ಕಸ್ತೂರಿ ನಿವಾಸ. 1971ರಲ್ಲಿ ತೆರೆಗೆ ಬಂದ ನಟಸಾರ್ವಭೌಮ ಡಾ. ರಾಜ್ಕುಮಾರ್ ನಟಿಸಿದ್ದ ಸಿನಿಮಾ. ಅಂದು ಬ್ಲ್ಯಾಕ್ ಆಂಡ್ ವೈಟ್ನಲ್ಲಿ ರಿಲೀಸ್ ಆಗಿ ಸಿನಿಪ್ರೇಕ್ಷಕರ ಮನಸೂರೆಗೊಂಡಿದ್ದಲ್ಲದೇ ಮತ್ತೆ ಆಧುನಿಕ ಸ್ಪರ್ಶದೊಂದಿಗೆ ಕಲರ್ನಲ್ಲೂ ರಿಲೀಸ್ ಆಗಿ ಮತ್ತೆ ಸುದ್ದಿ ಮಾಡಿತ್ತು. ಇಂತಹ ಬ್ಲಾಕ್ಬಸ್ಟರ್ ಕಸ್ತೂರಿ ನಿವಾಸ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಈಗ ಮತ್ತೆ ಸದ್ದು ಮಾಡಿದೆ....ಹೌದು, ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ನಲ್ಲಿ ಹೊಸ ಕಸ್ತೂರಿ ನಿವಾಸ ಕೆಲ ದಿನಗಳ ಹಿಂದಷ್ಟೇ ಲಾಂಚ್ ಆಗಿತ್ತು. ಟೈಟಲ್ ಲಾಂಚ್ ಮಾಡುವುದುರ ಜೊತೆಗೆ ಚಿತ್ರತಂಡ ನಾಯಕಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಲುಕ್ಅನ್ನೂ ಅನಾವರಣಗೊಳಿಸಿತ್ತು. ಆದರೆ ಟೈಟಲ್ ಲಾಂಚ್ ಆಗುತ್ತಲೇ ಅಣ್ಣಾವ್ರ ಅಭಿಮಾನಿಗಳು ಕಿಡಿಕಿಡಿಯಾದರು. ಯಾವುದೇ ಕಾರಣಕ್ಕೂ ರಾಜಣ್ಣನವರ ಸಿನಿಮಾಗಳ ಟೈಟಲ್ಅನ್ನು ಮರುಬಳಕೆ ಮಾಡಲು ಬಿಡುವುದಿಲ್ಲ ಎಂದು ಅಬ್ಬರಿಸಿದರು.
ಈ ಕಾರಣದಿಂದಾಗಿ ನಿರ್ದೇಶಕ ದಿನೇಶ್ ಬಾಬು, ಕಸ್ತೂರಿ ನಿವಾಸ ಟೈಟಲ್ಅನ್ನು ಬದಲಿಸಿದ್ದಾರೆ. ಕಸ್ತೂರಿ ಮಹಲ್ ಎಂದು ಮರುನಾಮಕರಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಣ್ಣಾವ್ರ ಕಸ್ತೂರಿ ನಿವಾಸ ಚಿತ್ರವನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಭಗವಾನ್ ಅವರನ್ನು ಭೇಟಿಯಾಗಿ ಅವರ ಒಪ್ಪಿಗೆಯನ್ನೂ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ಮಾಪಕ ಆರ್ಸಿ ರವೀಶ್, "ಡಾ||ರಾಜಕುಮಾರ್ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ಸಲಹೆ ಮೇರೆಗೆ ನಮ್ಮ ಚಿತ್ರಕ್ಕೆ ಕಸ್ತೂರಿ ಮಹಲ್ ಎಂದು ಹೆಸರಿಡಲಾಗಿದೆ. ಹಿರಿಯ ನಿರ್ದೇಶಕ ದೊರೆ - ಭಾಗವಾನ್ ಅವರಿಗೂ ಶೀರ್ಷಿಕೆ ಬದಲಾವಣೆ ವಿಷಯ ತಿಳಿಸಿ ಅವರ ಆಶೀರ್ವಾದಪಡಿದಿದ್ದೇವೆ"ಎಂದಿದ್ದಾರೆ.
ಇದನ್ನೂ ಓದಿ : ಡ್ರಗ್ಸ್ ಮಾಫಿಯಾ ಜೊತೆಗೆ ನಂಟು?; ಮುಂಬೈ ಪೊಲೀಸರ ತನಿಖೆ ಎದುರಿಸಲಿದ್ದಾರೆ ನಟಿ ಕಂಗನಾ
ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್ ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಖುದ್ದು ನಿರ್ದೇಶಕ ದಿನೇಶ್ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ