Dil Bechara Trailer Out: ‘ದಿಲ್ ಬೆಚಾರ‘ ಟ್ರೇಲರ್ ಔಟ್; ಅಭಿಮಾನಿಗಳ ಕಣ್ಣಂಚು ಒದ್ದೆ ಮಾಡಿದ ಸುಶಾಂತ್ ಸಿಂಗ್​!

Sushanth Singh: ದಿಲ್​ ಬೆಚಾರ ಟ್ರೇಲರ್ ಬಿಡುಗಡೆಗೊಂಡ 30 ನಿಮಿಷದಲ್ಲಿ 4 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. 41 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್​ ಬರೆದಿದ್ದಾರೆ. ಆ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಟ್ರೇಲರ್​​ ದಾಖಲೆ ಬರೆದಿದೆ. ಅನೇಕರು ‘ದಿಲ್​ ಬೆಚಾರ’ ಟ್ರೇಲರ್​ನಲ್ಲಿ ಸುಶಾಂತ್​ ಸಿಂಗ್​ ಅವರ ಕಣ್ಣು, ನಗುವನ್ನು ಮರೆಯಲಾಗುತ್ತಿಲ್ಲ ಎಂದು ಕಾಮೆಂಟ್​ ಬರೆದಿದ್ದಾರೆ. ಫಾಕ್ಸ್​​ ಸ್ಟಾರ್​ ಹಿಂದಿ ಯ್ಯೂಟೂಬ್​ ಖಾತೆ ‘ದಿಲ್​ ಬೆಚಾರ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದೆ.

ದಿಲ್​ ಬೆಚಾರ

ದಿಲ್​ ಬೆಚಾರ

 • Share this:
  ಬಾಲಿವುಡ್​​ ನಟ ಸುಶಾಂತ್​ ಸಿಂಗ್​ ರಜಪೂತ್​ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೆಚಾರ’ ಟ್ರೇಲರ್​ ಇಂದು ಯ್ಯೂಟೂಬ್​ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳಿಂದ ಅಧಿಕ ವೀಕ್ಷಣೆ ಕಂಡು ದಾಖಲೆಯನ್ನು ಬರೆದಿದೆ.

  ದಿಲ್ ಬೆಚಾರ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ಗೆ ನಾಯಕಿಯಾಗಿ ಸಂಜನಾ ಸಂಘಿ ನಟಿಸಿದ್ದಾರೆ. ಕ್ಯಾನ್ಸರ್​ ರೋಗಿಯಾಗಿರುವ ಅವರಿಬ್ಬರ ನಡುವಿನಲ್ಲಿ ಚಿಗುರೊಡೆಯುವ ಮುದ್ದಾದ ಪ್ರೀತಿಯನ್ನು ಟ್ರೇಲರ್​ನಲ್ಲಿ ಭಿನ್ನವಾಗಿ ತೋರಿಸಲಾಗಿದೆ. ಜೊತೆಗೆ ಪ್ಯಾರೀಸ್​ನಲ್ಲೂ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

  ದಿಲ್​ ಬೆಚಾರ ಟ್ರೇಲರ್ ಬಿಡುಗಡೆಗೊಂಡ 30 ನಿಮಿಷದಲ್ಲಿ 4 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. 41 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್​ ಬರೆದಿದ್ದಾರೆ. ಆ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಟ್ರೇಲರ್​​ ದಾಖಲೆ ಬರೆದಿದೆ. ಅನೇಕರು ‘ದಿಲ್​ ಬೆಚಾರ’ ಟ್ರೇಲರ್​ನಲ್ಲಿ ಸುಶಾಂತ್​ ಸಿಂಗ್​ ಅವರ ಕಣ್ಣು, ನಗುವನ್ನು ಮರೆಯಲಾಗುತ್ತಿಲ್ಲ ಎಂದು ಕಾಮೆಂಟ್​ ಬರೆದಿದ್ದಾರೆ. ಫಾಕ್ಸ್​​ ಸ್ಟಾರ್​ ಹಿಂದಿ ಯ್ಯೂಟೂಬ್​ ಖಾತೆ ‘ದಿಲ್​ ಬೆಚಾರ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದೆ.

  ಅಂದಹಾಗೆ, ಈ ಸಿನಿಮಾ 2014ರಲ್ಲಿ ಹಾಲಿವುಡ್​ನಲ್ಲಿ ತೆರೆಕಂಡ ‘ದಿ ಫಾಲ್ಡ್​​ ಇನ್​ ಅವರ್​ ಸ್ಟಾರ್‘​ ಚಿತ್ರದ ರಿಮೇಕ್​. ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಹಿಂದಿಯಲ್ಲಿ ಮುಖೇಶ್​ ಛಾಬ್ರಾ ಅವರು ಸುಶಾಂತ್​ ಸಿಂಗ್​ ಮತ್ತು ಸಂಜನಾ ಸಾಂಘಿಯನ್ನು ಹಾಕಿಕೊಂಡು ಈ ಸಿನಿಮಾಗೆ ನಿರ್ದೆಶನ ಮಾಡಿದ್ದಾರೆ. ಆದರೆ ದುಃಖದ ವಿಚಾರವೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡು ಬದುಕು ಮುಗಿಸಿದ್ದಾರೆ. ಸಂಜನಾ ಸಾಂಘಿ ‘ದಿಲ್​ ಬೆಚಾರ’ ಸಿನಿಮಾದ ಮೂಲಕ ಬಾಲಿವುಡ್​ಗೆ ಮೊದಲ ಪಾದಾರ್ಪಾಣೆ ಮಾಡುತ್ತಿದ್ದಾರೆ. ನಟ ಸೈಫ್​ ಆಲಿ ಖಾನ್ ಕೂಡ ಇದರಲ್ಲಿ ನಟಿಸಿದ್ದಾರೆ.  ಚಿತ್ರತಂಡ ‘ದಿಲ್​ ಬೆಚಾರ‘ ಸಿನಿಮಾವನ್ನು ಹಾಟ್​+ಡಿಸ್ನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆಗೆ ಬಾಲಿವುಡ್​ನ ಅನೇಕ ನಟ-ನಟಿಯರು ಸಾಥ್​ ಕೊಟ್ಟಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ‘ದಿಲ್​ ಬೆಚಾರ’ ಸಿನಿಮಾ ಪೋಸ್ಟರ್​ ಹಾಕುವ ಮೂಲಕ ಪ್ರಚಾರ​ ಮಾಡುತ್ತಿದ್ದಾರೆ.

  ಜುಲೈ 24 ರಂದು ‘ದಿಲ್​ ಬೆಚಾರ’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ಸುಶಾಂತ್​ ಸಿಂಗ್​ಗೆ ಗೌರವ ಸೂಚಿಸುವ ಸಲುವಾಗಿ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶ ನೀಡಿದೆ.

   
  Published by:Harshith AS
  First published: