Darshan movie: ಮತ್ತೊಂದು ಚಿತ್ರಕ್ಕೆ ರೆಡಿಯಾದ ಡಿ ಬ್ರದರ್ಸ್: ದರ್ಶನ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್..!

Dboss: ಅದೇನೆಂದರೆ, ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾ ಶಿವನಂದಿ ಎಂಬುದು. ಈ ಹಿಂದೆ ನವಗ್ರಹ ಎಂಬ ಸೂಪರ್ ಹಿಟ್ ಚಿತ್ರವನ್ನು  ಡಿ ಸಹೋದರು ನೀಡಿದ್ದರು. ಬಳಿಕ ಸರ್ವಾಂತರ್ಯಾಮಿ ಚಿತ್ರದೊಂದಿಗೆ ಮತ್ತೊಮ್ಮೆ ಮರಳುವುದಾಗಿಯೂ ತಿಳಿಸಿದ್ದರು.

news18
Updated:June 30, 2019, 8:12 PM IST
Darshan movie: ಮತ್ತೊಂದು ಚಿತ್ರಕ್ಕೆ ರೆಡಿಯಾದ ಡಿ ಬ್ರದರ್ಸ್: ದರ್ಶನ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್..!
ಅದಾಗಲೇ ಬುಲೆಟ್ ಪ್ರಕಾಶ್ ಅವರು ಸುಲ್ತಾನ್ ಬಗ್ಗೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ನಿರ್ಮಾಪಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಆ ರೀತಿ ಮಾಡಬೇಡಿ ಅಂದಿದ್ದಕ್ಕೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ದಿನಕರ್ ತಿಳಿಸಿದ್ದರು.
  • News18
  • Last Updated: June 30, 2019, 8:12 PM IST
  • Share this:
ಹರಿ ಹರಿ ಹರಿ ಮುಗಿಲೆತ್ತರ ಹರಿ, ಶಿವನತ್ತಿರ ಮೆರೆಯುವ ನಂದಿ...ನಂದಿ, ಢಮ ಢಮರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ... ನಂದಿ. ನಡೆದರೆ ತೇರು.. ವೈಭವ ಜೋರು ತಡೆಯೋರು ಯಾರು ಆರ್ಭಟ ನೋಡು...'ಯಜಮಾನ' ಚಿತ್ರದ ಈ ಬ್ಲಾಕ್​ ಬ್ಲಸ್ಟರ್​ ಹಾಡಿಗೆ ಥಿಯೇಟರುಗಳಲ್ಲಿ ಡಿ ಬಾಸ್​ ಅಭಿಮಾನಿಗಳಿಂದ ಶಿಳ್ಳೆಗಳ ಸುರಿಮಳೆಯಾಗಿತ್ತು.

ವಿಭಿನ್ನ ಅವತಾರದಲ್ಲಿ ಕಾಣಿಸಿದ್ದ ನಯಾ 'ಯಜಮಾನ' ದರ್ಶನ್ ಶಿವನಂದಿ ಎಂಬ ಎಣ್ಣೆ ಬ್ರ್ಯಾಂಡ್ ಮೂಲಕ​ ಬಾಕ್ಸಾಫೀಸ್ ಲೂಟಿದ್ದರು. ಇದೀಗ ಚಿತ್ರದ ಬೆನ್ನಲುಬಿನಂತಿದ್ದ 'ಶಿವನಂದಿ' ಎಂಬ ಪದವನ್ನೇ ಶಿರ್ಷಿಕೆಯಾಗಿಸಿ ಚಿತ್ರ ನಿರ್ಮಿಸಲು ಭರ್ಜರಿ ಪ್ಲ್ಯಾನ್ ರೆಡಿಯಾಗುತ್ತಿದೆ.

ಹೌದು, 'ಶಿವನಂದಿ' ಟೈಟಲ್​ ಅನ್ನು ಈಗಾಗಲೇ ರಿಜಿಸ್ಟರ್ ಮಾಡಲಾಗಿದೆ. ಇದನ್ನು ನೋಂದಣಿ ಮಾಡಿಸಿರುವುದು ಮತ್ಯಾರೂ ಅಲ್ಲ ಖುದ್ದು ತೂಗುದೀಪ ಕುಡಿ ನಿರ್ದೇಶಕ ದಿನಕರ್. ದರ್ಶನ್ ಸಹೋದರ 'ಶಿವನಂದಿ'ಯನ್ನು ರಿಜಿಸ್ಟರ್ ಮಾಡಿಸುತ್ತಲೇ ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ.

ಅದೇನೆಂದರೆ, ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾ 'ಶಿವನಂದಿ' ಎಂಬುದು. ಈ ಹಿಂದೆ 'ನವಗ್ರಹ' ಎಂಬ ಸೂಪರ್ ಹಿಟ್ ಚಿತ್ರವನ್ನು  ಡಿ ಸಹೋದರು ನೀಡಿದ್ದರು. ಬಳಿಕ 'ಸರ್ವಾಂತರ್ಯಾಮಿ' ಚಿತ್ರದೊಂದಿಗೆ ಮತ್ತೊಮ್ಮೆ ಮರಳುವುದಾಗಿಯೂ ತಿಳಿಸಿದ್ದರು.

ಆದರೇ ಟೈಟಲ್ ಅನೌನ್ಸ್ ಆದರೂ ​'ಸರ್ವಾಂತರ್ಯಾಮಿ' ಯಾನವನ್ನು ಮಾತ್ರ ಪ್ರಾರಂಭಿಸಿರಲಿಲ್ಲ. ಇದೀಗ ದಿನಕರ್ ತೂಗುದೀಪ್ 'ಶಿವನಂದಿ'ಯ ಹಿಂದೆ ಹೋಗಿದ್ದಾರೆ. ಹೀಗಾಗಿ ಡಿ ಕಂಪೆನಿಯಿಂದ ಬರಲಿರುವ ಮುಂದಿನ ಸಿನಿಮಾ 'ಶಿವನಂದಿ' ಎಂಬ ಟಾಕುಗಳು ಕ್ರಿಯೇಟ್ ಆಗಿವೆ. 'ನವಗ್ರಹ'ದ ಬಳಿಕ ತೂಗುದೀಪ್ ಸಹೋದರರಿಂದ ಒಂದು ವಿಭಿನ್ನ ಚಿತ್ರಕ್ಕಾಗಿ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಈ ಸುದ್ದಿಯಂತು ಖುಷಿ ನೀಡಿದೆ. 

ಇದನ್ನೂ ಓದಿ: ನಾನು ಬ್ಲೂ ಫಿಲಂ ನೋಡುತ್ತಿದ್ದೆ, ನನ್ನ ಹಲವು ಸ್ನೇಹಿತರು ಸಲಿಂಗಿಗಳು ಎಂದ ಕನ್ನಡ ಚಿತ್ರ ನಟಿ

ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇದರ ಬೆನ್ನಲ್ಲೇ ದರ್ಶನ್ ಅಭಿನಯದ ಮತ್ತೊಂದು ಮಲ್ಟಿಸ್ಟಾರ್ಸ್​ ಚಿತ್ರ 'ಒಡೆಯ' ಕೂಡ ತೆರೆಗಪ್ಪಳಿಸಲಿದೆ. ಈ ಸಂಭ್ರಮ ಮುಗಿಯುವ ವೇಳೆಗೆ 'ರಾಬರ್ಟ್'​ ರೌದ್ರವತಾರ ಬೆಳ್ಳಿಪರದೆಯಲ್ಲಿ ಮೂಡಲಿದೆ. ಇವೆಲ್ಲದರ ಬಳಿಕವಷ್ಟೇ 'ಶಿವನಂದಿ' 'ದರ್ಶನ'ವಾಗಲಿದೆ ಎಂದು ಹೇಳಲಾಗುತ್ತಿದೆ.
First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading