ಕನ್ನಡದ ಮಹಾನ್ ನಿರ್ದೇಶಕ ಕಾಶಿನಾಥ್ (Kashinath Movie) ಅವರು ಚಿತ್ರ ತಯಾರಿಸೋ ರೀತಿ ತುಂಬಾ ವಿಶೇಷವಾಗಿಯೇ ಇರುತ್ತಿತ್ತು. ಚಿತ್ರದ ಸ್ಕ್ರಿಪ್ಟ್ನ್ನ ಓದುತ್ತಾ ಹೋದ್ರೆ, ಅಲ್ಲಿ ಇಡೀ ಚಿತ್ರವೇ ಕಣ್ಮುಂದೆ ಬರುತ್ತಿತ್ತು. ಅಷ್ಟು ಪಕ್ಕಾ ಸ್ಕ್ರಿಪ್ಟ್ನ್ನ ಕಾಶಿನಾಥ್ (Kashinath Aparichita Cinema) ಅವರು ಮಾಡುತ್ತಿದ್ದರು. ಇವರ ಗರಡಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ವಿ.ಮನೋಹರ್ ರಂತಹ ಮಹಾನ್ ಪ್ರತಿಭಾವಂತರೇ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಇದು ಎಲ್ಲರಿಗೂ ಗೊತ್ತಿರೋ ವಿಷಯವೇ ಬಿಡಿ. ಆದರೆ ಕಾಶಿನಾಥ್ ಅವರ ಆರಂಭದ ದಿನಗಳು ವಿಶೇಷವಾಗಿದ್ದವು. ಸಿನಿಮಾವನ್ನ (Suresh Heblikar) ತಯಾರಿಸೋದು ಅಷ್ಟು ಸುಲಭದ ಮಾತು ಕೂಡ ಆಗಿರಲಿಲ್ಲ. ಆದರೆ ಕಾಶಿನಾಥ್ ಅವರು ಸ್ನೇಹಿತರ ಜೊತೆಗೆ ಸೇರಿ ಸಿನಿಮಾ ಮಾಡುತ್ತಿದ್ದರು.
ಹಾಗೇ ಕಾಶಿನಾಥ್ ಅವರು ಒಂದು ಸಿನಿಮಾ ಮಾಡಿದರು. ಆ ಚಿತ್ರದ ಹೆಸರು ಅಪರಿಚಿತ (Aparichita Film) ಅಂತಲೇ ಇತ್ತು. ಈ ಚಿತ್ರದ ಆರಂಭದ ದಿನ ಹೇಗಿತ್ತು. ಬನ್ನಿ ಹೇಳ್ತಿವಿ.
ಕಾಶಿನಾಥ್ ಅವರ ಸಿನಿಮಾ ಪ್ರೀತಿ ತುಂಬಾ ಆಳ!
ಕಾಶಿನಾಥ್ ಅವರು ಸಿನಿಮಾ ಪ್ರೀತಿ ಇಟ್ಟುಕೊಂಡೇ ಬಂದವರು. ಚಿತ್ರಗಳನ್ನ ಕಡಿಮೆ ವೆಚ್ಚದಲ್ಲಿ ತೆಗೆಯಬೇಕು ಅನ್ನೋದು ಇವರಿಗೆ ಆಗಲೇ ತಿಳಿದು ಹೋಗಿತ್ತು. ಕಾಶಿನಾಥ್ ಅವರು ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ದುಡ್ಡು ಹಾಕುತ್ತಿದ್ದರು. ಅಷ್ಟೇ ಖರ್ಚು ಕೂಡ ಮಾಡುತ್ತಿದ್ದರು.
ಕಾಶಿನಾಥ್ ಅವರು ಇದ್ದದ್ದೇ ಹಾಗೆ ನೋಡಿ. ಅವರ ಸಿನಿಮಾಗಳಲ್ಲಿ ಅಬ್ಬರ ಆಡಂಬರ ಇದ್ದದ್ದೇ ಇಲ್ಲ. ಆದರೆ ಇವರು ರಚಿಸುತ್ತಿದ್ದ ಸ್ಕ್ರಿಪ್ಟ್ ಮಾತ್ರ ತುಂಬಾ ಗಟ್ಟಿ ಆಗಿರುತ್ತಿತ್ತು. ಅಷ್ಟೇ ಅದನ್ನೊಮ್ಮೆ ಓದಿದ್ರೆ, ಎಂತಹವರಿಗೂ ಇಡೀ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತಿತ್ತು.
ಕಾಶಿನಾಥ್ ಅವರ ಸಿನಿಮಾ ತಯಾರಿ ಪರ್ಫೆಕ್ಟ್
ಕಾಶಿನಾಥ್ ಚಿತ್ರಗಳಿಗೆ ಅದ್ಭುತವಾಗಿ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದರು. ಆ ವಿಷಯದಲ್ಲಿ ಅವರ ಜೊತೆಗೆ ಕೆಲಸ ಮಾಡಿದ ಯಾರನ್ನೇ ಕೇಳಿ, ಅವರು ಈ ವಿಷಯವನ್ನ ಹೇಳುತ್ತಾರೆ. ಮೊದಲು ಸ್ಕ್ರಿಪ್ಟ್ ಹಂತದಲ್ಲಿಯೇ ಎಲ್ಲವೂ ಸರಿ ಹೋಗಬೇಕು. ಆಮೇಲೆ ಎಲ್ಲವೂ ಸಲೀಸು ಅನ್ನೋ ಅರ್ಥದಲ್ಲಿ ಕಾಶಿನಾಥ್ ಚಿತ್ರ ಮಾಡ್ತಾಯಿದ್ದರು.
ಹಾಗೆ ಕಾಶಿನಾಥ್ ಅವರು ತಯಾರಿಸಿದ್ದ ಚಿತ್ರಕಥೆಗೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಕೂಡ ಬಂದಿದೆ. ಆದರೆ, ಈ ಚಿತ್ರದ ಕಥೆ ಕೇಳಿದ ಚಿತ್ರದ ನಾಯಕ ಮೊದಲು ಇವರ ಮೇಲೆ ಡೌಟ್ ಪಟ್ಟಿದ್ದರು. ಈ ಡೈರೆಕ್ಟರ್ ಈ ಚಿತ್ರವನ್ನ ಮಾಡ್ತಾರಾ? ಇವರು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡ್ತಾರಾ? ಹೀಗೆ ಹತ್ತು ಹಲವು ಅನುಮಾನಗಳೇ ತುಂಬಿದ್ದವು.
ಕಾಶಿನಾಥ್ ಮೇಲೆ ಅನುಮಾನ ಪಟ್ಟ ಆ ಹೀರೋ ಯಾರು?
ಕಾಶಿನಾಥ್ ಅವರು ಅಪರೂಪದ ಅತಿಥಿಗಳು ಅನ್ನೋ ಒಂದು ಚಿತ್ರ ಮಾಡಿದ್ದರು. ಇದು 1976 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟಿದ್ದರು. ಇದೇ ಅನುಭವದ ಮೇಲೆ ಅಪರಿಚಿತ ಹೆಸರಿನ ಚಿತ್ರಕ್ಕೆ ಅದ್ಭುತ ಕಥೆ ಮಾಡಿಕೊಂಡಿದ್ದರು.
ಅಪರಿಚಿತ ಚಿತ್ರದ ಕಥೆಯನ್ನ ರೆಡಿ ಮಾಡಿಕೊಂಡಿದ್ದ ಗೆಳೆಯ ಮತ್ತು ನಾಯಕ ನಟ ಸುರೇಶ್ ಹೆಬ್ಳೀಕರ್ ಅವರಿಗೆ ಹೇಳಿದರು. ನೀವೇ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ಮಾಡಬೇಕು ಅಂತಲೂ ಹೇಳಿದ್ದರು. ಸುರೇಶ್ ಹೆಬ್ಳೀಕರ್ ಅವರಿಗೆ ಈ ಬಗ್ಗೆ ಅಷ್ಟೇನೂ ನಂಬಿಕೆ ಇರಲಿಲ್ಲ. ಆದರೆ ಮುಂದೆ ಈ ನಾಯಕನ ಮೂಡ್ ಬದಲಾಯಿತು.
ಅಪರಿಚಿತ ಚಿತ್ರದ ಸ್ಕ್ರಿಪ್ಟ್ ಓದಿ ಮನಸು ಬದಲಿಸಿದ ಹೀರೋ
ಅಪರಿಚಿತ ಚಿತ್ರದ ಸ್ಕ್ರಿಪ್ಟ್ ಓದಿದ ಮೇಲೆ ನಾಯಕ ನಟ ಸುರೇಶ್ ಹೆಬ್ಳೀಕರ್ ಮನಸು ಬದಲಿಸಿದರು. ತಮ್ಮಲ್ಲಿದ್ದ ಆ ಒಂದು ಡೌಟು ಅವರಲ್ಲಿ ಮಾಯವಾಯಿತು. ಕಾಶಿನಾಥ್ ಅವರ ಬಗ್ಗೆ ನಿಜಕ್ಕೂ ಹೆಮ್ಮೆ ಕೂಡ ಆಯಿತು. ಇದಕ್ಕೆ ಕಾರಣ ಕಾಶಿನಾಥ್ ಅವರು ಅಪರಿಚಿತ ಚಿತ್ರದ ಸ್ಕ್ರಿಪ್ಟ್ನ್ನ ಅಷ್ಟು ಅದ್ಭುತವಾಗಿಯೇ ಮಾಡಿದ್ದರು.
ಸ್ಕ್ರಿಪ್ಟ್ ಓದಿದ ಬಳಿಕ ಸುರೇಶ್ ಸಿನಿಮಾ ಮಾಡಲು ಒಪ್ಪಿಕೊಂಡರು. ಹಾಗೇ ಅಪರಿಚಿತ ಚಿತ್ರಕ್ಕೆ ನಾಯಕನ ಆಯ್ಕೆ ಆಗಿತ್ತು. ಚಿತ್ರವೂ ಸೆಟ್ಟೇರಿತ್ತು. ನಾಯಕಿ ಪಾತ್ರಕ್ಕೆ ಶೋಭಾ ಆಯ್ಕೆ ಆಗಿದ್ದರು. ಮೋಹನ್, ವಾಸುದೇವ್ ರಾವ್ ಕೂಡ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಅಪರಿಚಿತ ಚಿತ್ರ ಹಿಟ್-ಪರ ಭಾಷೆಯಲ್ಲಿ ರಿಮೇಕ್
ರೋಮ್ಯಾನ್ಸ್ ಮತ್ತು ಮಿಸ್ಟರಿ ಹೊಂದಿದ್ದ ಈ ಚಿತ್ರ 1978-1979 ರಲ್ಲಿ ಆಯಿತು. ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲೂ ರಿಮೇಕ್ ಆಯಿತು.
ಇದನ್ನೂ ಓದಿ: Puneeth Rajkumar: ನಟಸಾರ್ವಭೌಮನಿಗೆ 4 ವರ್ಷ! ಅಪ್ಪು ಫ್ಯಾನ್ಸ್ ಏನಂತಾರೆ?
ವಿಶೇಷವಾಗಿ ಡೈರೆಕ್ಟರ್ ಕಾಶಿನಾಥ್ ಅವರು ಇದೇ ಚಿತ್ರವನ್ನ ಹಿಂದಿಯಲ್ಲಿ ರಿಮೇಕ್ ಮಾಡಿದರು. Be-Shaque ಅಂತಲೂ ಹೆಸರಿಟ್ಟರು. ಹಾಗೆ ಎಲ್ಲ ಭಾಷೆಯಲ್ಲೂ ಈ ಚಿತ್ರ ರಿಲೀಸ್ ಆಗಿ ಒಳ್ಳೆ ಹೆಸರು ಮಾಡಿತ್ತು. ಅಂತಹ ಈ ಚಿತ್ರದ ಇತಿಹಾಸ ಪುಟ ತಿರುವಿ ನೋಡಿದ್ರೆ ಈ ಎಲ್ಲ ವಿಶೇಷ ವಿಚಾರಗಳು ನಿಮಗೆ ಸಿಗುತ್ತವೆ. ಕಾಶಿನಾಥ್ ಅವರ ಸಿನಿಮಾ ಪಕ್ವತೆಯ ಚಿತ್ರಣವನ್ನೂ ಕಟ್ಟಿಕೊಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ