HOME » NEWS » Entertainment » DIL BECHARA TRAILER RELEASE TOPIC IS TRENDING IN SOCIAL MEDIA AE

Dil Bechara Trailer: ದಿಲ್​ ಬೆಚಾರ ಚಿತ್ರದ ಟ್ರೇಲರ್ ಅನ್ನು ಟ್ರೆಂಡ್​ ಮಾಡಲು ಕಾತರರಾಗಿರುವ ಸುಶಾಂತ್ ಅಭಿಮಾನಿಗಳು..!

Dil Bechara Trailer: ದಿಲ್​ ಬೆಚಾರ ಚಿತ್ರದ ಟ್ರೇಲರ್​ ರಿಲೀಸ್​ ಆಗುತ್ತಿದ್ದಂತೆಯೇ 24 ಗಂಟೆಯೊಳಗೆ 10 ಕೋಟಿ ವೀಕ್ಷಣೆ ಹಾಗೂ ಒಂದು ಕೋಟಿ ಲೈಕ್ಸ್ ಸಿಗುವಂತೆ ಮಾಡಲು ಕಾಯುತ್ತಿರುವುದಾಗಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.

Anitha E | news18-kannada
Updated:July 6, 2020, 1:07 PM IST
Dil Bechara Trailer: ದಿಲ್​ ಬೆಚಾರ ಚಿತ್ರದ ಟ್ರೇಲರ್ ಅನ್ನು ಟ್ರೆಂಡ್​ ಮಾಡಲು ಕಾತರರಾಗಿರುವ ಸುಶಾಂತ್ ಅಭಿಮಾನಿಗಳು..!
ದಿಲ್​ ಬೇಚಾರ ಸಿನಿಮಾದ ಪೋಸ್ಟರ್​
  • Share this:
ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕಡೆಯ ಸಿನಿಮಾ 'ದಿಲ್ ಬೆಚಾರ 'ಸಿನಿಮಾದ ಟ್ರೇಲರ್​ ಇಂದು ರಿಲೀಸ್​ ಆಗಿಲಿದೆ. ಅದಕ್ಕಾಗಿ ಸುಶಾಂತ್​ ಅಭಿಮಾನಿಗಳು ಕಾತರರಾಗಿದ್ದಾರೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಅದನ್ನು ವೈರಲ್​ ಮಾಡಲು ಹಾಗೂ ಟ್ರೆಂಡ್​ ಮಾಡಲು ಕಾಯುತ್ತಿದ್ದಾರೆ.

ಸುಶಾಂತ್ ಸಿಂಗ್​ ಅಭಿನಯದ ಕೊನೆಯ ಸಿನಿಮಾ ಆಗಿರುವ ಕಾರಣಕ್ಕೆ ಅದನ್ನು ಒಟಿಟಿ ಮೂಲಕ ರಿಲೀಸ್ ಮಾಡದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ. ಒಲ್ಲದ ಮನಸ್ಸಿನಿಂದ ಈ ಸಿನಿಮಾವನ್ನು ಕಿರುತೆರೆಯಲ್ಲಿ ನೋಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು.

#DilBecharaTrailer okay so the day has arrived... Gonna be tough today.. 

ಇನ್ನು 'ದಿಲ್​ ಬೆಚಾರ' ಚಿತ್ರದ ಟ್ರೇಲರ್​ ರಿಲೀಸ್​ ಆಗುತ್ತಿದ್ದಂತೆಯೇ 24 ಗಂಟೆಯೊಳಗೆ 10 ಕೋಟಿ ವೀಕ್ಷಣೆ ಹಾಗೂ ಒಂದು ಕೋಟಿ ಲೈಕ್ಸ್ ಸಿಗುವಂತೆ ಮಾಡಲು ಕಾಯುತ್ತಿರುವುದಾಗಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.ಮತ್ತೆ ಕೆಲವರು ಈ ಲವ್ ಸ್ಟೋರಿಯನ್ನು ಬ್ಲಾಕ್​ಬಸ್ಟರ್ ಮಾಡಲು ಸಿದ್ಧರಿದ್ದೇವೆ ಎಂದೂ ಟ್ವೀಟ್​ ಮಾಡುತ್ತಿದ್ದಾರೆ. ಜೊತೆಗೆ ಈಗಾಗಲೇ ಟ್ರೇಲರ್ ಟಿಲೀಸ್ ವಿಷಯವೂ ಟ್ವಿಟರ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ.ಜುಲೈ 24ರಂದು 'ದಿಲ್​ ಬೆಚಾರ' ಸಿನಿಮಾ ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿದೆ. ಸಂಜನಾ ಸಂಘಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಈ ಸಿನಿಮಾವನ್ನು ಒಟಿಟಿ ಮೂಲಕ ರಿಲೀಸ್ ಮಾಡುತ್ತಿರುವುದು ಅಭಿಮಾನಿಗಳಿಗೆ ಕೊಂಚವೂ ಇಷ್ಟವಿಲ್ಲ.

Rashmika Mandanna: ಪೋಸ್​ ಕೊಡಲು ಹೆದರುವ ರಶ್ಮಿಕಾ ಫೋಟೋಶೂಟ್​ಗಳಲ್ಲಿ ಕ್ಯಾಮೆರಾವನ್ನೇ ತಿಂದು ಬಿಡುವಂತೆ ಇರುತ್ತಾರಂತೆ..!

ಇದನ್ನೂ ಓದಿ: ಬೆಳಗೆದ್ದು ವ್ಯಾಯಾಮ ಮಾಡಲು ನಿಖಿಲ್​ಗೆ ಇವರೇ ಸ್ಫೂರ್ತಿಯಂತೆ: ಇಲ್ಲಿದೆ ವಿಡಿಯೋ..!
Published by: Anitha E
First published: July 6, 2020, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading