• Home
 • »
 • News
 • »
 • entertainment
 • »
 • Video Viral: ನ್ಯೂಸ್​ ಆ್ಯಂಕರ್​ ಆದ ಡಿಂಪಲ್​ ಕ್ವೀನ್​ ರಚಿತಾ ರಾಮ್​!

Video Viral: ನ್ಯೂಸ್​ ಆ್ಯಂಕರ್​ ಆದ ಡಿಂಪಲ್​ ಕ್ವೀನ್​ ರಚಿತಾ ರಾಮ್​!

ರಚಿತಾ ರಾಮ್​

ರಚಿತಾ ರಾಮ್​

Rachitha Ram: ಕನ್ನಡ ಖ್ಯಾತ ಮನರಂಜನಾ ವಾಹಿನಿ ಕಲರ್ಸ್​ ಕನ್ನಡದಲ್ಲಿ ಜೂನ್​ 1ರಿಂದ ಹೊಸ ಧಾರವಾಹಿಗಳ ಕಂತುಗಳು ಪ್ರಾರಂಭವಾಗಲಿದೆ. ಹೀಗಾಗಿ ಕಲರ್ಸ್​​ ಕನ್ನಡ ‘ಬಣ್ಣ ಬದಲಾಗಿದೆ ಬಂದ ಬಿಗಿಯಾಗಿದೆ‘ ಎಂಬ ಶಿರ್ಷಿಕೆಯನ್ನಿಟ್ಟುಕೊಂಡು ವಿಶೇಷ ಪ್ರೊಮೊಗಳನ್ನು ಪ್ರಸಾರ ಮಾಡುತ್ತಿದೆ.

 • Share this:

  ಸಿನಿಮಾ, ಕಿರುತೆರೆ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿಂಪಲ್ ಕ್ವೀನ್​ ನಟಿ ರಚಿತಾ ರಾಮ್ ಇದೀಗ ನ್ಯೂಸ್ ಆ್ಯಂಕರ್​ ಆಗಿದ್ದಾರೆ! ಏಕಾಏಕಿ ವಾರ್ತಾ ವಾಚಕಿಯಾದ ರಚಿತಾ ರಾಮ್​ ನೋಡಿ ವೀಕ್ಷಕರು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಡಿಂಪಲ್​ ಕ್ವೀನ್​ ಹೊಸ ಚಾಲೆಂಜ್​ ಸ್ವೀಕರಿಸಿದ್ರಾ? ನ್ಯೂಸ್​ ಆ್ಯಂಕರ್​ ಆಗಬೇಕೆಂಬ ಆಲೋಚನೆ ಅವರಲ್ಲಿ ಮೊದಲೇ ಇತ್ತ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಅದಕ್ಕೆಲ್ಲ ಈ ವಿಡಿಯೋ ಉತ್ತರ ನೀಡುತ್ತಿದೆ.


  ಕನ್ನಡ ಖ್ಯಾತ ಮನರಂಜನಾ ವಾಹಿನಿ ಕಲರ್ಸ್​ ಕನ್ನಡದಲ್ಲಿ ಜೂನ್​ 1ರಿಂದ ಹೊಸ ಧಾರವಾಹಿಗಳ ಕಂತುಗಳು ಪ್ರಾರಂಭವಾಗಲಿದೆ. ಹೀಗಾಗಿ ಕಲರ್ಸ್​​ ಕನ್ನಡ ‘ಬಣ್ಣ ಬದಲಾಗಿದೆ ಬಂದ ಬಿಗಿಯಾಗಿದೆ‘ ಎಂಬ ಶಿರ್ಷಿಕೆಯನ್ನಿಟ್ಟುಕೊಂಡು ವಿಶೇಷ ಪ್ರೋಮೊಗಳನ್ನು ಪ್ರಸಾರ ಮಾಡುತ್ತಿದೆ. ಅದರಂತೆ ರಚಿತಾ ರಾಮ್​ ಕೂಡ ವಿಶೇಷ ಪ್ರೋಮೊ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
  ಇನ್ನು ಪ್ರೋಮೊದಲ್ಲಿ ರಚಿತಾ ರಾಮ್​ ‘ನೀವು ನೋಡುತ್ತಿದ್ದೀರಾ ಪ್ರೈಮ್ ಟೈಮ್​ ನ್ಯೂಸ್.​ ನಾನು ರಚಿತಾರಾಮ್. ಬಣ್ಣ ಹೊಸದಾಗಿದೆ ಬಂದ ಬಿಗಿಯಾಗಿದೆ ಕಲರ್ಸ್​ ಕನ್ನಡ. ಜೂನ್​ 1ರಿಂದ ಹೊಸ ಸಂಚಿಕೆಗಳ ಆರಂಭ. ಮೊದಲಿಗೆ ಶೋಗಳ ಹೆಡ್​ಲೈನ್​ ಅನ್ನುತ್ತಲೇ ವಾರ್ತಾ ವಾಚನ ಮಾಡುತ್ತಾರೆ. ಸದ್ಯ ಕಲರ್ಸ್​ ಕನ್ನಡ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಈ ಪ್ರೋಮೊವನ್ನು ಹರಿ ಬಿಟ್ಟಿದೆ. ಅನೇಕರು ರಚಿತಾ ರಾಮ್​ ನ್ಯೂಸ್​ ಓದುವುದನ್ನು ಕಂಡು ಮೆಚ್ಚುಗೆಯ ಕಾಮೆಂಟ್​ ಬರೆದಿದ್ದಾರೆ.


  167 ಕಾರ್ಮಿಕರಿಗೆ ವಿಮಾನ ವ್ಯವಸ್ಥೆ ಮಾಡಿದ ಬಾಲಿವುಡ್​ ನಟ ಸೋನು ಸೂದ್​

  Published by:Harshith AS
  First published: