News18 India World Cup 2019

'ಏಕ್ ಲವ್​ ಯಾ': ಜೋಗಿ ಪ್ರೇಮ್​ - ಭಾಮೈದನನ ಚಿತ್ರಕ್ಕೆ ಸಿಕ್ಕಳು ನಾಯಕಿ..!

ಈ ಮೊದಲು ಪ್ರೇಮ್ ಎವರ್​ ಗ್ರೀನ್ ನಟಿ ಸುಧಾರಾಣಿ ಪುತ್ರಿಯನ್ನು 'ಏಕ್ ಲವ್ ಯಾ' ಮೂಲಕ ಪರಿಚಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇಂತಹ ಸುದ್ದಿಗಳನ್ನು ಅಲ್ಲೆಗೆಳೆದು  ಗಾಸಿಪ್​ಗಳಿಗೆ ಸುಧಾರಾಣಿ ಪುಲಿಸ್ಟಾಪ್ ಇಟ್ಟಿದ್ದರು

zahir | news18
Updated:June 14, 2019, 3:57 PM IST
'ಏಕ್ ಲವ್​ ಯಾ': ಜೋಗಿ ಪ್ರೇಮ್​ - ಭಾಮೈದನನ ಚಿತ್ರಕ್ಕೆ ಸಿಕ್ಕಳು ನಾಯಕಿ..!
ಏಕ್ ಲವ್ ಯಾ
zahir | news18
Updated: June 14, 2019, 3:57 PM IST
ಜೋಗಿ ಪ್ರೇಮ್ 'ಏಕ್ ಲವ್ ಯಾ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ರಕ್ಷಿತಾ ಪ್ರೇಮ್ ಸಹೋದರ 'ರಾಣಾ' ಈ ಚಿತ್ರದ ನಾಯಕ. ಸಖತ್ ಸೌಂಡ್ ಮಾಡಿಯೇ ಸೆಟ್ಟೇರಿದ್ದ ಈ ಚಿತ್ರಕ್ಕೆ ನಾಯಕಿ ಯಾರೆಂಬುದು ಇಲ್ಲೀತನಕ ಯಕ್ಷ ಪ್ರಶ್ನೆಯಾಗಿತ್ತು.

ಈ ಮೊದಲು ಪ್ರೇಮ್ ಎವರ್​ ಗ್ರೀನ್ ನಟಿ ಸುಧಾರಾಣಿ ಪುತ್ರಿಯನ್ನು 'ಏಕ್ ಲವ್ ಯಾ' ಮೂಲಕ ಪರಿಚಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇಂತಹ ಸುದ್ದಿಗಳನ್ನು ಅಲ್ಲೆಗೆಳೆದು  ಗಾಸಿಪ್​ಗಳಿಗೆ ಸುಧಾರಾಣಿ ಪುಲಿಸ್ಟಾಪ್ ಇಟ್ಟಿದ್ದರು. ಹೀಗಾಗಿ 'ವಿಲನ್' ನಿರ್ದೇಶಕ ಮತ್ತೊಮ್ಮೆ ಪರಭಾಷಾ ತಾರೆಗಳಿಗೆ ಮಣೆ ಹಾಕಲಿದ್ದಾರೆಂಬ ಸುದ್ದಿಗಳು ಹುಟ್ಟಿಕೊಂಡಿದ್ದವು.

ಆದರೀಗ ಅಪ್ಪಟ ಕನ್ನಡದ ಹುಡುಗಿಯನ್ನೇ ಪ್ರೇಮ್ 'ಏಕ್​ ಲವ್ ಯಾ'ಗೆ ನಾಯಕಿಯನ್ನಾಗಿಸಿದ್ದಾರೆ. ಹೌದು, ರಾಣಾ ಜೊತೆ ಡ್ಯುಯೆಟ್ ಹಾಡಲು 'ಡಿಂಪಲ್ ಕ್ವೀನ್' ರಚಿತಾ ರಾಮ್​ರನ್ನು ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಆರಿಸಿಕೊಂಡಿದ್ದಾರೆ.
 
Loading...

View this post on Instagram
 

To lots of honest stories n new friendship that I thought I was incapable of .... ❤️ @rachita_instaofficial welcome on board #rakshithasfilmfactory


A post shared by Rakshitha (@rakshitha__official) on


'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು ಇಲ್ಲಿ ಡಿಂಪಲ್ ಕ್ವೀನ್ ಟಾಮ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟೈಟಲ್ ಟೀಸರ್​ ಮೂಲಕ ಮೋಡಿ ಮಾಡಿರುವ ಜೋಗಿ ಪ್ರೇಮ್ ಭಾಮೈದನೊಂದಿಗೆ ಮತ್ತೆ ಸಕ್ಸಸ್ ಟ್ರ್ಯಾಕ್​ಗೆ ಮರಳುವ ಸೂಚನೆಯಂತು ನೀಡಿದ್ದಾರೆ.

ಇದನ್ನೂ ಓದಿ: ಯೋಧರ ನಾಡಿನ ಬೇಡಿಕೆಗೆ ಕೈ ಜೋಡಿಸಿದ ನಟ ಶಿವಣ್ಣ: ಕೊಡಗಿನ ಜನರ 'ಆಸ್ಪತ್ರೆ' ಅಭಿಯಾನಕ್ಕೆ ವ್ಯಾಪಕ ಬೆಂಬಲ

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...