• Home
  • »
  • News
  • »
  • entertainment
  • »
  • Dil Pasand: ಟ್ರೈಯಾಂಗಲ್ ಲವ್ ಸ್ಟೋರಿಯಲ್ಲಿ ಪ್ರೀತಿಗಾಗಿ ಹುಡುಕಾಟ

Dil Pasand: ಟ್ರೈಯಾಂಗಲ್ ಲವ್ ಸ್ಟೋರಿಯಲ್ಲಿ ಪ್ರೀತಿಗಾಗಿ ಹುಡುಕಾಟ

ದಿಲ್​ಪಸಂದ್ ಚಿತ್ರದ ಪ್ರಣಯದ ಚಿತ್ರಣ

ದಿಲ್​ಪಸಂದ್ ಚಿತ್ರದ ಪ್ರಣಯದ ಚಿತ್ರಣ

ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ದಿಲ್ ಪಸಂದ್ ರಿಲೀಸ್ ಆಗಿದೆ. ಟ್ರೈಯಾಂಗಲ್ ಲವ್ ಸ್ಟೋರಿಯ ಈ ಸಿನಿಮಾ ಹೇಗಿದೆ?

  • News18 Kannada
  • Last Updated :
  • Bangalore, India
  • Share this:

ಲವ್ ಮಾಕ್ಟೇಲ್ ಸಿನಿಮಾ (Cinema) ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಭದ್ರಪಡಿಸಿದಕೊಂಡ ಸಿನಿಪ್ರಿಯರ ನೆಚ್ಚಿನ ಡಾರ್ಲಿಂಗ್ ಕೃಷ್ಣ (Darling Krishna) ಅವರು ಇಬ್ಬರು ಹೀರೋಯಿನ್ಸ್ (Heroines) ಜೊತೆ ರೊಮ್ಯಾನ್ಸ್ (Romance) ಮಾಡಿದ್ದು ಅಂತೂ ಸಿನಿಮಾ ಬಿಡುಗಡೆಯಾಗಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ (Dil Pasand) ಸಿನಿಮಾ ರಿಲೀಸ್ ಆಗಿದ್ದು ಇದರಲ್ಲಿ ನಟ ಇಬ್ಬರು ನಟಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯ (Triangle lobe story) ಕಥಾ ಹಂದರವನ್ನು ಹೊಂದಿರುವ ಸಿನಿಮಾದಲ್ಲಿ ಟ್ರೈಯಾಂಗಲ್ ಲವ್, ಜಗಳ, ಪ್ರೀತಿ, ರೊಮ್ಯಾನ್ಸ್ ಎಲ್ಲವನ್ನೂ ಕಾಣಬಹುದು. 


ಶಿವತೇಜಸ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಕೂಡಾ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತ್ತು, ಇದು ರೊಮ್ಯಾಂಟಿಕ್ ಲವ್ ಸ್ಟೋರಿ ಎನ್ನುವುದನ್ನು ಸಿನಿ ಪ್ರೇಮಿಗಳು ಗೆಸ್ ಮಾಡಿಕೊಂಡು ಸಿನಿಮಾಗೋಸ್ಕರ ಕಾಯುತ್ತಿದ್ದರು.


ತ್ರಿಕೋನ ಪ್ರೇಮ ಕಥೆಯ ಅಸಲಿ ಆಟ


ಫುಲ್ ಟೈಂ ಜಾಲಿಯಾಗಿ ಲೈಫ್ ಎಂಜಾಯ್ ಮಾಡುತ್ತಿದ್ದ ಹೀರೋಗೆ ಅವರಮ್ಮ ಮದುವೆ ಫಿಕ್ಸ್ ಮಾಡಿಸುತ್ತಾರೆ. ಲಕ್ಷಣದ ಹುಡುಗಿಯೊಬ್ಬಳನ್ನು ನೋಡಿ ಮದುವೆಗೆ ಡೇಟ್ ಫಿಕ್ಸ್ ಮಾಡುತ್ತಾರೆ. ಹೀರೋ ಜೊತೆ ಮದುವೆ ಫಿಕ್ಸ್ ಆದಾಗ ಮದುವೆ ಹೆಣ್ಣಾಗಿ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘ ಶೆಟ್ಟಿ ರೆಡಿಯಾಗ್ತಾರೆ. ಇಬ್ಬರೂ ಮದುವೆಯಾಗಿ ಇನ್ನೇನು ಹ್ಯಾಪಿ ಮ್ಯಾರೀಡ್ ಲೈಫ್ ಶುರು ಮಾಡ್ಬೇಕು ಎನ್ನುವಷ್ಟರಲ್ಲಿ ಸಡನ್ನಾಗಿ ಎಂಟ್ರಿ ಕೊಡ್ತಾರೆ ಮತ್ತೊಬ್ಬ ಹೀರೋಯಿನ್. ಇಲ್ಲಿಂದ ಶುರುವಾಗುತ್ತೆ ನೋಡಿ ಅಸಲಿ ಟ್ರೈಯಾಂಗಲ್ ಲವ್ ಸ್ಟೋರಿ ಗೇಮ್.


ಇದನ್ನೂ ಓದಿ: Dilpasand Darling Krishna: ದೋ ದಿಲ್ ಏಕ್ ಪಸಂದ್-ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ನಾಯ್ಡು ಬೇಜಾನ್ ಫನ್ !


ನಿಶ್ವಿಕಾ ಅವರಿಗೆ ಈ ಸಿನಿಮಾದಲ್ಲಿ ಸ್ವಲ್ಪ ಡಿಫರೆಂಟ್ ಪಾತ್ರ ನೀಡಲಾಗಿದೆ. ಈವರೆಗೆ ಪ್ರೇಕ್ಷಕರು ನೋಡಿರದ ರೀತಿಯಲ್ಲಿ ನಿಶ್ವಿತಾ ಸಿನಿಪ್ರೇಮಿಗಳನ್ನು ರಂಜಿಸಲಿದ್ದಾರೆ. ನಟಿ ಮೇಘಾ ಶೆಟ್ಟಿ ಅಷ್ಟಾಗಿ ಹೈಲೈಟ್ ಆಗದಿದ್ದರೂ ಪಾತ್ರಕ್ಕಾಗಿ ಶ್ರಮ ವಹಿಸಿದ್ದನ್ನು ಕಾಣಬಹುದು. ಡಾರ್ಲಿಂಗ್ ಕೃಷ್ಣ ಸಹಜ ನಟನೆಯಿಂದ ಪಾತ್ರಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದಾರೆ.




ಕಥೆ ಇನ್ನೂ ಸ್ವಲ್ಪ ಸ್ಟ್ರಾಂಗ್ ಆಗಿದ್ದರೆ ಸಿನಿಮಾಗೆ ಇನ್ನೊಂದು ಸ್ವಲ್ಪ ಶಕ್ತಿ ಬರುತ್ತಿತ್ತು. ಮೇಕಿಂಗ್ ವಿಚಾರದಲ್ಲಿ ಭೇಷ್ ಎನ್ನಲೇಬೇಕು. ಲೀಲಾಜಾಲವಾಗಿ ಮುಂದುವರಿಯುವ ಸಿನಿಮಾದ ಕಥೆ ಇನ್ನೊಂದಷ್ಟು ಶಾರ್ಪ್ ಆಗಿದ್ದರೆ ಚೆನ್ನಾಗಿರುತ್ತಿತ್ತು.


ಸೂಪರ್ ಹಾಡುಗಳು


ಈ ದಿಲ್​ಪಸಂದ್​ ಹಿಂದೆ ಒಳ್ಳೆಯ ತಂಡ ಕೆಲಸ ಮಾಡಿದೆ. ಅರ್ಜುನ್ ಜನ್ಯರಂತಹ ಸಂಗೀತ ನಿರ್ದೇಶಕರು ಚಿತ್ರಕ್ಕಾಗಿ ಐದು ಹಾಡುಗಳನ್ನೇ ಮಾಡಿಕೊಟ್ಟಿದ್ದಾರೆ. ಶಿವ ತೇಜಸ್ ರಂತಹ ನಿರ್ದೇಶಕರು ಇದಕ್ಕಾಗಿಯೇ ಕೆಲಸ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದೆ.


ಅಜಯ್ ರಾವ್ ಅತಿಥಿ ಪಾತ್ರ


ದಿಲ್​​ಪಸಂದ್ ಸಿನಿಮಾದಲ್ಲಿ ಇಂತಹ ಒಂದು ಪ್ರಯೋಗ ಆಗಿದೆ. ಕನ್ನಡದ ಇಬ್ಬರು ಕೃಷ್ಣರನ್ನ ತೆರೆ ಮೇಲೆ ತಂದಿರೋದೇ ಈ ಸಿನಿಮಾದ ವಿಶೇಷತೆ ಆಗಿದೆ. ಕನ್ನಡದ ಕೃಷ್ಣ ಅಜಯ್ ರಾವ್ ಜೊತೆಗೆ ಅಭಿನಯಿಸಿರೋದು ಖುಷಿ ಆಗಿದೆ ಅಂತಲೇ ಡಾರ್ಲಿಂಗ್ ಕೃಷ್ಣ ಬರೆದುಕೊಂಡು ಸಂತೋಷ ಹಂಚಿಕೊಂಡಿದ್ದಾರೆ.

Published by:Divya D
First published: