RIP Dilip Kumar: ಮೊಹಮ್ಮದ್​ ಯೂಸುಫ್​ ಖಾನ್ ಟ್ರಾಜಿಡಿ ಕಿಂಗ್​​ ದಿಲೀಪ್​ ಕುಮಾರ್ ಆದ ಕಥೆ..!

ದಿಲೀಪ್​ ಕುಮಾರ್​ ಅವರ ನಿಜವಾದ ಹೆಸರು ಮೊಹಮ್ಮದ್​ ಯೂಸುಫ್ ಖಾನ್​. ಸಿನಿಮಾಗೆ ಬಂದ ನಂತರ ಅವರಿಗೆ ದಿಲೀಪ್ ಕುಮಾರ್ ಎಂದು ಬದಲಾಯಿಸಲಾಯಿತು. 

ದಿಲೀಪ್ ಕುಮಾರ್​

ದಿಲೀಪ್ ಕುಮಾರ್​

  • Share this:
ಬಾಲಿವುಡ್​ನಲ್ಲಿ​ ಟ್ರಾಜಿಡಿ ಕಿಂಗ್​ ಎಂದೇ ಕರೆಸಿಕೊಳ್ಳುವ ನಟ ದಿಲೀಪ್​ ಕುಮಾರ್ ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದ ದಿಲೀಪ್​ ಕುಮಾರ್​ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. 98 ವರ್ಷವಾಗಿದ್ದ ನಟನಿಗೆ ಈ ಹಿಂದೆ ಕೊರೋನಾ ಪಾಸಿಟ್​ ಆಗಿತ್ತು. ಅದರಿಂದ ಗುಣಮುಖರಾಗಿ ಚೇತರಿಸಿಕೊಂಡ ನಂತರ ಮತ್ತೆ ದಿಲೀಪ್​ ಕುಮಾರ್ ಅವರನ್ನು ಜೂನ್​ 6ರಂದು ಮತ್ತೆ ಶ್ವಾಸಕೋಶದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮತ್ತೆ ಜೂನ್​ 30ರಂದು ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಣ್ಣದ ಲೋಕದಲ್ಲಿ ಟ್ರಾಜಿಡಿ ಕಿಂಗ್​ ಎಂದೇ ಖ್ಯಾತರಾಗಿರುವ ದಿಲೀಪ್ ಕುಮಾರ್​ ಅವರು ಅಂದಾಜ್, ಬಾಬುಲ್​ ದೀದಾರ್​, ಆನ್​, ದೇವ್​ದಾಸ್​, ನಯಾ ದೌರ್​ ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ರಂಜಿಸಿದ್ದಾರೆ. 

1922 ಡಿ. 11ರಂದು ಪೇಶಾವರದಲ್ಲಿ ಇವರ ಜನನವಾಯಿತು. 1944ರಲ್ಲಿ ಜ್ವಾರ್​ ಬಾಟಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತಮ್ಮ ಸಿನಿಮಾ ಪಯಣದಲ್ಲಿ ದಿಲೀಪ್​ ಕುಮಾರ್ ಅವರು 65 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಾಜ್ (1949)​, ಆನ್ (1952)​, ದಾಗ್ (1952)​, ದೇವ್​ದಾಸ್(1955)​, ಆಜಾದ್ (1955)​, ಐತಿಹಾಸಿಕ ಸಿನಿಮಾ ಮುಘಲ್​ ಎ ಅಜಮ್ (1960)​, ಗಂಗಾ ಜಮುನಾ (1961), ರಾಮ್​ ಔರ್​ ಶ್ಯಾಮ್ (1967)​, ಸೌದಾಗರ್​, ಕರ್ಮ ಹೀಗೆ ಹಲವಾರು ಹಿಟ್​ಸಿನಿಮಾಗಳ ಮೂಲಕ ರಂಜಿಸಿದ್ದಾರೆ.ದಿಲೀಪ್​ ಕುಮಾರ್ ಅವರ ನಿಜವಾದ ಹೆಸರು ಮೊಹಮ್ಮದ್​ ಯೂಸುಫ್ ಖಾನ್

ದಿಲೀಪ್​ ಕುಮಾರ್​ ಅವರ ನಿಜವಾದ ಹೆಸರು ಮೊಹಮ್ಮದ್​ ಯೂಸುಫ್ ಖಾನ್​. ಸಿನಿಮಾಗೆ ಬಂದ ನಂತರ ಅವರಿಗೆ ದಿಲೀಪ್ ಕುಮಾರ್ ಎಂದು ಬದಲಾಯಿಸಲಾಯಿತು.

ಇದನ್ನೂ ಓದಿ: ದಿವ್ಯಾ ಉರುಡುಗ ಮಾಡಿದ ತಂತ್ರಗಾರಿಕೆಯಿಂದ ಟಾಸ್ಕ್​ನಲ್ಲಿ ಅರವಿಂದ್​ ಗೆದ್ದ: ಪ್ರಶಾಂತ್ ಸಂಬರಗಿ ಆರೋಪ..!

ಟ್ರಾಜಿಡಿ ಕಿಂಗ್​

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ದಿಲೀಪ್​ ಕುಮಾರ್ ಅವರು ಹೆಚ್ಚಾಗಿ ಟ್ರಾಜಿಡಿ ಪಾತ್ರಗಳಲ್ಲಿ ಅಭಿನಯಿಸಿದರು. ಇದರಿಂದಲೇ ಅವರಿಗೆ ಟ್ರಾಜಿಡಿ ಕಿಂಗ್ ಎಂಬ ಹೆಸರು ಬಂತು.

ಸೈರಾ ಭಾನು-ದಿಲೀಪ್​ ಕುಮಾರ್​ ಲವ್ ಸ್ಟೋರಿ

1966ರಲ್ಲಿ ಸೈರಾ ಬಾನು ಅವರೊಂದಿಗೆ ವಿವಾಹವಾದರು. ಇವರದ್ದು ಪ್ರೇಮ ವಿವಾಹವಾಗಿದ್ದು, ಸೈರಾ ಬಾನು 22 ವರ್ಷ ಚಿಕ್ಕವರು. ಸೈರಾ 12 ವರ್ಷದವರಾಗಿದ್ದಾಗಲೇ ದಿಲೀಪ್​ ಕುಮಾರ್ ಅವರಿಗೆ ತಮ್ಮ ಮನಸ್ಸು ಕೊಟ್ಟುಬಿಟ್ಟಿದ್ದರಂತೆ. ಹೀಗೆಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 39ನೇ ವಯಸ್ಸಿನಲ್ಲಿ ಅಂಡಾಣು ಸಂಗ್ರಹ ಮಾಡಿಸಿದ ಕಾಜೋಲ್​ ತಂಗಿ ನಟಿ ತನಿಶಾ ಮುಖರ್ಜಿ

ನಟ ದಿಲೀಪ್​ ಕುಮಾರ್​ ಅವರ ಪ್ರೇಮ ಪ್ರಸಂಗಗಳು ಆಗಿನ ಕಾಲದಲ್ಲಿ ಸಖತ್​ ಸುದ್ದಿಯಲ್ಲಿತ್ತು. ದಿಲೀಪ್​ ಕುಮಾರ್​ ಅವರ ಹೆಸರು ಕಾಮಿನಿ ಕೌಶಲ್​, ಮಧುಬಾಲಾ. ವಹೀದಾ ರೆಹಮಾನ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು.

ಮದರ್​ ಇಂಡಿಯಾ ಸಿನಿಮಾ

ಮದರ್​ ಇಂಡಿಯಾ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರು. ಕಾರಣ, ನರ್ಗೀಸ್​ ಅವರೊಂದಿಗೆ ನಾಯಕನಾಗಿ ಅಭಿನಯಿಸಿದ್ದ ಅವರು, ಆ ಸಿನಿಮಾದಲ್ಲಿ ಮಗನಾಗಿ ಕಾಣಿಸಿಕೊಳ್ಳಬೇಕಿತ್ತು. ಇದು ಅವರಿಗೆ ಹಿಡಿಸಲಿಲ್ಲವಂತೆ. ಅದಕ್ಕೆ ಸಿನಿಮಾವನ್ನೇ ನಿರಾಕರಿಸಿದ್ದರು. ಹೀಗೆಂದು ದಿಲೀಪ್​ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: