ತೆರೆಗೂ ಮುನ್ನವೇ ವಿದೇಶಗಳಲ್ಲಿ ಪ್ರೀಮಿಯರ್​ ಶೋ ಮುಗಿಸಿದ 'ಕಥೆಯೊಂದು ಶುರುವಾಗಿದೆ' ಸಿನಿಮಾ..!

news18
Updated:July 31, 2018, 12:48 PM IST
ತೆರೆಗೂ ಮುನ್ನವೇ ವಿದೇಶಗಳಲ್ಲಿ ಪ್ರೀಮಿಯರ್​ ಶೋ ಮುಗಿಸಿದ 'ಕಥೆಯೊಂದು ಶುರುವಾಗಿದೆ' ಸಿನಿಮಾ..!
news18
Updated: July 31, 2018, 12:48 PM IST
ನ್ಯೂಸ್18 ಕನ್ನಡ

ದಿಗಂತ್ ಈ ವಾರ ಒಳ್ಳೆ ಚಿತ್ರದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದಾರೆ. ಅವರು ಈಗೀಗ ಸಿನಿಮಾಗಳ ವಿಷಯದಲ್ಲಿ ತುಂಬಾ ಚೂಸಿಯಾಗಿದ್ದಾರೆ ಅಂತ 'ಕಥೆಯೊಂದು ಶುರುವಾಗಿದೆ' ಅನ್ನೋ ಸಿನಿಮಾನೆ ಹೇಳುತ್ತಿದೆ. ಈ ಸಿನಿಮಾ ಈ ವಾರ ಇಲ್ಲಿ ರಿಲೀಸಾಗಬೇಕಿದೆ ಆದ್ರೆ ಹೊರದೇಶಗಳಲ್ಲಿ ಇದರ ಪ್ರೀಮಿಯರ್ ಶೋ ಆಗಿದೆ.

ಅಲ್ಲೆಲ್ಲ ಸಿನಿಮಾ ನೋಡಿರೊ ಎಲ್ಲರೂ ಎಲ್ಲೋ ಒಂದು ಕಡೆ ಈ ಸಿನಿಮಾದ ಕಥೆ ನೈಜ ಜೀವನಕ್ಕೆ ಹತ್ತಿರವಾಗುತ್ತಿದೆ ಅಂದಿದ್ದಾರೆ. ಅಷ್ಟೇ ಅಲ್ಲ ಕಥೆ, ಮೇಕಿಂಗ್ ಹಾಗೂ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಸಿನಿಮಾ ನೋಡಿ ಹೊರಬಂದ ವಿದೇಶಿ ಕನ್ನಡಿಗ ಪ್ರೇಕ್ಷಕರ ಮಾತು. ಸಾಮಾನ್ಯಕ್ಕೆ ವಿದೇಶಿ ಕನ್ನಡಿಗರು, ಕನ್ನಡ ಸಿನಿಮಾಗಳನ್ನ ಅಷ್ಟು ಸುಲಭಕ್ಕೆ ಒಪ್ಪೋರಲ್ಲ. ಹೀಗೆ ಒಂದು ಚಿತ್ರವನ್ನ ನೋಡಿ ಬಂದ ಮೇಲೆ ಮುಕ್ತವಾಗಿ ಮಾತಾಡುತ್ತಾರೆ ಅಂದರೆ ಇದಕ್ಕೆ ಕಾರಣ ಈ ಸಿನಿಮಾದ ಕಥಾವಸ್ತು.

ಏನಪ್ಪಾ ಅಂಥಾ ಕಥಾವಸ್ತು ಅಂದ್ರೆ, ಈ ಸಿನಿಮಾಗೂ ನಮ್ಮಗಳ ಜೀವನಕ್ಕೂ ತುಂಬಾ ಸಂಬಂಧವಿದೆ. ನಿಜ ಹೇಳಬೇಕು ಅಂದರೆ ಎಲ್ಲರ ಜೀವನದಲ್ಲೂ ಯಾವುದೋ ಒಂದು ಟೈಮ್‍ನಲ್ಲಿ ಕಥೆಯೊಂದು ಶುರು ಆಗಿರುತ್ತೆ. ಅದು ಪ್ರೇಮ ಕಥೆಯಾಗಿರಬಹುದು. ಹೀಗೆ ಲವ್ ಸ್ಟೋರಿ ಶುರುವಾದ ಗಳಿಯೇ ಈ ಸಿನಿಮಾ.

ಹಾಗಂತ ಮದುವೆಗೆ ಮುಂಚೆ ಆಗಿದ್ದ ಎಳೆ ವಯಸ್ಸಿನ ಪ್ರೀತಿ ಮಾತ್ರ ಅಲ್ಲ. ಗುರುತು ಪರಿಚಯ ಇಲ್ಲದವರು ಮದುವೆ ಆಗುತ್ತಾರಲ್ಲ. ಹೀಗೆ ಅಪ್ಪ-ಅಮ್ಮ ನಿಶ್ಚಯಿಸಿದವರೊಂದಿಗೆ ಮದುವೆ ಆದವರ ನಡುವೆಯೂ ನಂತರ ಪ್ರೀತಿ ಶುರುವಾಗುತ್ತೆ, ಅದೂ ಸಹ ಕಥೆಯೊಂದು ಶುರುವಾದ ಹಾಗೇನೆ.

ಈ ಸಿನಿಮಾದಲ್ಲಿ ನಮ್ಮ ನಾಯಕ ದಿಗಂತ್ ಒಂದು ರೆಸಾರ್ಟಿನ ಮಾಲೀಕ. ಹೇಳಿಕೊಳ್ಳೋಕೇನು ರೆಸಾರ್ಟ್​ ಆದರೆ ಈ ವ್ಯವಹಾರ ಅಷ್ಟು ಸರಿಯಾಗಿ ನಡೆಯುತ್ತಿರುವುದಿಲ್ಲ. ಇದಕ್ಕೂ ಮುಂಚೆ ಒಂದಷ್ಟು ಕಷ್ಟಗಳು
Loading...

ದಿಗ್ಗಿಯನ್ನ ದಿಗಿಲು ಬಡಿಸಿರುತ್ತವೆ. ಈ ಮಧ್ಯೆ ಎಂಟ್ರಿಯಾಗೋದೆ ಈ ಹುಡುಗಿ, 'ಕಥೆಯೊಂದು ಶುರುವಾಗಿದೆ'ಯ ನಾಯಕಿ ತಾನ್ಯಾ.

ಕಥೆಯೊಂದು ಶುರುವಾಗಿದೆ ಅನ್ನೊ ಶೀರ್ಷಿಕೆ, ಪ್ರೇಮ ಕಥೆ, ಚೆಂದದ ಹಾಡುಗಳು ಇರಲೇಬೇಕಲ್ಲವಾ ! ಹೌದು ಈ ಚಿತ್ರಕ್ಕಾಗಿ ಸಚಿನ್ ವಾರಿಯರ್ ಸೊಗಸಾದ ಟ್ಯೂನ್ಸ್ ಹಾಕಿಕೊಟ್ಟಿದ್ದಾರೆ. ಈಗಾಗಲೇ ಹಾಡುಗಳು ಸ್ಲೋ ಪಾಯ್ಸನ್ ಥರ ಎಲ್ಲರೊಳಗೆ ಇಳಿದು ಗುನುಗಿಸಿಕೊಳುತ್ತಾ ಇದೆ.

ಈ ಕಥೆ ಎಲ್ಲರಿಗೂ ತಾಕುವಂತೆ ಮೂಡಿಬರೋಕೆ ಕಾರಣ ನಿರ್ದೇಶಕ ಸೆನ್ನಾ ಹೆಗಡೆ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಈ ಚಿತ್ರ ಕೇವಲ ಮಲ್ಟಿಪ್ಲೆಕ್ಸ್ ಪ್ರೇಕ್ಷಕನಿಗಷ್ಟೇ ಅಲ್ಲ, ಪ್ರೀತಿಸುವ ಎಲ್ಲರಿಗೂ ರುಚಿಸಬೇಕು ಅಂತಲೇ ಒಂದು ಒಳ್ಳೆಯ ಟ್ಯೂನ್ ಆದ ನಂತರ ಚಿತ್ರೀಕರಣ ಶುರು ಮಾಡಿ ಈಗ ಮುದ್ದಾಗಿ ಮೂಡಿಬಂದಿದೆ.

ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ವಿಶೇಷ ಪ್ರೀಮಿಯರ್ ಶೋ ನೋಡಿರುವ ಕನ್ನಡದ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ಈ ವಾರ ನಮ್ಮಲ್ಲಿ `ಕಥೆಯೊಂದು ಶುರುವಾಗಿದೆ' ತೆರೆ ಕಾಣುತ್ತಿದ್ದು, ನಿಮ್ಮಿಂದಲೂ ಸೈ ಅನ್ನಿಸಿಕೊಳ್ಳೋಕೆ ನಿಮ್ಮ ಮುಂದೆ ಬರುತ್ತಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ