• Home
  • »
  • News
  • »
  • entertainment
  • »
  • ಈ ವಿಶೇಷ ದಿನದಂದೇ ರಿಲೀಸ್ ಆಯ್ತು ದಿಗಂತ್ ಅಭಿಯನ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಪೋಸ್ಟರ್​

ಈ ವಿಶೇಷ ದಿನದಂದೇ ರಿಲೀಸ್ ಆಯ್ತು ದಿಗಂತ್ ಅಭಿಯನ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಪೋಸ್ಟರ್​

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಪೋಸ್ಟರ್​ನಲ್ಲಿ ದಿಗಂತ್​

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಪೋಸ್ಟರ್​ನಲ್ಲಿ ದಿಗಂತ್​

Edagaiye Apaghatakke Karana: ದಿಗಂತ್ ಅವರ ಹೊಸ ಸಿನಿಮಾದ ಹೆಸರು ಎಡಗೈಯೇ ಅಪಘಾತಕ್ಕೆ ಕಾರಣ. ಇಂದು ಲೆಫ್ಟ್​ ಹ್ಯಾಂಡರ್ಸ್​ ಡೇ ಆಗಿರುವ ಕಾರಣದಿಂದಲೇ ಈ ವಿಶೇಷ ದಿನದಂದು ಈ ಚಿತ್ರ ಪೋಸ್ಟರ್ ಹಾಗೂ ಟೈಟಲ್​ ರಿವೀಲ್ ಮಾಡಲಾಗಿದೆ. ಈ ಕುರಿತಾಗಿ ನಿನ್ನೆಯೇ ದಿಗಂತ್ ಅವರು ಇನ್​​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ ಸುಳಿವು ನೀಡಿದ್ದರು.

ಮುಂದೆ ಓದಿ ...
  • Share this:

ಸ್ಯಾಂಡಲ್​ವುಡ್​ ನಟ ದಿಗಂತ್  (Diganth) ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಚಿತ್ರೀಕರಣ ಸಹ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಅವರ ಹೊಸ ಸಿನಿಮಾಗಳು ಸಹ ಅನೌನ್ಸ್​ ಆಗುತ್ತಿವೆ. ಸಿನಿಮಾ ಮಂದಿರಗಳು ಈಗಾಲೇ ತೆರೆದಿದ್ದು, ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೆ ಚಿತ್ರಮಂದಿರಗಳು ಪ್ರೇಕ್ಷಕರಿಗೆ ಸಂಪೂರ್ಣವಾಗಿ ಬಾಗಿಲು ತೆರೆಯಬಹುದು. ಆಗ ಕನ್ನಡದ ದೊಡ್ಡ ಬಜೆಟ್​ನ ಸಿನಿಮಾಗಳ ಜೊತೆಗೆ ಸಾಕಷ್ಟು ಚಿತ್ರಗಳು ತೆರೆ ಕಾಣಲಿವೆ. ಆಗಲೇ ದಿಗಂತ್ ಅಭಿನಯದ ಸಿನಿಮಾಗಳು ಒಂದರ ಹಿಂದೆ ಒಂದರಂತೆ ರಿಲೀಸ್ ಆಗಲಿವೆ. ಇನ್ನು ಇಂದು ಲೆಫ್ಟ್​ ಹ್ಯಾಂಡರ್ಸ್​ ದಿನ. ಇದರ ಅಂವಾಗಿ ದಿಗಂತ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್  ಪೋಸ್ಟರ್ ಅನ್ನು ರಿಲೀಸ ಮಾಡಲಾಗಿದೆ.


ದಿಗಂತ್ (Diganth) ಅವರ ಹೊಸ ಸಿನಿಮಾದ ಹೆಸರು ಎಡಗೈಯೇ ಅಪಘಾತಕ್ಕೆ (Edagaiye Apaghatakke Karana) ಕಾರಣ. ಇಂದು ಲೆಫ್ಟ್​ ಹ್ಯಾಂಡರ್ಸ್​ ಡೇ ಆಗಿರುವ ಕಾರಣದಿಂದಲೇ ಈ ವಿಶೇಷ ದಿನದಂದು ಈ ಚಿತ್ರ ಪೋಸ್ಟರ್ ಹಾಗೂ ಟೈಟಲ್​ ರಿವೀಲ್ ಮಾಡಲಾಗಿದೆ. ಈ ಕುರಿತಾಗಿ ನಿನ್ನೆಯೇ ದಿಗಂತ್ ಅವರು ಇನ್​​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ ಸುಳಿವು ನೀಡಿದ್ದರು.




ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​, ಡಾರ್ಕ್​ ಕಾಮಿಡಿ ಇರುವ ಸಿನಿಮಾ ಆಗಿದೆ. ಇದರಲ್ಲಿ ಲೆಫ್ಟ್​ ಹ್ಯಾಂಡರ್ಸ್​ಗಳು ಎದುರಿಸುವ ಸಮಸ್ಯೆಗಳ ಮೇಲೆ ಹೆಚ್ಚಾಗಿ ಗಮನ ಹರಿಸಲಾಗಿದೆ. ಈ ಚಿತ್ರಕ್ಕೂ ಮೊದಲು ಬೇರೆ ಒಂದು ಸಿನಿಮಾ ಮಾಡಬೇಕಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಆ ಸಿನಿಮಾದ ಕೆಲಸ ಆರಂಭವಾಗಲಿಲ್ಲ. ಅಷ್ಟರಲ್ಲಿ ಲೆಫ್ಟ್​ ಹ್ಯಾಂಡರ್ಸ್​ ಡೇ ಅಂಗವಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದ ಈ ಸಿನಿಮಾ ಮಾಡಲು ನಿರ್ಮಿಸಿದ್ದಾಗಿ ಚಿತ್ರದ ನಿರ್ದೇಶಕ ಸಮರ್ಥ್​ ಕಡಕೋಳ ಪತ್ರಿಕೆಯೊಂದಕ್ಕೆ ಇಂಗ್ಲಿಷ್​ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.




ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ತೋರಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್​ ಮಾಡಲಾಗಿದೆಯಂತೆ. ಈ ಸಿನಿಮಾಗಾಗಿ ದಿಗಂತ್ ಎಡಗೈ ಬಳಸು ರೀತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ.


ಇದನ್ನೂ ಓದಿ: Abhishek Bachchan: 45.75 ಕೋಟಿಗೆ ಐಷಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್..!


ಈ ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಿನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ದಿಗಂತ್​ ಕಲಿಯಬೇಕಾದ ಸಾಕಷ್ಟು ಹೊಸ ವಿಷಯಗಳಿವೆಯಂತೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


ಇದನ್ನೂ ಓದಿ: KGF Chapter 2 ಚಿತ್ರಕ್ಕೆ ಸಿಕ್ತು ಕೋಟಿ ಕೋಟಿ ಆಫರ್​: ಒಟಿಟಿಯಲ್ಲಿ ರಿಲೀಸ್​ ಆಗಲಿದೆಯಾ ಈ ಸಿನಿಮಾ..?


ದಿಗಂತ್ ಅವರು ಮಾರಿ ಗೋಲ್ಡ್​, ಗಾಳಿಪಟ 2 ಹಾಗೂ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ನಂತರ ಮೊದಲ ಬಾರಿಗೆ ದಿಗಂತ್ ಹಾಗೂ ಐಂದ್ರಿತಾ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಚಿತ್ರೀಕರಣದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. ಈ ಸಿನಿಮಾದ ಮೂಲಕ ದಿಗಂತ್ ಹಾಗೂ ಐಂದ್ರಿತಾ 8 ವರ್ಷಗಳ ನಂತರ ಮತ್ತೆ ಒಟ್ಟಿಗೆ ತೆರೆ ಮೇಲೆ ಬರಲಿದ್ದಾರೆ. ಇನ್ನು ಗಣೇಶ್ ಹಾಗೂ ಲೂಸಿಯಾ ಪವನ್ ಕುಮಾರ್ ಜತೆ ದಿಗಂತ್ ಮುಂಗಾರು ಮಳೆ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:Anitha E
First published: