ತಾತ ದಿಲೀಪ್​ ಕುಮಾರ್​ ಹಾದಿಯಲ್ಲೇ ನಡೆದ ಸಯೇಷಾ: ತನಗಿಂತ 17 ವರ್ಷ ದೊಡ್ಡ ನಟನನ್ನು ಮದುವೆಯಾದ ನಟಿ..!

ದಿಲೀಪ್​ ಕುಮಾರ್​ ಹಾಗೂ ಸೈರಾ ಬಾನು ಅವರದ್ದು ಪ್ರೇಮ ವಿವಾಹ. ಆಗ ದಿಲೀಪ್​ 45 ವರ್ಷದವರಾಗಿದ್ದರೆ, ಸೈರಾ ಕೇವಲ 22 ವರ್ಷದವರಾಗಿದ್ದರು. ಅಂದರೆ ಸೈರಾ, ದಿಲೀಪ್​ ಅವರಿಗಿಂತ 23 ವರ್ಷ ಚಿಕ್ಕವರು. ಈಗ ದಿಲೀಪ್​-ಸೈರಾ ಅವರ ಮೊಮ್ಮಗಳು ತನಗಿಂತ 17 ವರ್ಷ ದೊಡ್ಡವರಾಗಿರುವ ನಟನನ್ನು ವಿವಾಹವಾಗಿದ್ದಾರೆ.

Anitha E | news18
Updated:March 16, 2019, 4:27 PM IST
ತಾತ ದಿಲೀಪ್​ ಕುಮಾರ್​ ಹಾದಿಯಲ್ಲೇ ನಡೆದ ಸಯೇಷಾ: ತನಗಿಂತ 17 ವರ್ಷ ದೊಡ್ಡ ನಟನನ್ನು ಮದುವೆಯಾದ ನಟಿ..!
ವಿವಾಹವಾದ ಸಂಭ್ರಮದಲ್ಲಿ ಸಯೇಷಾ ಹಾಗೂ ಆರ್ಯ
Anitha E | news18
Updated: March 16, 2019, 4:27 PM IST
ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ನವ ಜೀವನಕ್ಕೆ ಕಾಲಿಟ್ಟ ತಮಿಳು ನಟ ಆರ್ಯ ಹಾಗೂ ನಟಿ ಸಯೇಷಾ ಸೈಗಲ್​ ಕುರಿತಾಗಿ ಮತ್ತೊಂದು ವಿಷಯ ಹೊರ ಬಿದ್ದಿದೆ. ತಮಿಳು ಸಿನಿಮಾ 'ಗಜನಿಕಾಂತ್' ಚಿತ್ರೀಕರಣದ ವೇಳೆ ಇವರಿಬ್ಬರಲ್ಲಿ ಪ್ರೇಮಾಂಕುರವಾಗಿ ಅದಕ್ಕೆ ಈಗ ವಿವಾಹದ ಮುದ್ರೆ ಬಿದ್ದಿದೆ.

ಇದನ್ನೂ ಓದಿ: ಸೈನಾ ನೆಹ್ವಾಲ್​ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಬದಲಾಗಿ ಪರಿಣಿತಿ ಚೋಪ್ರಾ..!

ಮಾರ್ಚ್​ 10ರಂದು ವಿವಾಹವಾದ ಈ ಜೋಡಿ ಮಾ.14ರಂದು ಚೆನ್ನೈನಲ್ಲಿ ಸಿನಿ ಕುಟುಂಬಕ್ಕಾಗಿ ಒಂದು ಅದ್ಧೂರಿ ಆರತಕ್ಷತೆಯನ್ನು ಏರ್ಪಡಿಸಿದ್ದರು. ಸಯೇಷಾ ಸೈಗಲ್​ ಬಾಲಿವುಡ್​ನ ದಿಗ್ಗಜ ನಟ ದಿಲೀಪ್​ ಕುಮಾರ್​ ಹಾಗೂ ಸೈರಾ ಬಾನು ಅವರ ಮೊಮ್ಮಗಳು. ಈಕೆ ಬಾಲಿವುಡ್​ನಲ್ಲಿ ಅಜಯ್​ ದೇವಗನ್​ ಅಭಿನಯದ 'ಶಿವಾಯ್​' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 


Loading...

 




View this post on Instagram




 

A big thank you to all of you for giving us so much love! Here are a few pictures from a small gathering we had in Chennai last night! @aryaoffl @shhaheen #MrandMrsArya #wedding #brideandgroom #happytimes #love #forever #eternity #husbandandwife


A post shared by Sayyeshaa (@sayyeshaa) on






ಇವರ ವಿವಾಹದಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ, ಸಯೇಷಾ ಸಹ ತಮ್ಮ ತಾತ ಹಾಗೂ ಅಜ್ಜಿಯ ಹಾದಿಯಲ್ಲೇ ವಿವಾಹವಾಗಿದ್ದಾರೆ. ಹೌದು, 1966ರಲ್ಲಿ ದಿಲೀಪ್​ ಕುಮಾರ್​ ಹಾಗೂ ಸೈರಾ ಬಾನು ಅವರ ಪ್ರೇಮ ವಿವಾಹವಾಗಿತ್ತು. ಆಗ ದಿಲೀಪ್​ 45 ವರ್ಷದವರಾಗಿದ್ದರೆ, ಸೈರಾ ಕೇವಲ 22 ವರ್ಷದವರಾಗಿದ್ದರು. ಅಂದರೆ ಸೈರಾ, ದಿಲೀಪ್​ ಅವರಿಗಿಂತ 23 ವರ್ಷ ಚಿಕ್ಕವರು.

ಈಗ ಇವರ ಮೊಮ್ಮಗಳು ಸಯೇಷಾ ಸಹ ತನಗಿಂತ 17 ವರ್ಷ ದೊಡ್ಡವರಾದ ಸಹ ನಟನನ್ನು ಮದುವೆಯಾಗಿದ್ದಾರೆ. ಸಯೇಷಾಗೆ ಈಗ 21 ಹಾಗೂ ಆರ್ಯಗೆ 38 ವರ್ಷ. ಇವರ ನಡುವೆ 17 ವರ್ಷದ ಅಂತರವಿದೆ. ಆದರೆ ಪ್ರೀತಿಗೆ ಕಣ್ಣಿಲ್ಲ ಹಾಗೂ ವಯಸ್ಸಿನ ಬೇಧವಿಲ್ಲ ಎನ್ನುತ್ತಾರೆ. ಹೀಗಾಗಿಯೇ ಪ್ರೀತಿಯ ಮುಂದೆ ಎಲ್ಲವೂ ನಗಣ್ಯವಾಗುತ್ತೆ.

 




ಈ ಜೋಡಿಯ ಮದುವೆ ಹೈದರಾಬಾದಿನಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಡೆದಿದೆ ಎನ್ನಲಾಗುತ್ತಿದೆ. ಜೊತೆಗೆ ಹಾರ ಹಾಗೂ ಉಂಗುರ ಬದಲಾಯಿಸಿಕೊಂಡು, ಈ ಜೋಡಿ ಸಹ ಕತ್ತರಿಸಿದ್ದಾರೆ.

PHOTOS: ನಟಿ ರಾಧಿಕಾ ಪಂಡಿತ್​ರ ಹೊಸ ಲುಕ್​​: ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರಾ ಯಶ್​ ಮಡದಿ..!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626