Dil Bechara Movie Review: ಕಣ್ಣೀರಿನ ಜೊತೆ ನಗು ಮೂಡಿಸುತ್ತೆ ಸುಶಾಂತ್​ ಅಭಿನಯದ ಕೊನೆಯ ಸಿನಿಮಾ ದಿಲ್​ ಬೆಚಾರ..!

Dil Bechara Movie Review: ಏಕ್​ ತಾ ರಾಜ... ಏಕ್​ ತಿ ರಾಣಿ ದೋ ನೋ ಮರ್​ಗಯೆ ಕತಮ್​ ಕಹಾನಿ.... ಇದು ಬಹಳ ಹಿಂದಿನಿಂದಲೂ ಕೇಳುತ್ತಿರುವ ರಾಜ-ರಾಣಿಯ ಕತೆ. ಇಂತಹ ಕತೆಗಳು ಯಾರಿಗೂ ಇಷ್ಟವಾಗೋದಿಲ್ಲ.  ಆದರೆ, ಈ ಕತೆಗೆ ವಿರುದ್ಧವಾಗಿದೆ ಈ ಮ್ಯಾನಿ ಹಾಗೂ ಕಿಝಿ ಲವ್​ ಸ್ಟೋರಿ.

Anitha E | news18-kannada
Updated:July 25, 2020, 12:41 PM IST
Dil Bechara Movie Review: ಕಣ್ಣೀರಿನ ಜೊತೆ ನಗು ಮೂಡಿಸುತ್ತೆ ಸುಶಾಂತ್​ ಅಭಿನಯದ ಕೊನೆಯ ಸಿನಿಮಾ ದಿಲ್​ ಬೆಚಾರ..!
ದಿಲ್​ ಬೇಚಾರ ಸಿನಿಮಾದ ಪೋಸ್ಟರ್​
  • Share this:
ಸಿನಿಮಾ: ದಿಲ್​ ಬೆಚಾರ
ಭಾಷೆ: ಹಿಂದಿ

ನಿರ್ದೇಶಕ: ಮುಕೇಶ್​ ಛಾಬ್ರ
ತಾರಾಬಳಗ: ಸುಶಾಂತ್​ ಸಿಂಗ್​ ರಜಪೂತ್​, ಸಂಜನಾ ಸಂಘಿ, ಸೈಫ್​ ಅಲಿಖಾನ್​
ಸಂಗೀತ: ಎ.ಆರ್​. ರೆಹಮಾನ್​
ರೇಟಿಂಗ್​: 5ಕ್ಕೆ 3.5

ಅನಿತಾ .ಈ,

ಸುಶಾಂತ್​ ಅಭಿನಯದ ಕಡೆಯ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕಡೆಗೂ ನೆಚ್ಚಿನ ನಟ ನಟಿಸಿರುವ 'ದಿಲ್​ ಬೆಚಾರ' ​ ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ನಿನ್ನೆ ಸಂಜೆ ಅವರದಾಯಿತು. ಚಿತ್ರವನ್ನು ನೋಡಿದ ಅಭಿಮಾನಿಗಳು ಸುಶಾಂತ್​ ಅಭಿನಯಕ್ಕೆ ಮನಸೋತಿದ್ದಾರೆ.

ಸುಶಾಂತ್​ ಅಭಿನಯದ ಈ ಸಿನಿಮಾ ನೋಡಲು ಅವರ ಅಭಿಮಾನಿಗಳಿಗೆ ನಿಜಕ್ಕೂ ಗಟ್ಟಿ ಮನಸ್ಸೇ ಬೇಕು. ಮ್ಯಾಜಿಕಲ್​ ಸ್ಮೈಲ್​ ಕೊಡುತ್ತಾ ಕಾಣಿಸಿಕೊಳ್ಳುವ ನಟ, ವಾಸ್ತವದಲ್ಲಿ ಬದುಕಿಲ್ಲ ಅನ್ನೋ ಸತ್ಯ ಮನಸ್ಸನ್ನು ಕೊರೆಯುತ್ತಿರುತ್ತದೆ.ಏಕ್​ ತಾ ರಾಜ... ಏಕ್​ ತಿ ರಾಣಿ ದೋ ನೋ ಮರ್​ಗಯೆ ಕತಮ್​ ಕಹಾನಿ.... ಇದು ಬಹಳ ಹಿಂದಿನಿಂದಲೂ ಕೇಳುತ್ತಿರುವ ರಾಜ-ರಾಣಿಯ ಕತೆ. ಇಂತಹ ಕತೆಗಳು ಯಾರಿಗೂ ಇಷ್ಟವಾಗೋದಿಲ್ಲ.  ಆದರೆ, ಈ ಕತೆಗೆ ವಿರುದ್ಧವಾಗಿದೆ ಈ ಮ್ಯಾನಿ ಹಾಗೂ ಕಿಝಿ ಲವ್​ ಸ್ಟೋರಿ. ಸುಶಾಂತ್​ ಸಿಂಗ್​ ರಜಪೂತ್​ ಮ್ಯಾನಿ, ಅಂದರೆ ಇಮ್ಯಾನುಯಲ್​ ರಾಜ್​ಕುಮಾರ್​ ಜೂನಿಯರ್​ ಆದರೆ, ಸಂಜನಾ ಅವರು ಕಿಝಿ ಬಸು ಆಗಿ ನಟಿಸಿದ್ದಾರೆ.

ಥೈರಾಯ್ಡ್​ ಕ್ಯಾನ್ಸ್​ರ್​ನಿಂದ ಬಳಲುತ್ತಿರುವ ನಾಯಕಿಗೆ ಸುಶಾಂತ್​ಗೂ ಮೊದಲು ಓರ್ವ ಜೊತೆಗಾರನಿರುತ್ತಾರೆ. ಅವನೇ ಪುಷ್ಪಿಂಧರ್​.  ಅದು ಮತ್ತಾರೂ ಅಲ್ಲ, ನಾಯಕಿಗೆ ಸದಾ ಆಕ್ಸಿಜನ್​ ಪೂರೈಸುವ ಸಿಲಿಂಡರ್​. ಸದಾ ಹೆಗಲಿಗೆ ಆಕ್ಸಿಜನ್​ ಸಿಲಿಂಡರ್​ ತೂಗಿಕೊಂಡು ಜೀವಿಸುತ್ತಿರುತ್ತಾಳೆ ಕಿಝಿ. ನಾಯಕ ಮ್ಯಾನಿ, ಸಹ ಮೂಳೆ ಸಂಬಂಧಿತ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುತ್ತಾರೆ.

Stills of Sushant Singh Rajput From His Last Performed Song in Dil Bechara
ಎ.ಆರ್ ರೆಹಮಾನ್​ ಸಂಗೀತ ನಿರ್ದೇಶನದ ಹಾಗೂ ಸುಶಾಂತ್ ಸಿಂಗ್​ ಅಭಿನಯದ 'ದಿಲ್​ ಬೆಚಾರ' ಚಿತ್ರದ ಟೈಟಲ್​ ಸಾಂಗ್​ನ ವಿಡಿಯೋದ ಒಂದು ಚಿತ್ರ.


ಬೆಳಗಿನಿಂದ ರಾತ್ರಿಯವರೆಗೆ ಮಾತ್ರೆ, ಔಷಧಿ, ಕಿಮೋ ಅಂತ ಜೀವನವೇ ಸಾಕು ಸಾಕಿರುವ ಸೀರಿಯಲ್​ ಕಿಸ್ಸರ್​ ಕಿಝಿ ಜೀವನದಲ್ಲಿ ಸೀರಿಯಲ್​ ಕಿಲ್ಲರ್​ ಮ್ಯಾನಿ ಎಂಟ್ರಿ ಆಗುತ್ತದೆ. ಈ ಸೀರಿಯಲ್​ ಕಿಲ್ಲರ್ ಹಾಗೂ ಸೀರಿಯಲ್​ ಕಿಸ್ಸರ್​ ಕತೆ ಸಿನಿಮಾ ನೋಡಿದರೆ ತಿಳಿಯಲಿದೆ.

ಕಿಝಿ ಹಾಗೂ ಮ್ಯಾನಿಯ ಸ್ನೇಹ ಜೆಮ್​ಶೆಡ್​ಪುರದಲ್ಲಿ ಆರಂಭವಾಗಿ ಪ್ಯಾರಿಸ್​ನಲ್ಲಿ ಪ್ರೇಮವಾಗಿ ಬದಲಾಗುತ್ತದೆ. ಈ ಜರ್ನಿಯಲ್ಲಿ ಈ ಜೋಡಿಯ ಜೀವನದಲ್ಲಿ ಎದುರಾಗುವ ತಿರುವುಗಳು ಹಾಗೂ ಕಿಝಿ ಮತ್ತು ಅವರ ಪೋಷಕರ ನಡುವಿನ ಕೆಲ ಸನ್ನಿವೇಶಗಳು ನಿಜಕ್ಕೂ ಮನಮುಟ್ಟುವಂತಿವೆ.

Stills of Sushant Singh Rajput From His Last Performed Song in Dil Bechara
ಸುಶಾಂಗ್​ ಸಿಂಗ್​


ಇನ್ನು, ಈ ಚಿತ್ರದಲ್ಲಿ ಆಗಾಗ ತಲೈವಾ ರಜಿನಕಾಂತ್​ ಹೆಸರು ಬಂದು ಹೋಗುತ್ತದೆ. ಕಾರಣ ನಾಯಕ ರಜಿನಿಕಾಂತ್​ರ ದೊಡ್ಡ ಅಭಿಮಾನಿಯಾಗಿರುತ್ತಾನೆ. ಜೊತೆಗೆ ಈ ಕ್ರೇಜಿ ಲವರ್​ಗಳ ಫೇವರಿಟ್​ ಸೆರಿ. ತಮಿಳಿನಲ್ಲಿ ಸೆರಿ ಅಂದರೆ ಓಕೆ ಎಂದರ್ಥ. ಈ ಪದ ಈ ಪ್ರೇಮಿಗಳ ಜೀವನದಲ್ಲಿ ಬಂದು ಹೋಗುವಾಗೆಲ್ಲ ಕಣ್ಣೀರು ತರಿಸುತ್ತದೆ.

ಜೀವನದ ಪ್ರತಿ ಕ್ಷಣವನ್ನೂ ಸಂಭ್ರಮಿಸುತ್ತಾ ಜೀವಿಸುವ ಮ್ಯಾನಿ, ತನ್ನ ದೊಡ್ಡ ಕನಸನ್ನು ನನಸಾಗಿಸಿಕೊಳ್ಳುವುದನ್ನು ಬಿಟ್ಟು, ಪ್ರೀತಿಸಿದ ಹುಡುಗಿಯ ಕನಸನ್ನು ನನಸು ಮಾಡುವುದರಲ್ಲಿ ಖುಷಿ ಕಾಣುತ್ತಾನೆ. ಆದರೆ, ಈ ಲವ್​ ಸ್ಟೋರಿ ಯಾರೂ ಊಹಿಸದ ತಿರುವು ಪಡೆಯುವುದೇ ಪ್ಯಾರಿಸ್​ನಲ್ಲಿ. ಅದು ಕಿಝಿ ಜೀವನದ ಉದ್ದೇಶವನ್ನೇ ಬದಲಿಸುತ್ತದೆ.

Celebrity photographer Dabboo Ratnani shared exclusive photos of Sushant Sing Rajput in his Instagram
ಸುಶಾಂತ್​ ಸಿಂಗ್​


ಸುಶಾಂತ್​ ಸಿಂಗ್​ ತಮ್ಮ ನಿಜ ಜೀವನದಲ್ಲೂ ಜಿಂದಾ ದಿಲ್​ ಅಂದರೆ ಸದಾ ನಗುತ್ತಾ, ಎಲ್ಲರನ್ನೂ ನಗಿಸುತ್ತಾ, ಪ್ರತಿ ಕ್ಷಣವನ್ನೂ ಖುಷಿಯಿಂದ ಸಂಭ್ರಮಿಸುತ್ತಿದ್ದ ನಟ. ಈ ಸಿನಿಮಾದಲ್ಲೂ ಸುಶಾಂತ್​ ಅಂತಹದ್ದೇ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಟಿ ಸಂಜನಾ ಸಂಘಿ ಈ ಹಿಂದೆಯೂ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಾಯಕಿಯಾಗಿ ಇದು ಅವರ ಮೊದಲ ಸಿನಿಮಾ. ತೆರೆ ಮೇಲೆ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

Dil Bechara
ದಿಲ್​  ಬೆಚಾರ


ಈ ಸಿನಿಮಾದ ನಿರ್ದೇಶಕ ಮುಕೇಶ್ ಛಾಬ್ರ ಅವರ ಚೊಚ್ಚಲ ನಿರ್ದೇಶನದ ಚಿತ್ರ ಈ 'ದಿಲ್​ ಬೆಚಾರ'. ಅದಕ್ಕೂ ಮೊದಲು ಮುಕೇಶ್​ ಕಾಸ್ಟಿಂಗ್​ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕನ ಕೆಲಸಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಾನ್​ ಗ್ರೀನ್​ ಅವರ 'ಫ್ಲಾಂಟ್​ ಇನ್​ ಅವರ್​ ಸ್ಟಾರ್ಸ್' ಕಾದಂಬರಿ ಆಧಾರಿತ ಚಿತ್ರವಾಗಿದೆ. ಈಗಾಗಲೇ ಇದು ಹಾಲಿವುಡ್​ನಲ್ಲೂ ತೆರೆ ಮೇಲೆ ಬಂದಿದೆ. ಸಿನಿಮಾ ಕತೆ ಬರೆದಿರುವುದು ಶಶಾಂಕ್​ ಖೇತಾನ್​​ ಹಾಗೂ ಸುಪ್ರೀತಂ ಸೇನ್​ ಗುಪ್ತಾ. ಹಾಲಿವುಡ್​ ಸಿನಿಮಾ ಈಗಾಗಲೇ ತೆರೆಕಂಡಿದ್ದರೂ, ಈ ಕತೆಯನ್ನು ಭಾರತೀಯ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬದಲಾಯಿಸಿದ್ದಾರೆ.

Here is the gimps of Sushant Singh starrer Dil Bechara Title Track teaser
ದಿಲ್​ ಬೆಚಾರ ಚಿತ್ರದ ಪೋಸ್ಟರ್​


ವಿಶೇಷ ಪಾತ್ರದಲ್ಲಿ ಕೆಲವೇ ಕೆಲವು ನಿಮಿಷಗಳು ಮಾತ್ರ ಕಾಣಿಸಿಕೊಳ್ಳುವ ಸಂಗೀತಗಾರನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದಾರೆ. ಪ್ರೀತಿಯನ್ನು ಕಳೆದುಕೊಂಡು ಕೊಟ್ಟ ಮಾತಿಗೆ ಕಟ್ಟುಬಿದ್ದ ಪ್ರೇಮಿ ಪಾತ್ರದಲ್ಲಿ ಸೈಫ್​ ಕೆಲ ಸಮಯದ ಬಂದು ಹೋಗುತ್ತಾರೆ.

ಈ ಸಿನಿಮಾದ ಎಡಿಟಿಂಗ್​ ವಿಷಯಕ್ಕೆ ಬಂದರೆ ಕೊಂಚ ನಿರಾಶೆಯಾಗುವುದು ಖಂಡಿತ. ಮನಮುಟ್ಟುವಂತಹ ಕೆಲವೊಂದು ಸನ್ನಿವೇಶಗಳನ್ನು ತುಂಬ ವೇಗವಾಗಿ ಓಡಿಸಲಾಗಿದೆ. ಕೆಲವು ದೃಶ್ಯಗಳನ್ನು ಪ್ರೇಕ್ಷಕರು ಹೆಚ್ಚಿನ ಸಮಯ ಕೊಟ್ಟು ನೋಡಲು ಬಯಸುತ್ತಾರೆ. ಆದರೆ ಆ ದೃಶ್ಯಗಳಿಗೇ ಕತ್ತರಿ ಹಾಕಲಾಗಿದೆ.

ಇದನ್ನೂ ಓದಿ: Pawan Kalyan: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪವನ್​ ಕಲ್ಯಾಣ್​: ವೈರಲ್​ ಆಗುತ್ತಿದೆ ಫೋಟೋ..!

ಸಂಗೀತದ ವಿಷಯಕ್ಕೆ ಬಂದರೆ, ಟೈಟಲ್​ ಟ್ರ್ಯಾಕ್​ ಬಿಡುಗಡೆಯಾದಾಗ ಇದು ಬೋರಿಂಗ್​ ಹಾಡು, ಇಷ್ಟು ಸ್ಲೋ ಇದೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ ಎ.ಆರ್ ರೆಹಮಾನ್​ ಅವರ ಸಂಗೀತ ಯಾವಾಗಲೂ ಸ್ಲೋ ಪಾಯ್ಸನ್​ ಇದ್ದಂತೆ. ಅದು ಮೆಲ್ಲನೆ ಏರುತ್ತದೆ. ಇಲ್ಲೂ ಸಹ ಸಿನಿಪ್ರಿಯರಿಗೆ ಹಾಗೂ ಸಂಗೀತ ಪ್ರಿಯರಿಗೆ ಇಷ್ಟವಾಗುವ ಸಖತ್​ ಹಾಡುಗಳಿವೆ.

ಮ್ಯಾನಿ ಹಾಗೂ ಕಿಝಿ ಲವ್​ ಸ್ಟೋರಿ ಪ್ರೇಕ್ಷಕನ ಕಣ್ಣಲ್ಲಿ ನೀರು ಹಾಗೂ ಮುಖದ ಮೇಲೆ ಒಂದು ಪುಟ್ಟ ಚಿರುನಗೆ ಮೂಡಿಸುತ್ತದೆ. ಹೃದಯ ಕೊಂಚ ಭಾರವೆನಿಸಿದರೂ, ಜೀವನದ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ 'ದಿಲ್​ ಬೆಚಾರ'.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಸುಶಾಂತ್​ ನಟನೆಯ ದಿಲ್​ ಬೆಚಾರ: ಐಎಂಡಿಬಿ ರೇಟಿಂಗ್​ನಲ್ಲಿ ಸಿಕ್ತು 10/10
Published by: Anitha E
First published: July 25, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading