• Home
  • »
  • News
  • »
  • entertainment
  • »
  • Diganth Manchale: ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದ ದಿಗಂತ್: ಸಖತ್ತಾಗಿದೆ ದಿಗಿ ಅಂದ್ರು ರಕ್ಷಿತ್​ ಶೆಟ್ಟಿ

Diganth Manchale: ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದ ದಿಗಂತ್: ಸಖತ್ತಾಗಿದೆ ದಿಗಿ ಅಂದ್ರು ರಕ್ಷಿತ್​ ಶೆಟ್ಟಿ

ನಟ ದಿಗಂತ್​

ನಟ ದಿಗಂತ್​

ದಸರಾ ಹಬ್ಬದ ಪ್ರಯುಕ್ತ ದಿಗಂತ್ ಹೊಸ ಸಿನಿಮಾದ ಪೋಸ್ಟರ್​ ರಿಲೀಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ವಿಭಿನ್ನ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ದಿಗಂತ್​ ಲುಕ್​ ಸಹ ಸಖತ್​ ಡಿಫರೆಂಟ್​ ಆಗಿದೆ.

  • Share this:

ನಟ ದಿಗಂತ್​ ಹಾಗೂ ಅವರ ಮಡದಿ ಐಂದ್ರಿತಾ ರೇ ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್​ ಮಾದಕ ವಸ್ತು ಪ್ರಕರಣದಿಂದಾಗಿ ಕೆಲ ಸಮಯ ಸುದ್ದಿಯಲ್ಲಿದ್ದರು. ಒಮ್ಮೆ ಐಂದ್ರಿತಾ ಹಾಗೂ ದಿಗಂತ್​ ಸಿಸಿಬಿ ಪೊಲೀಸರು ಮಾಡಿದ್ದ ವಿಚಾರಣೆಗೆ ಎದುರಿಸಿದ್ದರು. ನಂತರ ದಿಗಂತ್​ ಅವರನ್ನು ಎರಡನೇ ಸಲ ಸಹ ವಿಚಾರಣೆಗೆ ಕರೆಯಲಾಗಿತ್ತು. ದಿಗಂತ್​ ಹಾಗೂ ಆ್ಯಂಡಿಗೆ ರಾಗಿಣಿ ಆಪ್ತ ಸ್ನೇಹಿತೆ. ಡ್ರಗ್ಸ್​ ಪ್ರಕರಣದಲ್ಲಿ ರಾಗಿಣಿ ದ್ವಿವೇದಿ ಅವರ ಬಂಧನವಾಗುತ್ತಿದ್ದಂತೆಯೇ ದಿಗಂತ್​ ಹಾಗೂ ಐಂದ್ರಿತಾ ಸಹ ವಿಚಾರಣೆ ಎದುರಿಸಬೇಕಾಯಿತು. ಇದರಿಂದಾಗಿ ಈ ದಂಪತಿ ಕೆಲ ಸಮಯ ಆತಂಕದಲ್ಲಿದ್ದರು. ಇದೇ ಕಾರಣದಿಂದಲೇ ದಿಗಂತ್ ಆರಂಭದಲ್ಲಿ​ ತಮ್ಮ ಮಾರಿಗೋಲ್ಡ್​ ಸಿನಿಮಾ ಚಿತ್ರೀಕರಣಕ್ಕೂ ಹಾರಜರಾಗಿರಲಿಲ್ಲ. ಆದರೆ, ದಿನಕಳೆದಂತೆ ಮೆಲ್ಲನೆ ಸಹಜ ಸ್ಥಿತಿಗೆ ಮರಳಿದೆ ಈ ಸ್ಟಾರ್ ದಂಪತಿಯ ಜೀವನ. ಇನ್ನು ಇವರ ಸಿನಿಮಾ ವಿಷಯಕ್ಕೆ ಬಂದರೆ, ದಿಗಂತ್ ಕೈಯಲ್ಲಿ ಸಾಕಷ್ಟು ವಿಭಿನ್ನ ಸಿನಿಮಾಗಳಿವೆ. 


ದಸರಾ ಹಬ್ಬದ ಪ್ರಯುಕ್ತ ದಿಗಂತ್ ಹೊಸ ಸಿನಿಮಾದ ಪೋಸ್ಟರ್​ ರಿಲೀಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ವಿಭಿನ್ನ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ದಿಗಂತ್​ ಲುಕ್​ ಸಹ ಸಖತ್​ ಡಿಫರೆಂಟ್​ ಆಗಿದೆ.
ಇದು ನನ್ನ ಮುಂದಿನ ಚಲನಚಿತ್ರದ ಪೋಸ್ಟರ್ ಬಿಡುಗಡೆ. ಈ ಸಿನಿಮಾ ಸಾಗರಾದ (ನಮ್ಮೂರು) ಸಣ್ಣ ಹಳ್ಳಿಯ ಕಥೆಯಾಗಿದೆ. ವಿಜಯದಶಮಿ ಹಬ್ಬದ ಶುಭಾಶಯಗಳು ಎಂದು ದಿಗಂತ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟರ್​ ನೋಡಿ ರಕ್ಷಿತ್ ಶೆಟ್ಟಿ ಹಾಗೂ ಭುವನ್​ ಗೌಡ ಸಖತ್ತಾಗಿದೆ ಎನ್ನುತ್ತಿದ್ದಾರೆ.


Actor Diganth, Diganth new movie, kshamisi nimma katheyalli hanavilla movie, Diganth movies, ನಟ ದಿಗಂತ್, ದಿಗಂತ್ ಹೊಸ ಸಿನಿಮಾ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ, ದಿಗಂತ್ ಸಿನಿಮಾಗಳು, Diganth released the poster of his upcoming movie Kshamisi nimma khateli hanavilla 
ದಿಗಂತ್​ ಅವರ ಹೊಸ ಸಿನಿಮಾ ಪೋಸ್ಟರ್​


ಸಾಗರದ ಪುಟ್ಟಹಳ್ಳಿಯಲ್ಲಿ ನಡೆಯಲಿರುವ ಈ ಸಿನಿಮಾದ ಕಥೆಯಲ್ಲಿ ದಿಗಂತ್​ ಅಡಿಕೆ ವ್ಯಾಪಾರಿಯಾಗಿ ನಟಿಸುತ್ತಿದ್ದಾರೆ. ಈ ರೀತಿಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ದಿಗಂತ್​ ಅಭಿನಯಿಸುತ್ತಿದ್ದಾರೆ. ಇನ್ನು ದಿಗಂತ್​ ಅವರಿಗೆ ನಾಯಕಿಯಾಗಿ ಐಂದ್ರಿತಾ ರೇ ನಟಿಸಲಿದ್ದಾರಂತೆ.

View this post on Instagram

My hottie ❤️


A post shared by diganthmanchale (@diganthmanchale) on

ಸಿಲ್ಕ್​ ಮಂಜು ನಿರ್ಮಾಣದ ಈ ಸಿನಿಮಾವನ್ನು ವಿನಾಯಕ ಕೋಡ್ಸರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಐಂದ್ರಿತಾ ಜೊತೆ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್​ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ದಿಗಂತ್​ ಕೈಯಲ್ಲಿ ಸಖತ್ ವಿಭಿನ್ನವಾದ ಟೈಟಲ್​ ಇರುವ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚೆಗಷ್ಟೆ ದಿಗಂತ್​ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಗಣೇಶ್​ ಕ್ಯ್ಲಾಪ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹರಿಪ್ರಿಯಾ ದಿಗಂತ್​ಗೆ ಜೋಡಿಯಾಗಿದ್ದಾರೆ. ಇದರ ಜೊತೆಗೆ ಮಾರಿಗೋಲ್ಡ್​, ಗಾಳಿಪಟ 2, ವೇರ್​ ಇಸ್​ ಮೈ ಕನ್ನಡಕ, ಹುಟ್ಟುಹಬ್ಬದ ಶುಭಾಷಯಗಳು ಸಿನಿಮಾ ಸೇರಿದಂತೆ ಮತ್ತಷ್ಟು ಚಿತ್ರಗಳು ದಿಗಂತ್​ ಕೈಯಲ್ಲಿವೆ.

Published by:Anitha E
First published: