Inderjit Nikku: ಆರ್ಥಿಕ ಸಂಕಷ್ಟದಲ್ಲಿರುವ ಗಾಯಕ ಇಂದ್ರಜಿತ್ ನಿಕ್ಕುವಿಗೆ ಸಹಾಯ ಮಾಡಿದ ದಿಲ್‌ಜಿತ್ ದೋಸಾಂಜ್!

ಆಧುನಿಕ ಸಂಗೀತದತ್ತ ಸಂಗೀತಪ್ರಿಯರು (Music lovers) ಚಿತ್ತ ನೆಟ್ಟಿರುವುದು ಹಳಬರ ವರ್ಚಸ್ಸನ್ನು ಕುಂದಿಸಿದೆ. ಎಷ್ಟೋ ಗಾಯಕರು ಇಂದಿಗೂ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಅವಕಾಶಗಳಿಲ್ಲದೇ ಹೈರಾಣಾಗಿದ್ದಾರೆ. ಆರ್ಥಿಕವಾಗಿ ಬಳಲಿದ್ದಾರೆ. ಇದೇ ರೀತಿಯಲ್ಲಿ ಹಾಡುಗಾರ ಇಂದ್ರಜಿತ್ ನಿಕ್ಕು (Inderjit Nikku) ತಾವು ಬಹುಕಾಲದಿಂದ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟದ (Financial distress) ಕುರಿತು ಮಾತನಾಡಿರುವ ವಿಡಿಯೋವು ಇದೀಗ ಸಾಮಾಜಿಕ ತಾಣದಲ್ಲಿ ಸದ್ದುಮಾಡುತ್ತಿದೆ.

ದಿಲ್‌ಜಿತ್ ದೋಸಾಂಜ್ ಮತ್ತು ಇಂದ್ರಜಿತ್ ನಿಕ್ಕು

ದಿಲ್‌ಜಿತ್ ದೋಸಾಂಜ್ ಮತ್ತು ಇಂದ್ರಜಿತ್ ನಿಕ್ಕು

  • Share this:
ಸಂಗೀತ ಕ್ಷೇತ್ರದಲ್ಲಿ ಇದೀಗ ಯುವ ಪ್ರತಿಭೆಗಳ ಏರಿಕೆ ಹಾಗೂ ಸಂಗೀತ ಪ್ರಿಯರಲ್ಲಿ ಕಂಡುಬಂದಿರುವ ಹೊಸತನದಿಂದಾಗಿ ಕೆಲವು ಹಿರಿಯ ಕಲಾವಿದರು ಅವಕಾಶಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಈ ಸಮಸ್ಯೆ ತೀವ್ರವಾಗಿರುವುದು ಪಂಜಾಬಿ ಸಂಗೀತೋದ್ಯಮ (Punjabi music industry) ಕ್ಷೇತ್ರದಲ್ಲಿ. ಯುವ ಪ್ರತಿಭೆಗಳಿಗೆ ಇದೀಗ ಸಂಗೀತ ಕ್ಷೇತ್ರದಲ್ಲಿ ದೊರಕುತ್ತಿರುವ ಮನ್ನಣೆ ಹಾಗೂ ಆಧುನಿಕ ಸಂಗೀತದತ್ತ ಸಂಗೀತಪ್ರಿಯರು (Music lovers) ಚಿತ್ತ ನೆಟ್ಟಿರುವುದು ಹಳಬರ ವರ್ಚಸ್ಸನ್ನು ಕುಂದಿಸಿದೆ. ಎಷ್ಟೋ ಗಾಯಕರು ಇಂದಿಗೂ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಅವಕಾಶಗಳಿಲ್ಲದೇ ಹೈರಾಣಾಗಿದ್ದಾರೆ. ಆರ್ಥಿಕವಾಗಿ ಬಳಲಿದ್ದಾರೆ. ಇದೇ ರೀತಿಯಲ್ಲಿ ಹಾಡುಗಾರ ಇಂದ್ರಜಿತ್ ನಿಕ್ಕು (Inderjit Nikku) ತಾವು ಬಹುಕಾಲದಿಂದ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟದ (Financial distress) ಕುರಿತು ಮಾತನಾಡಿರುವ ವಿಡಿಯೋವು ಇದೀಗ ಸಾಮಾಜಿಕ ತಾಣದಲ್ಲಿ ಸದ್ದುಮಾಡುತ್ತಿದೆ.

ಸಂತನ ಬಳಿ ನಿಕ್ಕು ಪತ್ನಿ ಸಮೇತರಾಗಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಂದ್ರಜಿತ್ ನಿಕ್ಕು ಹಲವಾರು ಹಿಟ್ ಹಾಡುಗಳಾದ ಇಕ್ ಕುಡಿ ಮೆರಿ ಸಪ್ನೆ ಚ ಆಯಿ, ಸರ್ದಾರಿ, ಪಗ್ರಿ ಮೊದಲಾದವುಗಳನ್ನು ಸಂಗೀತ ಲೋಕಕ್ಕೆ ದಯಪಾಲಿಸಿದವರು. ಪ್ರಸ್ತುತ ಅವಕಾಶ ವಂಚಿತರಾಗಿ ನಿಕ್ಕು ಮಾನಸಿಕವಾಗಿ ಕುಗ್ಗಿರುವುದಾಗಿ ಸಂತನ ಬಳಿ ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ನಿಕ್ಕು ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂತನ ಮುಂದೆ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಸಂತ ನಿಕ್ಕು ಹೇಳಿರುವುದನ್ನು ಪುನರಾವರ್ತಿಸಿದ್ದು ಗಾಯಕ ಆರೋಗ್ಯ ಸಮಸ್ಯೆ, ವೃತ್ತಿ ಜೀವನದ ಸಮಸ್ಯೆ ಹಾಗೂ ಹಣದ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ತಾವು ಖುಷಿಯಾಗಿಲ್ಲ ಎಂಬುದನ್ನೂ ನಿಕ್ಕು ಸಂತನ ಬಳಿ ವ್ಯಕ್ತಪಡಿಸಿಕೊಂಡಿದ್ದಾರೆ. ಇದಲ್ಲದೆ ನಿಕ್ಕು ಹಾಗೂ ಅವರ ಪತ್ನಿ ಶೋಕತಪ್ತರಾಗಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ. ಸಂತನು ಕೊನೆಯಲ್ಲಿ ನಿಕ್ಕು ಹಾಗೂ ಪತ್ನಿಯನ್ನು ಆಶೀರ್ವದಿಸಿದ್ದು ಎಲ್ಲವೂ ಒಳಿತಾಗಲಿದೆ ಹಾಗೂ ಭವಿಷ್ಯವು ಉಜ್ವಲಗೊಳ್ಳಲಿದೆ ಎಂದು ತಿಳಿಸುತ್ತಾರೆ. ಈ ವಿಡಿಯೋವು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಚರ್ಚೆಯ ಕೇಂದ್ರ ಬಿಂದುವಾಗಿದೆ.

ನಿಕ್ಕು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನಪ್ರಿಯ ಪಂಜಾಬಿ ಹಾಡುಗಾರ ಹಾಗೂ ನಟ ದಿಲ್‌ಜಿತ್ ದೋಸಾಂಜ್, ಇಂದ್ರಜಿತ್ ನಿಕ್ಕುಗೆ ಹಾಡು ಹಾಡಲು ಆಫರ್ ಮಾಡಿ ಸಹಾಯ ಹಸ್ತ ಚಾಚಿದ್ದಾರೆ. ಪಂಜಾಬಿ ಹಾಡುಗಾರ ದಿಲ್‌ಜಿತ್ ದೋಸಾಂಜ್ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇರುವ ಒಬ್ಬ ಗಾಯಕ ಹಾಗೂ ನಟರಾಗಿದ್ದಾರೆ. ತಮ್ಮ ಚಿತ್ರಗಳ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನ ಗೆದ್ದಿರುವ ಗಾಯಕ ಇದೀಗ ನಿಕ್ಕುವಿನ ಕಷ್ಟಕ್ಕೆ ಸ್ಪಂದಿಸುವ ಮೂಲಕ ಇನ್ನಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಿಲ್‌ಜಿತ್ ನಿಕ್ಕುಗೆ ಹಾಡು ಆಫರ್ ಮಾಡಿರುವುದು:
ನಿಕ್ಕು ತಮ್ಮ ಆರ್ಥಿಕ ಸ್ಥಿತಿಯನ್ನು ವಿವರಿಸಿ ಸಂತನ ಬಳಿ ದುಃಖತಪ್ತರಾಗಿರುವ ವಿಡಿಯೋ ಚರ್ಚಾ ವಿಷಯವಾಗುತ್ತಿದ್ದಂತೆ ದಿಲ್‌ಜಿತ್ ನಿಕ್ಕುವಿಗೆ ನೆರವಿನ ಹಸ್ತ ಚಾಚಿದ್ದಾರೆ. ಇಕ್ಕು ಕುಡಿ ಹಾಡಿನಿಂದ ಸೂಪರ್‌ಹಿಟ್ ಗಾಯಕ ಎಂದೆನಿಸಿಕೊಂಡ ದಿಲ್‌ಜಿತ್ ತಮ್ಮ ಇನ್‌ಸ್ಟಾದಲ್ಲಿ ತಮ್ಮ ಮುಂದಿನ ಚಿತ್ರದಲ್ಲಿ ನಿಕ್ಕು ಹಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೇಟ ಕಟ್ಟಿ ಹಾಡುವುದನ್ನು ನಮಗೆಲ್ಲಾ ತೋರಿಸಿಕೊಟ್ಟವರೇ ಅವರು. ಇಂದು ನಾನು ಪೇಟ ಕಟ್ಟಿ ಹಾಡುತ್ತೇನೆ ಎಂದರೆ ಅದಕ್ಕೆ ಕಾರಣ ಇಂದ್ರಜಿತ್ ನಿಕ್ಕು ಎಂದು ದಿಲ್‌ಜಿತ್ ಬರೆದುಕೊಂಡಿದ್ದು, ಹಾಡುಗಾರನ ಮೇಲೆ ಪ್ರೀತಿಯ ಎಮೋಟಿಕಾನ್ ಅನ್ನು ಸುರಿಸಿದ್ದಾರೆ.

ಏನೇ ಮಾಡುವುದಿದ್ದರೂ ಪ್ರಾಮಾಣಿಕವಾಗಿ ಮಾಡುವ ಅಂತೆಯೇ ಹೇಳುವ ದಿಲ್‌ಜಿತ್ ತಮ್ಮ ಒಳ್ಳೆಯ ಮನಸ್ಸಿನಿಂದ ಗಾಯಕ ವಲಯದಲ್ಲಿ ಖ್ಯಾತನಾಮರು. ನಾನು ನನ್ನ ಮುಂದಿನ ಚಿತ್ರ ಚಿತ್ರೀಕರಿಸುವಾಗ ದಯವಿಟ್ಟು ಒಂದು ಹಾಡು ನನಗೋಸ್ಕರ ಹಾಡಿ ಎಂದು ದಿಲ್‌ಜಿತ್ ನಿಕ್ಕುವಿನ ಬಳಿ ಮನವಿ ಮಾಡಿಕೊಂಡಿದ್ದಾರೆ.
Published by:Ashwini Prabhu
First published: