• Home
  • »
  • News
  • »
  • entertainment
  • »
  • Dilpasand Director: ದಿಲ್​ಪಸಂದ್ ಕಥೆಗೆ ನಾನ್ ಹೀರೋ ಆಗ್ಬೇಕಿತ್ತು ಎಂದ ಅಜಯ್ ರಾವ್! ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಡೈರೆಕ್ಟರ್ ಶಿವತೇಜಸ್

Dilpasand Director: ದಿಲ್​ಪಸಂದ್ ಕಥೆಗೆ ನಾನ್ ಹೀರೋ ಆಗ್ಬೇಕಿತ್ತು ಎಂದ ಅಜಯ್ ರಾವ್! ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಡೈರೆಕ್ಟರ್ ಶಿವತೇಜಸ್

ದಿಲ್​ಪಸಂದ್ ಡೈರೆಕ್ಟರ್ ಹೇಳಿದ್ರು ತೆರೆ ಹಿಂದಿನ ಅಸಲಿ ಕಥೆ

ದಿಲ್​ಪಸಂದ್ ಡೈರೆಕ್ಟರ್ ಹೇಳಿದ್ರು ತೆರೆ ಹಿಂದಿನ ಅಸಲಿ ಕಥೆ

ಡೈರೆಕ್ಟರ್ ಶಿವತೇಜಸ್ ಹೇಳಿದ ಕಥೆಯನ್ನ ಕೇಳಿರೊ ಅಜಯ್ ರಾವ್ ವಾರೇ ವಾ ಅಂತ ಹೇಳೊದಲ್ಲದೇ, ಈ ಕಥೆ ನಾನು ಮಾಡ್ಬೇಕಿತ್ತು. ಇದನ್ನ ನಾನು ಮಿಸ್ ಮಾಡಿಕೊಂಡೆ ಅಂತಲೇ ಡೈರೆಕ್ಟರ್ ಮುಂದೆ ಬೇಸರಪಟ್ಟುಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್​ ನಲ್ಲಿ (Sandalwood) ಅನೇಕ ನಾಯಕ ನಟರಿದ್ದಾರೆ. ಅನೇಕ ಡೈರೆಕ್ಟರ್ (Director) ಕೂಡ ಇದ್ದಾರೆ. ದಿನವೂ ಇಲ್ಲಿ ಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಹೊಸ ಹೊಸ ಡೈರೆಕ್ಟರ್ ಕಥೆ ಮಾಡ್ತಾನೇ ಇರ್ತಾರೆ. ಆದರೆ ಯಾವ ಹೂ ಯಾರ ಮುಡಿಗೆ ಅನ್ನೋ ಹಾಗೆ, ಯಾವ ಕಥೆ ಯಾರಿಗೆ ಲಕ್ ಹೊಡೆಯುತ್ತದೆಯೋ ಏನೋ. ಇದನ್ನ ಹೇಳುವುದು ಕಷ್ಟ. ಇದೆಲ್ಲ ಅದೃಷ್ಟವೇ ಅನ್ನೋ ನಂಬಿಕೆ (Gandhinagara) ಗಾಂಧಿನಗರದ ಗಲ್ಲಿಯಲ್ಲಿದೆ. ಇಂತಹ ನಂಬಿಕೆಗಳು ಇಲ್ಲಿ ಸಾಕಷ್ಟಿವೆ. ಅಂತಹದ್ದೆ ಒಂದು ಇಂಟ್ರೆಸ್ಟಿಂಗ್ ಕಥೆಯನ್ನ ದಿಲ್​ಪಸಂದ್ (Dilpasand) ಡೈರೆಕ್ಟರ್ ಶಿವತೇಜಸ್ ಹಂಚಿಕೊಂಡಿದ್ದಾರೆ. ಇದು ದಿಲ್​ಪಸಂದ್ ಸಿನಿಮಾಗೆ ಸಂಬಂಧಿಸಿದ ಕಥೆಯೇ ಆಗಿದೆ.


ದಿಲ್​ಪಸಂದ್ ಡೈರೆಕ್ಟರ್ ಹೇಳಿದ್ರು ತೆರೆ ಹಿಂದಿನ ಅಸಲಿ ಕಥೆ


ದಿಲ್​ಪಸಂದ್ ಸಿನಿಮಾದಲ್ಲಿ ಒಳ್ಳೆ ಕಥೆ ಇದೆ. ಈ ಕಥೆ ಈಗಿನ ಟ್ರೆಂಡ್​​ಗೆ ತಕ್ಕನಾಗಿಯೇ ಇದೆ. ಸಂಸಾರ, ಆದರ್ಶ, ಮೌಲ್ಯಗಳು ಇವೆಲ್ಲ ಈಗ ಸುಮ್ನೆ ಹೆಸರಿಗೆ ಅನ್ನೋ ಸ್ಥಿತಿ ಬಂದು ಬಿಟ್ಟಿದೆ. ಇದನ್ನೇ ಕಥೆಯಾಗಿಸಿಕೊಂಡು ಹೊಸದೇನೋ ಹೇಳೋಕೆ ಡೈರೆಕ್ಟರ್ ಶಿವತೇಜ್ ಹೊರಟ್ಟಿದ್ದಾರೆ.


ತೀರಾ ದೊಡ್ಡ ಬಜೆಟ್​​ನಲ್ಲಿ ಈ ಕಥೆಯನ್ನ ಡೈರೆಕ್ಟರ್ ಶಿವತೇಜ್ ಚಿತ್ರೀಕರಣ ಮಾಡಿಲ್ಲ. ಒಂದು ಮಿನಿಮಮ್ ಬಜೆಟ್​​ನಲ್ಲಿಯೇ ಚಿತ್ರವನ್ನ ಅದ್ಭುತವಾಗಿಯೇ ತೆಗೆದಿದ್ದಾರೆ.


Dilpasand Director Shiva Tejass Reveal Some Secrets of Films
ಒಂದೇ ಸಲ ಕಥೆ ಕೇಳಿ ಓಕೆ ಎಂದು ಹೇಳಿದ ಡಾರ್ಲಿಂಗ್ ಕೃಷ್ಣ


ಒಂದೇ ಸಲ ಕಥೆ ಕೇಳಿ ಓಕೆ ಎಂದು ಹೇಳಿದ ಡಾರ್ಲಿಂಗ್ ಕೃಷ್ಣ


ಇದರ ಚಿತ್ರೀಕರಣ ಮುಗಿಸಿದ ಡರೆಕ್ಟರ್ ಶಿವತೇಜಸ್ ಒಂದಷ್ಟು ವಿಶೇಷ ವಿಷಯಗಳನ್ನ ನ್ಯೂಸ್​-18 ಕನ್ನಡ ಡಿಜಿಟಲ್​ ಜೊತೆಗೆ ಶೇರ್ ಮಾಡಿದ್ದಾರೆ. ಅಂದ್ಹಾಗೆ ದಿಲ್​ಪಸಂದ್ ಕಥೆಯನ್ನ ಡೈರೆಕ್ಟರ್ ಶಿವತೇಜಸ್ ಒಂದೇ ಸಿಟ್ಟಿಂಗ್ ನಲ್ಲಿಯೇ ಓಕೆ ಮಾಡುವ ರೀತಿಯಲ್ಲಿಯೇ ಹೇಳಿದ್ದಾರೆ.


ಹೌದು, ಗಾಂಧಿನಗರದಲ್ಲಿ ಒಂದೇ ಸಿಟ್ಟಿಂಗ್​​ಗೆ ಕಥೆಯನ್ನ ಯಾರೂ ಒಪ್ಪಿಕೊಳ್ಳೋದಿಲ್ಲ. ಆದರೆ ಶಿವತೇಜಸ್​ ಅದ್ಭುತವಾಗಿಯೇ ಕಥೆ ಮಾಡಿಕೊಂಡಿರುತ್ತಾರೆ. ಅದನ್ನ ಅಷ್ಟೇ ಅದ್ಭುತವಾಗಿಯೇ ತೆರೆ ಮೇಲೆ ತೆಗೆಯುತ್ತಾರೆ.


ಇದನ್ನೂ ಓದಿ: Nora Fatehi: ಗ್ಲಾಮರಸ್ ಗೊಂಬೆಯಂತೆ ಕಂಡ ನೋರಾ! ಡ್ಯಾನ್ಸ್ ಕ್ವೀನ್ ಸಖತ್ ಫೋಟೋಸ್ ಇಲ್ಲಿವೆ


ಅದರಂತೆ ಡೈರೆಕ್ಟರ್ ಶಿವತೇಜಸ್,ನಾಯಕ ನಟ ಡಾರ್ಲಿಂಗ್​ ಕೃಷ್ಣರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳ್ತಾ, ಕೇಳ್ತಾ ಕೃಷ್ಣ ಸಿಕ್ಕಾಪಟ್ಟೆ ನಕ್ಕು ಬಿಟ್ಟಿದ್ದಾರೆ. ಎಮೋಷನ್ಸ್ ಬಂದಾಗ ಅದಕ್ಕೂ ಕೃಷ್ಣನ ಹೃದಯ ಮಿಡಿದಿದೆ.


ಹೀಗೆ ಒಂದೇ ಸಲ ಕಥೆ ಕೇಳಿದ ಡಾರ್ಲಿಂಗ್ ಕೃಷ್ಣ ಓಕೆ ಹೇಳಿ ಸಿನಿಮಾ ಮಾಡ್ತೀನಿ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೇ ರೀತಿ ಚಿತ್ರದ ನಿರ್ಮಾಪಕ ಸುಮಂತ್ ಕ್ರಾಂತಿ ಕೂಡ ಒಂದೇ ಸಲ ಕಥೆ ಕೇಳಿ ಓಕೆ ಅಂತಲೇ ಹೇಳಿ ಬಿಟ್ಟಿದ್ದಾರೆ.


ಅಜಯ್​ ರಾವ್​ಗೆ ಶಿವತೇಜಸ್ ದಿಲ್​ಪಸಂದ್ ಕಥೆ ಹೇಳಿದ್ಯಾಕೆ?


ದಿಲ್​ಪಸಂದ್ ಕಥೆ ಎಲ್ಲ ಓಕೆ ಆದ್ಮೇಲೆ ಚಿತ್ರೀಕರಣವೂ ಶುರು ಆಗಿದೆ. ಹಾಗೇನೆ ಒಮ್ಮೆ ಡೈರೆಕ್ಟರ್ ಶಿವತೇಜಸ್ ನಾಯಕ ನಟ ಅಜಯ್ ರಾವ್ ಅವರಿಗೆ ಒಂದು ಕತೆ ಇದೆ. ಕೇಳಿ ಹೇಗಿದೆ ಅಂತ ಹೇಳಿ ಅಂತಲೂ ಹೇಳಿದ್ದಾರೆ.


Dilpasand Director Shiva Tejass Reveal Some Secrets of Films
ದಿಲ್​ಪಸಂದ್ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನವರಸಗಳ ಪ್ರದರ್ಶನ


ದಿಲ್ ಪಸಂದ್ ಕಥೆ ನಾನ್ ಮಾಡ್ಬೇಕಿತ್ತು ಎಂದ ಅಜಯ್


ಡೈರೆಕ್ಟರ್ ಶಿವತೇಜಸ್ ಹೇಳಿದ ಕಥೆಯನ್ನ ಕೇಳಿರೊ ಅಜಯ್ ರಾವ್ ವಾರೇ ವಾ ಅಂತ ಹೇಳೊದಲ್ಲದೇ, ಈ ಕಥೆ ನಾನು ಮಾಡ್ಬೇಕಿತ್ತು. ಇದನ್ನ ನಾನು ಮಿಸ್ ಮಾಡಿಕೊಂಡೆ ಅಂತಲೇ ಡೈರೆಕ್ಟರ್ ಮುಂದೆ ಬೇಸರಪಟ್ಟುಕೊಂಡಿದ್ದಾರೆ.


ಆದರೆ ಕೊನೆಗೆ ಇದೇ ಚಿತ್ರದಲ್ಲಿಯೇ ಅಜಯ್ ರಾವ್ ಒಂದು ಪಾತ್ರವನ್ನ ಮಾಡಿದ್ದಾರೆ. ಅದು ಚಿತ್ರಕ್ಕೆ ವಿಶೇಷವಾದ ಪ್ರಮುಖ ಪಾತ್ರವೇ ಆಗಿದೆ ಅಂತಲೇ ಡೈರೆಕ್ಟರ್ ಶಿವತೇಜಸ್ ಹೇಳಿದ್ದಾರೆ.


ದಿಲ್​ಪಸಂದ್ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನವರಸಗಳ ಪ್ರದರ್ಶನ


ದಿಲ್​ಪಸಂದ್ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣನಿಗೆ ಇಬ್ಬರು ನಾಯಕಿಯರಿದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹಾಗೂ ಗುರು ಶಿಷ್ಯರು ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಕೂಡ ಇದ್ದಾರೆ. ಇಬ್ಬರಿಗೂ ಡೈರೆಕ್ಟರ್ ಶಿವತೇಜಸ್ ಬೇರೆ ರೀತಿಯ ಪಾತ್ರವನ್ನೆ ಸೃಷ್ಟಿ ಮಾಡಿದ್ದಾರೆ.




ಮೇಘಾ ಶೆಟ್ಟಿ ಮುಗ್ಧ ಪತ್ನಿಯ ಪಾತ್ರವನ್ನೆ ಇಲ್ಲಿ ನಿರ್ವಹಿಸಿ ಸ್ಕೋರ್ ಮಾಡುವಂತೆ ಅಭಿನಯಿಸಿದ್ದಾರೆ. ಆದರೆ ನಿಶ್ವಿಕಾ ಪಾತ್ರ ಬೇರೆ ನವರಸಗಳನ್ನೆಲ್ಲ ಒಳಗೊಂಡಿದೆ. ಅಭಿನಯದ ನವರಸಗಳನ್ನೆಲ್ಲ ನಿಶ್ವಿಕಾ ನಾಯ್ಡು ಇಲ್ಲಿ ಅಭಿನಯಿಸಿದ ಡೈರೆಕ್ಟರಿಂದ ಭೇಷ್ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: Kantara Break KGF Record: ಬಾಲಿವುಡ್​​ನಲ್ಲಿ ಕೆಜಿಎಫ್ ದಾಖಲೆ ಬ್ರೇಕ್ ಮಾಡ್ತಿದೆ ಕಾಂತಾರ! ತರಣ್ ಆದರ್ಶ್ ಹೇಳಿದ್ದಿಷ್ಟು


ಅರ್ಜುನ್ ಜನ್ಯ ಸಂಗೀತದ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಕ್ಯಾಮೆರಾವರ್ಕ್ ಇದೆ. ಇದೇ ತಿಂಗಳ 11 ರಂದು ಸಿನಿಮಾ ಬೆಳ್ಳಿ ತೆರೆ ಮೇಲೆ ಬರ್ತಾಯಿದೆ. ಅಷ್ಟೇ ನಿರೀಕ್ಷೆಯನ್ನೂ ಈ ಚಿತ್ರ ಹುಟ್ಟುಹಾಕಿದೆ. ಈಗಾಗಲೇ ಚಿತ್ರದ ಟ್ರೈಲರ್ ಗೆ ಒಂದು ಮಿಲಿಯನ್ ಗೂ ಹೆಚ್ಚು ವೀವ್ಸ್ ಬಂದಿದೆ. ರಾಮಾ ರಾಮಾ ಹಾಡು ಸಖತ್ ವೈರಲ್ ಆಗಿದೆ.

First published: