ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2 (KGF 2) ಚಿತ್ರ ಬಾಕ್ಸ್ ಆಫೀಸ್(Box Office)ನಲ್ಲಿ ಧೂಳೆಬ್ಬಿಸಿ ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್ ಮಾಡುತು. ಅದೇ ರೀತಿ ಅಬ್ಬರಿಸಲು ಇದೀಗ ಕನ್ನಡದ ಮತ್ತೊಂದು ಫ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗಿದೆ. ಹೌದು, ಸುದೀಪ್ (Sudeep) ಅಭನಯದ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ‘ (Vikrant Rona) ಚಿತ್ರ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಎಲ್ಲಡೆ ಹಲ್ ಚಲ್ ಎಬ್ಬಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಎಂದರೂ ತಪ್ಪಾಗಲಾರದು. ಇದರ ನಡುವೆ ಕೆಜಿಎಫ್ 2 ಕುರಿತು ಮಾತಾನಡಿದ್ದ ನಿರ್ದೇಶಕ ರಾಮ್ ಗೋಪಲ್ ವರ್ಮಾ (Ram Gopal Varma)ಇದೀಗ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕುರಿತು ಮಾತನಾಡಿದ್ದು, ಪರಭಾಷೆಯ ಸಿನಿರಂಗದವರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಕ್ರಾಂತ್ ರೋಣನನ್ನು ಮೆಚ್ಚಿದ ಆರ್ಜಿವಿ:
ಇನ್ನು, ಸುದೀಪ್ ಮತ್ತು ಅನೂಫ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ವಿಕ್ರಾಂತ್ ರೋನ ಚಿತ್ರದ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ‘ಪಿವಿಆರ್ ಜೊತೆ ವಿಕ್ರಾಂತ್ ರೋಣ ಕೈ ಜೋಡಿಸಿರುವುದನ್ನು ಕೇಳಿ ಸಂಸತವಾಯಿತು. ಈ ಚಿತ್ರದ 3ಡಿ ಯ ಕೆಲ ದೃಶ್ಯಗಳನ್ನು ನಾನು ನೋಡಿದ್ದೇನೆ. ಅದ್ಭುತವಾಗು ಮೂಡಿಬಂದಿದೆ. ಇದು ಕನ್ನಡದ ಮತ್ತೊಂದು ದೊಡ್ಡ ಸಿನಿಮಾವಾಗಿ ಹೊರಹೊಮ್ಮಲಿದೆ. ರಂಗಿತರಂಗದಮತದ ಸೂಪರ್ ಹಿಟ್ ಚಿತ್ರ ನೀಡಿದ ಅನೂಪ್ ಭಂಡಾರಿ ಈ ಚಿತ್ರ್ಕಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.
ಟೀಸರ್ ನೋಡಿ ಮೆಚ್ಚಿದ ವರ್ಮಾ:
ಏಪ್ರಿಲ್ 24ರಂದು ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಚಿತ್ರದ ಟೀಸರ್ ನೋಡಿ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಟೀಸರ್ ಅನ್ನು ತಮ್ಮ ಟ್ವಿಟರ್ ನಲ್ಲಿ ಶೆರ್ ಮಾಡಿಕೊಂಡು, ‘ಚಿತ್ರದ ಟೀಸರ್ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಸಹ ಸೂಪರ್ ಹಿಟ್ ಆಗಲಿದೆ. ಅಲ್ಲದೇ ಜುಲೈ 28ರಂದು ಈ ಸಿನಿಮಾವನ್ನು ನೋಡಲು ನಾನು ಕಾತುರನಾಗಿದ್ದೇನೆ‘ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: 5 ವಾರಗಳಲ್ಲಿ KGF 2 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಬಾಲಿವುಡ್ನಲ್ಲಿ ಅಬ್ಬರಿಸಿದ ಸೌತ್ ಸಿನಿಮಾಗಳಿವು
ಗಡಂಗ್ ರಕ್ಕಮ್ಮ ನ ಆಗಮನಕ್ಕೆ ಡೇಟ್ ಫಿಕ್ಸ್:
ಈ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ಈ ಹಾಡು ಬಿಡುಗಡೆಯಾಗುತ್ತಿದ್ದು, ನಿಜಕ್ಕೂ ವಿಭಿನ್ನ ಎನ್ನಬಹುದು. ಗಡಂಗ್ ರಕ್ಕಮ್ಮ ಹೆಸರಿನ ಈ ಲಿರಿಕಲ್ ಹಾಡು ಕನ್ನಡದಲ್ಲಿ ಮೇ 23 ರಂದು ಮಧ್ಯಾಹ್ನ 3.5ಕ್ಕೆ ರಿಲೀಸ್ ಆಗಲಿದೆ. ಇನ್ನು ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾಗುತ್ತಿದ್ದು, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಈ ಹಾಡು ಬಿಡುಗಡೆಯಾಗಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ.
ಇನ್ನು ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮಲಯಾಳಂನಲ್ಲಿ ಮೇ 27 ರಂದು 01.05ಕ್ಕೆ ಈ ಲಿರಿಕಲ್ ಹಾಡು ರಿಲೀಸ್ ಆಗುತ್ತಿದೆ ಎಂದು ಸುದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ: Prashanth Neel: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಪ್ರಶಾಂತ್ ನೀಲ್, 3 ಚಿತ್ರಗಳ ಫೋಟೋ ಹಂಚಿಕೊಂಡ ಸ್ಟಾರ್ ಡೈರೆಕ್ಟರ್
5 ಭಾಷೆಗಳಲ್ಲಿ ಚಿತ್ರ ರಿಲೀಸ್:
ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಅಲ್ಲದೇ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಿಚ್ಚನ ಸಿನಿ ಜರ್ನಿಯಲ್ಲಿ ದಾಖಲೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ