Dilip Kumar: ಮತ್ತೆ ಆಸ್ಪತ್ರೆಗೆ ದಾಖಲಾದ ನಟ ದಿಲೀಪ್​ ಕುಮಾರ್: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!​

ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ನಟನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆಯಂತೆ.

ಪತ್ನಿ ಜೊತೆ ನಟ ದಿಲೀಪ್ ಕುಮಾರ್​

ಪತ್ನಿ ಜೊತೆ ನಟ ದಿಲೀಪ್ ಕುಮಾರ್​

  • Share this:
ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್​ (Dilip Kumar) ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನಲ್ಲಿರುವ ಹಿಂದೂಜಾ ಆಸ್ಪತ್ರೆಗೆ ದಿಲೀಪ್ ಕುಮಾರ್ ಅವರನ್ನು ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿಲೀಪ್​ ಕುಮಾರ್ ಅವರಿಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿದೆಯಂತೆ. ನಿನ್ನೆ ಇಡೀ ದಿನ ಅವರಿಗೆ ಉಸಿರಾಡಲು ಕಷ್ಟವಾಗಿತ್ತಂತೆ. ದಿಲೀಪ್​ ಕುಮಾರ್ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮನೆಯವರು ನಿನ್ನೆ ಮಧ್ಯಾಹ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಮುನ್ನೆಚ್ಚರಿಕೆ  ಕ್ರಮವಾಗಿ ನಟನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆಯೂ ಸಹ ಹಿರಿಯ ನಟ ದಿಲೀಪ್​ ಕುಮಾರ್ ಅವರನ್ನು​ ಉಸಿರಾಟ ಸಮಸ್ಯೆಯಿಂದ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್​ 6ರಂದು  ನಟನ ಅಧಿಕೃತ ಟ್ವಿಟರ್​​ ಖಾತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಹಿತಿ ಲಭ್ಯವಾಗಿತ್ತು.  ದಿಲೀಪ್ ಕುಮಾರ್​ ಆರೋಗ್ಯದ ಬಗ್ಗೆ ಅವರ ಮ್ಯಾನೇಜರ್​ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

Dilip Kumar Hospitalised After Complaining Of Breathlessness.
ನಟ ದಿಲೀಪ್ ಕುಮಾರ್


’ಜೂನ್​ 6ರಂದು ಬೆಳಗ್ಗೆ ದಿಲೀಪ್​ ಸಾಹೇಬರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂಬೈನ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ನಿತಿನ್​ ಗೋಖಲೆ ಅವರ ನೇತೃತ್ವದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ದಿಲೀಪ್ ಕುಮಾರ್ ಸಾಹೇಬರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Bigg Boss: ಅವಳು ದೊಡ್ಡ ಫಿಗರ್ ಆದ್ರೆ ನಾನು ಅಷ್ಟೆ ಎಂದ ಅರವಿಂದ್​: ತರಾಟೆಗೆ ತೆಗೆದುಕೊಂಡ ನಿಧಿ ಸುಬ್ಬಯ್ಯ..!

ಆಗ ನುರಿತ ಹಿರಿಯ ವೈದ್ಯರ ತಂಡ, ಹೃದಯ ತಜ್ಞ ಡಾ.ನಿತಿನ್ ಗೋಖಲೆ ಮತ್ತು ಡಾ. ಜಲೀಲ್ ಪಾರ್ಕರ್​ ಚಿಕಿತ್ಸೆ ನೀಡಿದ್ದರು. 98 ವರ್ಷದ ನಟ ದಿಲೀಪ್ ಕುಮಾರ್ ಕಳೆದ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ತಮ್ಮ ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿ, 2 ದಿನಗಳ ಬಳಿಕ ಡಿಸ್ಚಾರ್ಜ್ ಆಗಿದ್ದರು. ಕಳೆದ ವರ್ಷ ದಿಲೀಪ್ ಕುಮಾರ್​ ಕೊರೋನಾದಿಂದಾಗಿ ತಮ್ಮ ಸಹೋದರರಾದ ಅಸ್ಲಾಂ ಖಾನ್(88) ಮತ್ತು ಇಸಾನ್ ಖಾನ್(90) ಅವರನ್ನು ಕಳೆದುಕೊಂಡಿದ್ದರು.

ಕಳೆದ ವರ್ಷ ದೇಶಾದ್ಯಂತ ಲಾಕ್​ಡೌನ್ ಹೇರುವ ಮುನ್ನ ದಿಲೀಪ್ ಕುಮಾರ್ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರು ಕೆಲವು ದಿನ ಐಸೋಲೇಷನ್​ನಲ್ಲಿದ್ದರು. ದಿಲೀಪ್ ಕುಮಾರ್ ಅವರ ಮಡದಿ ಸೈರಾ ಬಾನು ಆಗಾಗ ತಮ್ಮ ಪತಿಯ ಆರೋಗ್ಯದ ಕುರಿತಾಗಿ ಅಪ್ಡೇಟ್​ ನೀಡುತ್ತಿರುತ್ತಾರೆ.

ಇದನ್ನೂ ಓದಿ: ಪ್ರಶಾಂತ್​​ ಸಂಬರಗಿ ನಂತರ ನಿಧಿ ಸುಬ್ಬಯ್ಯ ವಿಚ್ಛೇದನದ ವಿಷಯ ಚರ್ಚಿಸಿದ ಚಕ್ರವರ್ತಿ ಚಂದ್ರಚೂಡ

ದಿಲೀಪ್​ ಕುಮಾರ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ನಟನೆಯಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವುಗಳಲ್ಲಿ ಕೊಹಿನೂರ್, ಮುಘಲ್-ಇ-ಅಜಾಂ, ಶಕ್ತಿ, ನಯಾ ದೌರ್ ಮತ್ತು ರಾಮ್​ ಔರ್ ಶ್ಯಾಮ್ ಪ್ರಮುಖ ಸಿನಿಮಾಗಳಾಗಿವೆ. ಇವರ ಕೊನೆಯ ಚಿತ್ರ 1998ರಲ್ಲಿ ತೆರೆಕಂಡ ಖಿಲಾ.

ನ್ಯೂಸ್​​​18 ಕನ್ನಡ ಕಳಕಳಿ:

ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: