ದಿಗಂತ್​-ರಾಗಿಣಿ ಲಿಫ್ಟ್​ನಲ್ಲಿ ಮಾಡಿದ್ದೇನು: ಇದನ್ನು ನೋಡಿದ ಐಂದ್ರಿತಾ ದಂಗಾಗಿದ್ದು ಏಕೆ?

news18
Updated:August 18, 2018, 6:14 PM IST
ದಿಗಂತ್​-ರಾಗಿಣಿ ಲಿಫ್ಟ್​ನಲ್ಲಿ ಮಾಡಿದ್ದೇನು: ಇದನ್ನು ನೋಡಿದ ಐಂದ್ರಿತಾ ದಂಗಾಗಿದ್ದು ಏಕೆ?
news18
Updated: August 18, 2018, 6:14 PM IST
ನ್ಯೂಸ್​ 18 ಕನ್ನಡ 

ಲಿಫ್ಟ್​ನಲ್ಲಿ ಈ ಇಬ್ಬರು ನಟ-ನಟಿ ಮಾಡಿದ್ದೇನು..? ಇವರಿಬ್ಬರನ್ನ ನೋಡಿ ದಂಗಾದರಲ್ಲ ಈ ನಟಿ..!  ಅಷ್ಟಕ್ಕೂ ಇವರ ಮೋಜು ಮಸ್ತಿಗೆ ಕಾರಣ ಏನು..? ಏನಿದು ಕನ್ನಡದ ನಟ,ನಟಿಯರ ಈ ಲಿಫ್ಟ್​ ರಾಮಾಯಾಣ. 

ಸಿನಿ ಮಂದಿನೇ ಹಾಗೆ, ತಿಂಗಳಲ್ಲಿ ಒಂದಷ್ಟು ದಿನ ಚಿತ್ರೀಕರಣ, ಪ್ರಚಾರ ಅಂತೆಲ್ಲ ಓಡಾಡೋ ಅವರು, ಒಂದಷ್ಟು ಸಮಯವನ್ನ ತಮ್ಮ ಖಾಸಗೀ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಕುಟುಂಬ ಸದಸ್ಯರೊಂದಿಗೆ ಹಾಗೆ ತಮ್ಮ ಸ್ನೇಹಿತರೊಂದಿಗೆ ಸೇರಿ ಮೋಜು ಮಸ್ತಿ ಮಾಡುತ್ತಾ ಕಳೆಯುತ್ತಾರೆ. ಅಂತೇಯೇ ಇತ್ತೀಚೆಗೆ ಸ್ಯಾಂಡಲ್‍ವುಡ್‍ನ ಜೋಡಿ ಹಕ್ಕಿಗಳು ಹಾಗೂ ತುಪ್ಪದ ಬೆಡಗಿ ಒಟ್ಟಿಗೆ ಸೇರಿ ಫುಲ್ ಎಂಜಾಯ್ ಮಾಡಿದ್ದಾರೆ. ಅದು ಹೇಗೆ ಗೊತ್ತಾ..?

ಈಗಾಗಲೇ ಹೇಳಿರುವಂತೆ ಸಿನಿ ಮಂದಿ ತಮಗೆ ಸಿಗೋ ಒಂಚೂರು ಬಿಡುವಿನ ಸಮಯವನ್ನ ತಮಗೆ ಬೇಕಾದಂತೆ ಎಂಜಾಯ್ ಮಾಡುತ್ತಾರೆ. ಹಾಗೆ ನಟ ದಿಗಂತ್ ತಾವು ಅಭಿನಯಿಸಿರುವ 'ಕಥೆಯೊಂದು ಶುರುವಾಗಿದೆ' ಸಿನಿಮಾದ ರಿಲೀಸ್ ನಂತರ ಕೊಂಚ ಬಿಡುವಿನಲ್ಲಿದ್ದು, ಆ್ಯಂಡಿ ಜೊತೆ ಎಲ್ಲಾದರೂ ಹೋಗಣ ಅಂತ ಪ್ಲಾನ್ ಮಾಡಿದ್ದಾರೆ. ಹೀಗಿರಬೇಕಾದರೇನೆ ರಾಗಿಣಿ ಕೂಡ ಇವರೊಂದಿಗೆ ಸೇರಿಕೊಂಡು ಇಡೀ ದಿನ ಎಂಜಾಯ್ ಮಾಡಿದ್ದಾರೆ.

ಅದರಲ್ಲೂ ದಿಗಂತ್​ ಹಾಗೂ ರಾಗಿಣಿ ಲಿಫ್ಟ್​ನಲ್ಲಿ ಒಂದು ಸೈಲಿಷ್​ ಲುಕ್​ನಲ್ಲಿ ಫೋಟೋಗೆ ಫೋಸ್​ ನೀಡಿದ್ದು, ಇದನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಐಂದ್ರಿತಾ ಇವರ ಲುಕ್​ಗೆ ದಂಗಾಗಿದ್ದಾರಂತೆ.ಹೊರಗೆಲ್ಲ ಸುತ್ತಿ, ರೆಸ್ಟೊರೆಂಟ್‍ನಲ್ಲಿ ತಿಂಡಿ ಸವಿದಿದ್ದ ಇವರು, ಲಿಫ್ಟ್‍ನಲ್ಲೂ ಸುಮ್ಮನಿರಲಿಲ್ಲ. ರಾಗಿಣಿ ಆ್ಯಂಡಿಯನ್ನ ಗಟ್ಟಿಯಾಗಿ ತಬ್ಬಿ ಹಿಡಿದ್ದು, ಹಣೆಗೊಂದು ಮುತ್ತಿಟ್ಟಿದ್ದಾರೆ. ಇದೇ ಖುಷಿಗೆ ಆ್ಯಂಡಿ ಕೂಡ ತುಪ್ಪದ ಬೆಡಗಿಯನ್ನ ತಬ್ಬಿ ಹಿಡಿದಿದ್ದಾರೆ. ಇದೇ ವೇಳೆ ಕೈಯಲ್ಲಿ ಮೊಬೈಲ್ ಹಿಡಿದು ಅದೇನನ್ನೊ ಕುಟ್ಟುತ್ತಿದ್ದ ದಿಗಂತ್, ಇವರಿಬ್ಬರ ಫ್ರೆಂಡ್‍ಶಿಪ್ ಅನ್ನ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ... ಹೀಗೆ ದಿಗಂತ್ ಕೈಯಲ್ಲಿ ಸೆರೆಯಾದ ಈ ಫೋಟೋಗಳು ಈಗ ರಾಗಿಣಿ ಟ್ವಿಟ್ಟರ್​ನಲ್ಲಿ ಪೋಸ್ಟ್ ಆಗಿದ್ದು, ಸಾಕಷ್ಟು ಮೆಚ್ಚುಗೆಯನ್ನ ಗಿಟ್ಟಿಸಿಕೊಳ್ಳುತ್ತಿದೆ. ಅಲ್ಲದೇ ರಾಗಿಣಿ ಕೂಡ ಈ ಬ್ಯೂಟಿಫುಲ್ ಫೋಟೊಗಳಿಗೆ ದೀಸ್ ಟು ಫಾರೆವರ್ ಅಂತ ಬರೆದುಕೊಂಡಿದ್ದು, ತಮ್ಮ ಖುಷಿಯನ್ನ ತಮ್ಮ ಅಬಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
First published:August 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ