ ಅರಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

zahir | news18
Updated:May 25, 2019, 3:52 PM IST
ಬಿಜೆಪಿ ಅಭ್ಯರ್ಥಿ ಸೋತಿದಕ್ಕೆ ತಲೆ ಬೋಳಿಸಿಕೊಂಡ ಖ್ಯಾತ ನಿರ್ದೇಶಕ..!
ಅಲಿ ಅಕ್ಬರ್
zahir | news18
Updated: May 25, 2019, 3:52 PM IST
ರಾಜಕೀಯದಲ್ಲಿ ಪರ ವಿರೋಧಗಳು ವ್ಯಕ್ತವಾಗುವುದು ಸಾಮಾನ್ಯ. ಅದರಲ್ಲೂ ಕೆಲವರು ಆಯಾ ಕ್ಷೇತ್ರದ ಗೆಲುವನ್ನು ಪ್ರತಿಷ್ಠೆಯಾಗಿ ಸ್ವೀಕರಿಸುತ್ತಾರೆ. ಇದಕ್ಕಾಗಿ ಕೆಲ ಮಂದಿ ಬೆಟ್ಟಿಂಗ್ ಕಟ್ಟಿದರೆ, ಮತ್ತೆ ಕೆಲವರು ಮೀಸೆ, ಮುಡಿ ಕೊಡುವ ನಿರ್ಧಾರಕ್ಕೆ ಬಂದಿರುತ್ತಾರೆ. ಅದರಂತೆ ಕೇರಳ ಖ್ಯಾತ ನಿರ್ದೇಶಕರೊಬ್ಬರು ಇದೀಗ ತಲೆ ಬೋಳಿಸಿಕೊಂಡು ಸುದ್ದಿಯಾಗಿದ್ದಾರೆ.

'ಬ್ಯಾಂಬು ಬಾಯ್ಸ್'​ನಂತಹ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ನಿರ್ದೇಶಕ ಅಲಿ ಅಕ್ಬರ್ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ವೇಳೆ ಆಣೆ ಮಾಡಿದ್ದರು. ಅದೇನೆಂದರೆ ತಿರುವನಂತಪುರಂ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಸೋತರೆ ತಲೆ ಬೋಳಿಸುವುದಾಗಿ. ಆದರೆ ಮೇ.23 ರಂದು ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಭರ್ಜರಿ ಜಯ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ತನ್ನ ಮಾತನ್ನು ಉಳಿಸಲು ಅಲಿ ಅಕ್ಬರ್ ತಲೆ ಬೋಳಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ. ತಾನು ಮಾತಿನಂತೆ ನಡೆದುಕೊಂಡಿರುವುದಾಗಿ ತಿಳಿಸಿದ ಮಾಲಿವುಡ್ ನಿರ್ದೇಶಕ, ಕುಮ್ಮನಂ ರಾಜಶೇಖರನ್ ಸೋತಿರುವುದು ಊಹಿಸಲಾಗುತ್ತಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸಿದ ಮತದಾರರಿಗೆ ಧನ್ಯವಾದಗಳು ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ಉಂಟಾದ ಶಬರಿಮಲೆ ವಿವಾದದಿಂದ ಈ ಬಾರಿ ತಿರುವನಂತಪುರದಲ್ಲಿ ಕುಮ್ಮನಂ ರಾಜಶೇಖರನ್ ಮೂಲಕ ಕಮಲ ಅರಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅದರಂತೆ ಕುಮ್ಮನಂ ಸೋತರೆ ತಲೆ ಕೂದಲು ತೆಗೆಯುವುದಾಗಿ ಅಲಿ ಅಕ್ಬರ್ ಚಾಲೆಂಜ್ ಮಾಡಿದ್ದರು.'ಕುಟುಂಬ ವಾರ್ತಗಲ್', 'ಅಚ್ಚನ್', 'ಜೂನಿಯರ್ ಮಾಂಡ್ರೆಕ್', 'ಸೀನಿಯರ್ ಮಾಂಡ್ರೆಕ್' ಸೇರಿದಂತೆ ಹತ್ತಕ್ಕೂ ಹೆಚ್ಚಿನ ಸೂಪರ್ ಹಿಟ್​ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಅಲಿ ಅಕ್ಬರ್ ಅವರ ಪೋಸ್ಟ್​ ಈಗ ಭಾರೀ ವೈರಲ್ ಆಗಿದ್ದು, ಹೇಳಿದಂತೆ ನಡೆದುಕೊಂಡ ನಿರ್ದೇಶಕನಿಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Loading...

ಇದನ್ನೂ ಓದಿ: ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ರೆ ಹೀಗೆ ಮಾಡಿ

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...