ಸೈರಾ ಕೋಟಿ ಲೆಕ್ಕಾಚಾರ ಶುರು: ಬಂಪರ್ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಡೀಲ್

Sye Raa Narasimha Reddy: ಈ ಐತಿಹಾಸಿಕ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಅಮಿತಾಭ್ ಬಚ್ಚನ್ ರಾಜ ಗುರು ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ಪ್ರಾಂತ್ಯದ ರಾಜನ ರೋಲ್​ನಲ್ಲಿ ನಟಿಸಿದ್ದಾರೆ.

zahir | news18-kannada
Updated:September 10, 2019, 9:07 PM IST
ಸೈರಾ ಕೋಟಿ ಲೆಕ್ಕಾಚಾರ ಶುರು: ಬಂಪರ್ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಡೀಲ್
Syeraa
  • Share this:
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ 'ಸೈರಾ ನರಸಿಂಹಾ ರೆಡ್ಡಿ' ಬಿಡುಗಡೆಗೂ ಮುನ್ನವೇ ಕೋಟಿ ಗಳಿಕೆ ಲೆಕ್ಕಾಚಾರ ಪ್ರಾರಂಭಿಸಿದೆ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಸಖತ್ ಸೌಂಡ್ ಮಾಡಿರುವ 'ಸೈರಾ' ಡಿಜಿಟಲ್ ರೈಟ್ಸ್ ಕೋಟಿ ಮೊತ್ತಕ್ಕೆ ಬಿಕರಿಯಾಗಿದೆ. ಅಂದರೆ ಬರೋಬ್ಬರಿ 40 ಕೋಟಿ ರೂ. ನೀಡಿ ಅಮೆಜಾನ್ ಪ್ರೈಮ್ ಸ್ವಾತಂತ್ರ್ಯ ಹೋರಾಟಗಾರನ ಕಥೆಯ ಚಿತ್ರದ ಡಿಜಿಟಲ್ ಹಕ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೆಗಾ ಕುಡಿ ರಾಮ್ ಚರಣ್ ತೇಜ ಈ ಚಿತ್ರಕ್ಕೆ 270 ಕೋಟಿ ಬಂಡವಾಳ ಹೂಡಿದ್ದು, ಇದೀಗ ಬಿಡುಗಡೆಗೆ ಮುನ್ನವೇ ಗಳಿಕೆ ಆರಂಭಿಸಿದೆ. ಹಾಗೆಯೇ ಈ ಚಿತ್ರವು ಮೊದಲ ವಾರದಲ್ಲೇ ನೂರು ಕೋಟಿ ಕ್ಲಬ್ ಸೇರಲಿದೆ ಎಂಬ ಮಾತುಗಳು ಕಾಲಿವುಡ್​ನಲ್ಲಿ ಕೇಳಿ ಬರುತ್ತಿದೆ.

ಇಂತಹದೊಂದು ಬಿಗ್ ಮೊತ್ತ ಚಿತ್ರಕ್ಕೆ ಸಿಕ್ಕಿರುವುದು ಸೈರಾ ಮೇಲಿರುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸುರೇಂದರ್ ರೆಡ್ಡಿ ನಿರ್ದೇಶಿಸಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಉಳಿದಿದ್ದು, ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದೆ.

ಭಾರೀ ನಿರೀಕ್ಷೆ ಹುಟ್ಟುಹಾಕಿರುವ 'ಸೈರಾ ನರಸಿಂಹಾ ರೆಡ್ಡಿ' ಅಕ್ಟೋಬರ್ 2 ರಂದು ಐದು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಈ ಐತಿಹಾಸಿಕ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಅಮಿತಾಭ್ ಬಚ್ಚನ್ ರಾಜ ಗುರು ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ಪ್ರಾಂತ್ಯದ ರಾಜನ ರೋಲ್​ನಲ್ಲಿ ನಟಿಸಿದ್ದಾರೆ.

ಇನ್ನು ಲೇಡಿ ಸೂಪರ್​ಸ್ಟಾರ್ ನಯನತಾರಾ  ರಾಣಿಯಾಗಿ ಎಂಟ್ರಿ ಕೊಡಲಿದ್ದಾರೆ. ಅದೇ ರೀತಿ ನಿಹಾರಿಕಾ ಹಾಗೂ ವಿಜಯ್ ಸೇತುಪತಿ ಸ್ವಾತಂತ್ರ ಹೋರಾಟಕ್ಕೆ ಕೈ ಜೋಡಿಸಿದ ಆದಿವಾಸಿ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.ಮಿರಮಿರ ಮಿಂಚುವ ಮಿಲ್ಕಿ ಬ್ಯೂಟಿ: ಪೈಲ್ವಾನ್ ಪೋರಿಯ ಈ ಲುಕ್​ ನೋಡಿದ್ರೆ ಹೊಡೆಯುತ್ತೆ ಕಣ್ಣು ಚಪ್ಪಾಳೆ
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ