• Home
  • »
  • News
  • »
  • entertainment
  • »
  • Bollywood: ಜಯಾ ಬಚ್ಚನ್​ನ ಮಿಮಿಕ್ ಮಾಡಿದ ಡಿಜಿಟಲ್ ಕ್ರಿಯೇಟರ್! ನೀವು ನೋಡಿದ್ರೆ ನಗೋದು ಗ್ಯಾರಂಟಿ

Bollywood: ಜಯಾ ಬಚ್ಚನ್​ನ ಮಿಮಿಕ್ ಮಾಡಿದ ಡಿಜಿಟಲ್ ಕ್ರಿಯೇಟರ್! ನೀವು ನೋಡಿದ್ರೆ ನಗೋದು ಗ್ಯಾರಂಟಿ

ಜಯಾ ಬಚ್ಚನ್​

ಜಯಾ ಬಚ್ಚನ್​

ಜಯಾ ಬಚ್ಚನ್ ಅವರು ಇತ್ತೀಚೆಗೆ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ನಡೆದುಕೊಂಡು ಹೋಗುವಾಗ ಫೋಟೋಗ್ರಾಫರ್​ ಗಳಿಂದ ತುಂಬಾನೇ ಕೋಪಗೊಂಡರು

  • Share this:

ಕಳೆದ ವಾರ ಯಾವುದೋ ಒಂದು ಸಂದರ್ಭದಲ್ಲಿ ತಮ್ಮ ಫೋಟೋ (Photo) ಗಳನ್ನು ಕ್ಲಿಕ್ಕಿಸಲು ತಮ್ಮ ಎದುರಿಗೆ ಬಂದ ಛಾಯಾಗ್ರಾಹಕರ (Photographers) ಬಗ್ಗೆ ತಮಗಿರುವ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಿದ್ದರು ಬಾಲಿವುಡ್‌ನ ನಟಿ ಜಯಾ ಬಚ್ಚನ್ (Bollywood Jaya Bachchan) . ಆನಂತರ ಅವರು ಆಡಿದ ಮಾತುಗಳ ವೀಡಿಯೋ ಸಾಮಾಜಿಕ ಮಾಧ್ಯಮ (Social Media) ದಲ್ಲಿ ಜೋರಾಗಿಯೇ ಹರಿದಾಡಿದ ನಂತರ ಕೆಲವು ನಟಿಯರು ‘ಪಾಪ, ಛಾಯಾಗ್ರಾಹಕರಿಗೆ ಹೀಗೆಲ್ಲಾ ಅನ್ನಬಾರದಿತ್ತು’ ಅಂತೆಲ್ಲಾ ಹೇಳಿದ್ದನ್ನು ನಾವು ನೋಡಿದ್ದೆವು.


ಫೋಟೋಗ್ರಾಫರ್ ಗಳ ಮೇಲೆ ನಟಿ ಜಯಾ ಬಚ್ಚನ್ ಗೆ ಕೋಪ ಏಕೆ?


ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಅವರು ಇತ್ತೀಚೆಗೆ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ನಡೆದುಕೊಂಡು ಹೋಗುವಾಗ ಫೋಟೋಗ್ರಾಫರ್​ ಗಳಿಂದ ತುಂಬಾನೇ ಕೋಪಗೊಂಡರು. ರಾಜ್ಯಸಭಾ ಸಂಸದರು ಯಾರನ್ನೋ ತರಾಟೆಗೆ ತೆಗೆದುಕೊಂಡರು. "ನಿಮಗೆ ಸರಿಯಾಗಿ ಅರ್ಥವಾಗುತ್ತೆ... ನೀನು ಗ್ಯಾರೆಂಟಿ ಕೆಳಕ್ಕೆ ಬಿಳ್ತೀಯಾ" ಎಂದು ಹೇಳಿದ್ದರು.


ಇಷ್ಟೇ ಅಲ್ಲದೆ , ಬಚ್ಚನ್ ಅವರ ದೀಪಾವಳಿ ಪಾರ್ಟಿಯ ಸಮಯದಲ್ಲಿ, ನಟರ ಫೋಟೋಗಳನ್ನು ಕ್ಲಿಕ್ಕಿಸಲು ಬಚ್ಚನ್ ನಿವಾಸದ ಹೊರಗೆ ಜಮಾಯಿಸುತ್ತಿದ್ದಂತೆ ಪಾಪರಾಜಿಗಳನು ಟೀಕಿಸಿದ್ದರು ಎಂದು ವರದಿಯಾಗಿತ್ತು.


ಸದಾ ಕೋಪದಲ್ಲೇ ಇರ್ತಾರೆ ಜಯಾ ಬಚ್ಚನ್!


ತನ್ನ ಮೊಮ್ಮಗಳು ನವ್ಯಾ ಮತ್ತು ಮಗಳು ಶ್ವೇತಾ ಅವರೊಂದಿಗೆ ಪಾಡ್ಕಾಸ್ಟ್ 'ವಾಟ್ ದಿ ಹೆಲ್ ನವ್ಯಾ' ಗಾಗಿ ಮಾತನಾಡುವಾಗ, ಅವರ ಬಗ್ಗೆ ಕೋಪಗೊಂಡರು. "ನಾನು ಅವರನ್ನು ದ್ವೇಷಿಸುತ್ತೇನೆ, ತಮ್ಮ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಆ ಸುದ್ದಿಗಳನ್ನ ಮಾರಾಟ ಮಾಡುವ ಮೂಲಕ ಅವರ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಜನರನ್ನು ನಾನು ತಿರಸ್ಕಾರ ಮಾಡುತ್ತೇನೆ. ಅಂತಹ ಜನರ ಬಗ್ಗೆ ನನಗೆ ಅಸಹ್ಯವಿದೆ. ನಿಮಗೆ ಇಂತಹ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವೇ” ಎಂದು ಕೇಳಿದ್ದರು.


ಇದನ್ನೂ ಓದಿ: Pushpa ಸ್ಟಾರ್​ ನಟ ಅಲ್ಲು ಅರ್ಜುನ್​​ ಮಡದಿ ತೊಟ್ಟ ಈ ಸೀರೆ ಬೆಲೆ ಊಹೆ ಮಾಡಿ!


ಜಯಾ ಅವರ ಸ್ಟೈಲ್ ಮಿಮಿಕ್ ಮಾಡಿದ ಡಿಜಿಟಲ್ ಕ್ರಿಯೇಟರ್!


ಈಗ ಇದೆಲ್ಲವನ್ನು ನೋಡಿ, ಒಬ್ಬ ಮಹಿಳೆ ಜಯಾ ಬಚ್ಚನ್ ಅವರನ್ನ ಎಷ್ಟು ಚೆನ್ನಾಗಿ ಮಿಮಿಕ್ ಮಾಡಿದ್ದಾರೆ ಅಂತ ನೀವು ನೋಡಿದರೆ ಬಿದ್ದು ಬಿದ್ದು ನಗ್ತೀರಾ. ಡಿಜಿಟಲ್ ಕ್ರಿಯೇಟರ್ ಆದ ಅನಲೀಸೆರೆಜೊ ಅವರು ಜಯಾ ಅವರನ್ನು ಮಿಮಿಕ್ ಮಾಡಿ, ಜನರನ್ನು ಆನ್ಲೈನ್ ನಲ್ಲಿ ನಗಸಿದ್ದೆ ನಗಸಿದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ.ಈ ನಟಿಯನ್ನು ಮಿಮಿಕ್ ಮಾಡುತ್ತಾ, ಜಯಾ ಬಚ್ಚನ್ ಅವರು ಮಾಡಿದ ಹಲವಾರು ಕಾಮೆಂಟ್ ಗಳನ್ನು ಈ ಡಿಜಿಟಲ್ ಕ್ರಿಯೇಟರ್ ಮಿಮಿಕ್ ಮಾಡಿದ್ದಾರೆ. ಅದೇ ರೀತಿಯ ಆಭರಣಗಳನ್ನು ಧರಿಸಿ, ಬಿಳಿ ಬಣ್ಣದ ಕೂದಲನ್ನು ಹೊಂದಿರುವ ಅನೀಲಿ "ನೀವು ಯಾರು? ನೀವು ಮಾಧ್ಯಮದಿಂದ ಬಂದಿದ್ದೀರಾ? ಯಾರು? ಏನು? ನಿಮಗೆ ಸರಿಯಾಗಿ ಅರ್ಥವಾಗುತ್ತದೆ. ನೀವು ಬಿದ್ದು ಹೋಗುತ್ತೀರಿ ಎಂದು ನಾನು ಭಾವಿಸುತ್ತೇನೆ"ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬ್ರಹ್ಮಾಸ್ತ್ರ ಒಟಿಟಿ ಪ್ರಚಾರಕ್ಕೆ ರಣಬೀರ್ ನಕಾರ, ದೀಪಿಕಾ ತಮಾಷೆ ಮಾಡಿದ್ದೇಕೆ?


ಅವಳು ಜಯಾ ಅವರ ಹಿಂದಿನ ಕಾಮೆಂಟ್ ಗಳನ್ನು ಸಹ ಇದರಲ್ಲಿ ಸೇರಿಸಿದ್ದಾಳೆ "ಜಸ್ಟ್ ದೂರ ಹೋಗಿ" ಮತ್ತು "ನೀವು ಮಿಸ್ಟರ್ ಬಚ್ಚನ್ ಅವರಿಂದ ಈ ಪ್ರಶ್ನೆಯನ್ನು ಕೇಳಿ, ನಾನು ಬಚ್ಚನ್ ಕುಟುಂಬದ ವಕ್ತಾರಳಲ್ಲ. ಸ್ಮಾರ್ಟ್ ಆಗಿ ವರ್ತಿಸಬೇಡಿ" ಎಂದು ಅನೀಲಿ ಈ ವೀಡಿಯೋದಲ್ಲಿ ಹೇಳುವುದನ್ನು ನಾವು ನೋಡಬಹುದು. "ಜಯಾ ಬಚ್ಚನ್ ಎಂದರೆ ಮೂಡ್" ಎಂದು ವೀಡಿಯೋದಲ್ಲಿ ಪಠ್ಯವನ್ನು ಸೇರಿಸಲಾಗಿದೆ. "ಜಸ್ಟ್ ಫಾರ್ ಫನ್" ಎಂದು ಅನೀಲಿ ತನ್ನ ಪೋಸ್ಟ್ ಗೆ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.


ವೀಡಿಯೋ ಸಿಕ್ಕಾಪಟ್ಟೆ ವೈರಲ್


ಆರು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೋ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು 1.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ನೋಡುವುದನ್ನು ನಿಲ್ಲಿಸುತ್ತಿಲ್ಲ ಅಂತ ಹೇಳಬಹುದು.


ಡಿಜಿಟಲ್ ಕ್ರಿಯೇಟರ್ ಡಿಟ್ಟೋ ಜಯಾ ಅವರ ರೀತಿಯೇ ಮಾತಾಡಿದ್ದಾರೆ ಎಂದು ಅನೇಕರು ಹೇಳುತ್ತಾರೆ. ಬಳಕೆದಾರರೊಬ್ಬರು ಕಾಮೆಂಟ್ ಮಾಡಿ "ಇದು ಚೆನ್ನಾಗಿದೆ ನೋಡಿ ಬೇರೆವರೊಂದಿಗೆ ಹಂಚಿಕೊಳ್ಳಿ" ಎಂದು ಹೇಳಿದರೆ, ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ವೀಡಿಯೋವನ್ನು 10 ಬಾರಿ ನೋಡಿದೆ ಮತ್ತು ಪ್ರತಿ ಬಾರಿಯೂ ತಮಾಷೆಯಾಗಿದೆ" ಎಂದು ಹೇಳಿದರು.

Published by:ವಾಸುದೇವ್ ಎಂ
First published: