Diganth: ಸ್ಪೈನಲ್​ ಕಾರ್ಡ್ ಇಂಜುರಿ ಅಂದ್ರೆ ಏನು? ಮತ್ತೆ ಮೊದಲಿನಂತೆ ಆಗ್ತಾರಾ ದೂದ್​ಪೇಡ ದಿಗಂತ್?

ನಟ ದಿಗಂತ್ ಅವರ ಸ್ಪೈನಲ್​ ಕಾರ್ಡ್ (Spinal Card)​ಗೆ ಇಂಜುರಿಯಾಗಿದೆ ಎಂದು ತಿಳಿದುಬಂದಿದೆ. ಸ್ಪೈನಲ್​ ಕಾರ್ಡ್ ಇಂಜುರಿ ಎಂದರೇನು? ಸ್ಪೈನಲ್​ ಡ್ಯಾಮೇಜ್​ ಆದ್ರೆ ಮತ್ತೆ ಮೊದಲಿನಂತೆ ಆಗಲು ಸಾಧ್ಯನಾ? ಮುಂದೆ ನೋಡಿ...

ನಟ ದಿಗಂತ್​

ನಟ ದಿಗಂತ್​

  • Share this:

ನಟ ದೂದ್ ಪೇಡಾ ದಿಗಂತ್​​ (Diganth) ಗೆ ಗಂಭೀರಗಾಯವಾಗಿದೆ. ಗೋವಾ  ದ ಸಮುದ್ರ ದಡದಲ್ಲಿ ಸಮ್ಮರ್​ ಸಾಲ್ಟ್​ ಜಂಪ್ (Summer Salt Jump)​ ಮಾಡುವ ವೇಳೆ ಆಯತಪ್ಪಿ ಬಿದ್ದು ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ಗೋವಾಗೆ ಪ್ರವಾಸ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ಮಾಹಿತಿ ತಿಳಿದುಬಂದಿದೆ. ಅವರನ್ನು ಗೋವಾ (Goa) ದಿಂದ ಬೆಂಗಳೂರಿಗೆ (Bengaluru) ಏರ್ ಲಿಫ್ಟ್ (Airlift) ಮಾಡಲಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದಕ್ಕೂ ಮುನ್ನ ಗೋವಾದಲ್ಲೇ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ  ವೈದ್ಯರು ಸರ್ಜರಿ (Operation) ಮಾಡಿಸಲೇ ಬೇಕು ಎಂದು ಸಲಹೆ ಕೊಟ್ಟ ಬಳಿಕ ಅವರನ್ನು ಬೆಂಗಳೂರಿಗೆ ಏರ್​ಲಿಫ್ಟ್​ ಮಾಡಲಾಗಿದೆ. ನಟ ದಿಗಂತ್ ಅವರ ಸ್ಪೈನಲ್​ ಕಾರ್ಡ್ (Spinal Card)​ಗೆ ಇಂಜುರಿಯಾಗಿದೆ ಎಂದು ತಿಳಿದುಬಂದಿದೆ. ಸ್ಪೈನಲ್​ ಕಾರ್ಡ್ ಇಂಜುರಿ ಎಂದರೇನು? ಸ್ಪೈನಲ್​ ಡ್ಯಾಮೇಜ್​ ಆದ್ರೆ ಮತ್ತೆ ಮೊದಲಿನಂತೆ ಆಗಲು ಸಾಧ್ಯನಾ? ಮುಂದೆ ನೋಡಿ...


ಐವರಿಗೆ ಸ್ಪೈನಲ್​ ಇಂಜುರಿ ಆದರೆ ಇಬ್ಬರ ಸಾವು!

ಬೆನ್ನುಹುರಿ ದೇಹದ ಪ್ರಮುಖ ಅಂಗಗಳಲ್ಲಿ ಒಂದು, ನಮ್ಮ ಇಡೀ ಶರೀರ ನೇರವಾಗಿ ನಿಲ್ಲಲು, ಚಲಿಸಲು ಹಾಗೂ ಚಟುವಟಿಕೆಯಿಂದ ಇರಲು ಬೆನ್ನುಹರಿಯೇ ಪ್ರಮುಖ ಸಾಧನ. ಇದಕ್ಕೆ ಯಾವುದೇ ಹಾನಿಯಾದರೂ ಇಡೀ ದೇಹ ಹಾಸಿಗೆ ಹಿಡಿಯಬೇಕಾಗುತ್ತದೆ. ಪ್ರತಿ ವರ್ಷ ಸುಮಾರು 5 ಲಕ್ಷ ವಯಸ್ಕರು ವಿವಿಧ ರೀತಿಯ ಬೆನ್ನುಹುರಿ ಗಾಯಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಗಾಯಗೊಂಡ 5 ಜನರಲ್ಲಿ ಇಬ್ಬರು ಮರಣ ಹೊಂದುತ್ತಿರುವುದು ಆತಂಕಕಾರಿ ವಿಷಯ. ಹೀಗಾಗಿ ಸ್ಪೈನಲ್ ಕಾರ್ಡ್ ಇಂಜುರಿ ಅಂದರೆ ವೈದ್ಯರು ಕೂಡ ಒಂದು  ಕ್ಷಣ ಗಾಬರಿಯಾಗುತ್ತಾರೆ.

ಬೆನ್ನುಹುರಿಗೆ ಗಾಯಕ್ಕೆ ಕಾರಣಗಳೇನು:

– ರಸ್ತೆ ಅಪಘಾತ

– ಮುನ್ನೆಚ್ಚರಿಕೆ ಇಲ್ಲದ ಕ್ರೀಡಾ ಚಟುವಟಿಕೆಗಳು

– ವಿದ್ಯುತ್ ಶಾಕ್ ಹೊಡೆಯುವುದು

– ಕುತ್ತಿಗೆ ಮೇಲೆ ಅತಿಯಾದ ಭಾರ ಹೊರುತ್ತಿರುವುದು

– ಬೆನ್ನುಹರಿಯಲ್ಲಿ ಸೋಂಕು ಅಥವಾ ಗಡ್ಡೆ, ಉರಿಯೂತ

– ಮೂಳೆ ಸವೆತ

ಇದನ್ನೂ ಓದಿ: ಪ್ರಾಣವನ್ನೇ ತೆಗೆದು ಬಿಡುತ್ತೆ ಡೆಡ್ಲಿ ಸಮ್ಮರ್​ ಶಾಟ್​​! ಅಷ್ಟೆಲ್ಲಾ ಕಲಿತಿದ್ದ ನಟ ದಿಗಂತ್​​ ಎಡವಿದ್ದೆಲ್ಲಿ?

3 ಗಂಟೆಗೂ ಹೆಚ್ಚು ಕಾಲ ನಡೆಯುತ್ತೆ ಆಪರೇಷನ್​!

ಈ ಸ್ಪೈನಲ್​ ಕಾರ್ಡ್ ಆಪರೇಷನ್​ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತೆ. ದಿಗಂತ್​ ಅವರಿಗೂ ಕೂಡ 3 ಗಂಟೆಗಳ ಕಾಲ ಆಪರೇಷನ್​ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಸ್ಪೈನಲ್​ ಕಾರ್ಡ್​ ಇಂಜುರಿ ಆದರೆ, ಆದ ಬೆಡ್​ ರಿಡ್ಡನ್​ ಎಂದೇ ಜನರು ಭಾವಿಸುತ್ತಾರೆ. ಆದರೆ, ಸ್ಪೈನಲ್​ ಕಾರ್ಡ್​ ಇಂಜುರಿಯಲ್ಲೂ ಹಲವು ಹಂತಗಳಿಗೆ. ಮೊದಲ ಹಂತವಾದರೆ ಆಪರೇಷನ್​ ಮಾಡಿ ಸರಿಮಾಡಬಹುದು. ಹೆಚ್ಚಾಗಿ ಸ್ಪೈನಲ್​ ಕಾರ್ಡ್ ಇಂಜುರಿಯಾದರೆ ಮತ್ತೆ ಆ ವ್ಯಕ್ತಿ ಓಡಾಡಲು ಕಷ್ಟವಾಗುತ್ತೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಐಂದ್ರಿತಾ-ದಿಗಂತ್! ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ಸರಿಯಾಗಿ ಸಮ್ಮರ್​ ಶಾಟ್​​ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ಎಲ್ಲೆಂದೆರಲ್ಲಿ ಮಾಡುವುದು ನಿಜಕ್ಕೂ ಡೇಂಜರ್​​. ಅದರಲ್ಲೂ ಎಲ್ಲಾ ಚೆನ್ನಾಗಿ ಕಲಿತಿದ್ದ ದಿಗಂತ್​ ಅವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋವಾ ಟ್ರಿಪ್​ಗೆ ತೆರಳಿದ್ದು. ಇಲ್ಲಿ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್​ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ . ಒಂದೇ ಒಂದು ಚೂರು ಕೂಡ ಎಡವಿದರು  ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಕ್ಕೆ ಕುತ್ತು ತರುತ್ತೆ ಈ ಸಮ್ಮರ್​ ಶಾಟ್​ ಈ ಹಿಂದೆ ಸಮ್ಮರ್​ ಶಾಟ್​ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದ.

Published by:Vasudeva M
First published: